For Quick Alerts
ALLOW NOTIFICATIONS  
For Daily Alerts

ಅದಾನಿ ಗ್ರೂಪ್‌ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್‌ಬರ್ಗ್ ಹೇಳುವುದೇನು?

|

ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ ಮಾಡಿದ ಹಿಂಡನ್‌ಬರ್ಗ್ ವರದಿಯನ್ನು ಅದಾನಿ ಗ್ರೂಪ್ ಖಂಡನೆ ಮಾಡಿದೆ. ಸುಮಾರು 413 ಪುಟಗಳಲ್ಲಿ ಹಿಂಡನ್‌ಬರ್ಗ್ ವರದಿಗೆ ಪ್ರತಿಕ್ರಿಯೆಯನ್ನು ಅದಾನಿ ಗ್ರೂಪ್ ಬಿಡುಗಡೆ ಮಾಡಿದ್ದು, ಈ ವರದಿಯು ಭಾರತದ ಮೇಲೆ ನಡೆಸಲಾಗಿರುವ ದಾಳಿ ಎಂದು ಹೇಳಿದೆ. ಅದಾನಿ ಗ್ರೂಪ್ ಪ್ರತಿಕ್ರಿಯೆಗೆ ಹಿಂಡನ್‌ಬರ್ಗ್ ಕೂಡಾ ಮರುಪ್ರತಿಕ್ರಿಯೆ ನೀಡಿದೆ.

ಯುಎಸ್ ಮೂಲಕ ಹಿಂಡಬ್‌ಬರ್ಗ್ ತನಿಖಾ ವರದಿಯು ಭಾರತದ ಅದಾನಿ ಗ್ರೂಪ್ ಮೇಲೆ ಮಾಡಿರುವ ವಂಚನೆಯ ಆರೋಪದ ವಿರುದ್ಧ ಭಾನುವಾರ ರಾತ್ರಿ ವೇಳೆಯಲ್ಲಿ ಅದಾನಿ ಗ್ರೂಪ್ ಪ್ರತಿಕ್ರಿಯೆ ನೀಡಿದೆ. ಈ ವರದಿಯು "ಭಾರತದ ಮೇಲಿನ ದಾಳಿ ಮತ್ತು ಭಾರತದ ಸ್ವತಂತ್ರ ಸಂಸ್ಥೆಗಳ ಮೇಲಿನ ದಾಳಿ" ಎಂದು ಅದಾನಿ ಗ್ರೂಪ್ ಸೋಮವಾರ ನೀಡಿದ 413 ಪುಟಗಳ ಪ್ರತಿಕ್ರಿಯೆಯಲ್ಲಿ ಉಲ್ಲೇಖ ಮಾಡಿದೆ.

ಅದಾನಿ ಗ್ರೂಪ್‌ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್‌ಗಳುಅದಾನಿ ಗ್ರೂಪ್‌ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್‌ಗಳು

ಸೋಮವಾರ ಷೇರು ಮಾರುಕಟ್ಟೆ ತೆರೆಯುವುದಕ್ಕೂ ಮುನ್ನವೇ ಅದಾನಿ ಗ್ರೂಪ್ ಈ ಪ್ರತಿಕ್ರಿಯೆ ನೀಡಿದೆ. ಈ ಆರೋಪವು ಆಧಾರ ರಹಿತವಾಗಿದೆ ಮತ್ತು ಮಾರುಕಟ್ಟೆಯಲ್ಲಿ ಗೊಂದಲ ಹುಟ್ಟುಹಾಕಲು ಈ ವರದಿಯನ್ನು ಮಾಡಲಾಗಿದೆ, ಯುಎಸ್‌ ಸಂಸ್ಥೆಗಳು ಲಾಭವನ್ನು ಪಡೆಯುವ ನಿಟ್ಟಿನಲ್ಲಿ ಈ ವರದಿಯನ್ನು ಮಾಡಲಾಗಿದೆ ಎಂದು ಅದಾನಿ ಗ್ರೂಪ್ ಹೇಳಿಕೊಂಡಿದೆ.

 ಭಾರತದ ಮೇಲಿನ ದಾಳಿ

ಭಾರತದ ಮೇಲಿನ ದಾಳಿ

"ಈ ವರದಿಯು ಒಂದು ನಿರ್ದಿಷ್ಟ ಸಂಸ್ಥೆಯ ಮೇಲೆ ನಡೆಸಿರುವ ದಾಳಿಯಲ್ಲ, ಬದಲಾಗಿ ಭಾರತದ ಮೇಲೆ ಎಲ್ಲ ತಯಾರಿಯ ಮೂಲಕ ನಡೆಸಲಾಗಿರುವ ದಾಳಿಯಾಗಿದೆ. ಭಾರತದ ಸ್ವಾತಂತ್ರ್ಯ, ಏಕತೆ, ಭಾರತದ ಸಂಸ್ಥೆಗಳ ಗುಣಮಟ್ಟ ಮತ್ತು ಭಾರತದ ಸಂಸ್ಥೆಗಳ ಬೆಳವಣಿಗೆ, ಭಾರತದ ಮುಂದಿನ ದೃಷ್ಟಿಕೋನದ ಮೇಲೆ ನಡೆಸಲಾಗಿರುವ ದಾಳಿಯಾಗಿದೆ," ಎಂದು ಅದಾನಿ ಗ್ರೂಪ್ ತಿಳಿಸಿದೆ. ಹಿಂಡನ್‌ಬರ್ಗ್ ವರದಿ ಭಾರತದ ನ್ಯಾಯಾಂಗ ಮತ್ತು ನಿಯಮದ ಚೌಕಟ್ಟನ್ನು ಕಡೆಗಣನೆ ಮಾಡಿದೆ ಎಂದು ಅದಾನಿ ಗ್ರೂಪ್ ಹೇಳಿದೆ.

"ನಾವು ನ್ಯಾಯಾಂಗ ಕ್ರಮವನ್ನು ಕೈಗೊಳ್ಳುತ್ತೇವೆ. ನಮ್ಮ ಸ್ಟೇಕ್ ಹೋಲ್ಡರ್‌ಗಳನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮವನ್ನು ನಾವು ಕೈಗೊಳ್ಳುತ್ತೇವೆ. ಹಿಂಡನ್‌ಬರ್ಗ್ ವರದಿಯಾಗಲಿ ಅಥವಾ ಬೇರೆ ಯಾವುದೇ ಆರೋಪಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು ನಾವು ನೀಡಲು ಸಿದ್ಧರಾಗಿದ್ದೇವೆ," ಎಂದು ಹೇಳಿದೆ. ಹಾಗೆಯೇ ಅದಾನಿ ಗ್ರೂಪ್‌ ಹಿಂಡನ್‌ಬರ್ಗ್ ವರದಿಯ 88 ಪ್ರಶ್ನೆಗಳನ್ನು ತಳ್ಳಿಹಾಕಿದೆ. "ಈ ವರದಿಯು ವದಂತಿಗಳಿಗೆ ಬಣ್ಣ ಹಚ್ಚುವಂತದ್ದು, ಸಂಪೂರ್ಣವಾಗಿ ಸ್ವಾರ್ಥದಿಂದ ಈ ವರದಿ ಮಾಡಲಾಗಿದೆ," ಎಂದು ಅದಾನಿ ಗ್ರೂಪ್ ತಿಳಿಸಿದೆ.

 

 ಹಿಂಡನ್‌ಬರ್ಗ್ ಹೇಳುವುದೇನು?

ಹಿಂಡನ್‌ಬರ್ಗ್ ಹೇಳುವುದೇನು?

"ಅದಾನಿ ಗ್ರೂಪ್ ತಮ್ಮ ಸಂಸ್ಥೆಗೆ ಚೈನೀಸ್ ರಾಷ್ಟ್ರದೊಂದಿಗೆ (ಚಂಗ್ ಚುಂಗ್-ಲಿಂಗ್) ಇರುವ ಸಂಬಂಧದ ಬಗ್ಗೆ ಯಾವುದೇ ಸ್ಪಷ್ಟಣೆಯನ್ನು ನೀಡುವ ಪ್ರಯತ್ನವನ್ನು ಕೂಡಾ ಮಾಡಿಲ್ಲ. ನಮ್ಮ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆಯನ್ನು ಕೂಡಾ ನೀಡಿಲ್ಲ. ವಿನೋದ್ ಅದಾನಿ (ಗೌತಮ್ ಅದಾನಿಯ ಹಿರಿಯ ಸಹೋದರ) ಮತ್ತು ಚಂಗ್‌ ಚುಂಗ್-ಲಿಂಗ್ ಅಥವಾ ಚೈನೀಸ್ ದೇಶದ ಗ್ರೂಪ್‌ಗಳ ನಡುವೆ ಯಾವ ನಂಟಿದೆ ಎಂಬ ಬಗ್ಗೆ ಅದಾನಿ ಗ್ರೂಪ್ ಪ್ರತಿಕ್ರಿಯಿಸಿಲ್ಲ. ಬದಲಾಗಿ ಬರೀ ಅದಾನಿ ಗ್ರೂಪ್ ಘಟಕಗಳ ಬಗ್ಗೆ ಹೇಳಿದೆ. ನಾವು ವಂಚನೆ ಮತ್ತು ಮನಿ ಲಾಂಡರಿಂಗ್ ಹಗರಣಗಳ ಬಗ್ಗೆ ವಿವರಿಸಿದ್ದೇವೆ ಸೆಬಿ ನಿಯಮದ ಉಲ್ಲಂಘನೆಯನ್ನು ಕೂಡಾ ಉಲ್ಲೇಖಿಸಿದ್ದೇವೆ," ಎಂದು ಹಿಂಡನ್‌ಬರ್ಗ್ ತನ್ನ ಪ್ರತಿಕ್ರಿಯೆಯಲ್ಲಿ ಹೇಳಿದೆ.

 ಮಾರುಕಟ್ಟೆ ಮೇಲಿನ ಪ್ರಭಾವ

ಮಾರುಕಟ್ಟೆ ಮೇಲಿನ ಪ್ರಭಾವ

ಹಿಂಡನ್‌ಬರ್ಗ್ ವರದಿಯು ಬೆಳಕಿಗೆ ಬಂದ ಬಳಿಕ ಅದಾನಿ ಎಂಟರ್‌ಪ್ರೈಸಸ್ ಷೇರು ಶೇಕಡ 20ರಷ್ಟು ಕುಸಿತ ಕಂಡಿದೆ. ಜನವರಿ 23ರಿಂದ 27ರ ನಡುವಿನ ವಾರದಲ್ಲಿ ಈ ಬೆಳವಣಿಗೆ ಕಂಡು ಬಂದಿದೆ. ಆದರೆ ಹಿಂಡನ್‌ಬರ್ಗ್ ವರದಿಯನ್ನು ಅದಾನಿ ಗ್ರೂಪ್ ಮುಖ್ಯ ಹಣಕಾಸು ಅಧಿಕಾರಿ ಜಗ್ಗೆಶಿಂದರ್ ಸಿಂಗ್ ಖಂಡನೆ ಮಾಡಿದ ಬಳಿಕ ಈಗ ಸ್ಟಾಕ್ ಕೊಂಚ ಚೇತರಿಕೆಯನ್ನು ಕಂಡಿದೆ. ಜನವರಿ 30ರಂದು ಅದಾನಿ ಎಂಟರ್‌ಪ್ರೈಸಸಸ್ ಸ್ಟಾಕ್ ಶೇಕಡ 10ರಷ್ಟು ಜಿಗಿದಿದೆ. ಬೆಳ್ಳಿಗ್ಗೆ 09:43 ಸುಮಾರಿಗೆ ಸ್ಟಾಕ್ 204.15 ರೂಪಾಯಿ ಅಥವಾ ಶೇಕಡ 7.39ರಷ್ಟು ಏರಿಕೆಯಾಗಿ 2,966.30 ರೂಪಾಯಿಗೆ ತಲುಪಿದೆ. ಹಾಗೆಯೇ ವಹಿವಾಟಿನ ನಡುವೆ 3,038.35 ರೂಪಾಯಿಯಷ್ಟು ಏರಿಕೆ, 2,771.05 ರೂಪಾಯಿಯಷ್ಟು ಇಳಿಕೆಯನ್ನು ಕಂಡಿದೆ.

English summary

Adani Group rebuttal: Hindenburg responds to Adani's 413-page rebuttal, details here

The Hindenburg Research has on January 30 responded to Adani Group's rebuttal to its allegations, calling it an "attempt to obfuscate by nationalism".
Story first published: Monday, January 30, 2023, 11:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X