ಅತಿದೊಡ್ಡ ಸೌರ ಒಪ್ಪಂದವನ್ನು ತನ್ನದಾಗಿಸಿಕೊಂಡ ಅದಾನಿ ಗ್ರೀನ್ ಎನರ್ಜಿ
ಮುಂಬೈ, ಜೂನ್ 9: ಅದಾನಿ ಗ್ರೀನ್ ಎನರ್ಜಿ (ಎಜಿಇಎಲ್) ಸೌರಶಕ್ತಿ ಕಾರ್ಪೊರೇಷನ್ ಆಫ್ ಇಂಡಿಯಾದ ಅತಿದೊಡ್ಡ ಸೌರ ಒಪ್ಪಂದವನ್ನು ತನ್ನದಾಗಿಸಿಕೊಂಡಿದೆ. ಈ ಯೋಜನೆಯ ಭಾಗವಾಗಿ ಅದಾನಿ ಗ್ರೀನ್ ಎನರ್ಜಿ, ಮುಂದಿನ ಐದು ವರ್ಷಗಳಲ್ಲಿ 8 ಗಿಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುತ್ತದೆ ಎಂದು ಸಂಸ್ಥೆಯ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಈ ಬೆಳವಣಿಗೆಯಿಂದ ಅದಾನಿ ಗ್ರೀನ್ ಎನರ್ಜಿ ಷೇರುಗಳು ಮಂಗಳವಾರ ಬಿಎಸ್ಇಯಲ್ಲಿ ಶೇ 5 ರಷ್ಟು ಏರಿಕೆ ಕಂಡು 312.75 ರೂ.ಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ.
1,000 ಕೋಟಿಯ ಬಂಗಲೆ 400 ಕೋಟಿಗೆ ಖರೀದಿ; ಅದಾನಿ ಗ್ರೂಪ್ ಬಂಪರ್
ಈ ಒಪ್ಪಂದವು ವಿಶ್ವದಲ್ಲೇ ಅತ್ಯಂತ ದೊಡ್ಡದಾಗಿದೆ. ಇದು 45,000 ಕೋಟಿ ರೂ ಹೂಡಿಕೆಗೆ ಒಳಗಾಗುತ್ತದೆ ಮತ್ತು 400,000 ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಪ್ರಶಸ್ತಿ ಒಪ್ಪಂದದ ಆಧಾರದ ಮೇಲೆ, ಮುಂದಿನ ಐದು ವರ್ಷಗಳಲ್ಲಿ 8 ಗಿಗಾ ವ್ಯಾಟ್ ಸೌರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗುವುದು. ಉತ್ಪಾದನಾ ಸಾಮರ್ಥ್ಯದ ಮೊದಲ 2 ಗಿಗಾ ವ್ಯಾಟ್ 2022 ರ ವೇಳೆಗೆ ಬರಲಿದೆ ಮತ್ತು ನಂತರದ 6 ಗಿಗಾ ವ್ಯಾಟ್ 2025 ರ ವೇಳೆಗೆ ಉತ್ಪಾದನೆ ಆಗುತ್ತದೆ ಎಂದು ಅದಾನಿ ಗ್ರೀನ್ ಎನರ್ಜಿ ತಿಳಿಸಿದೆ.