For Quick Alerts
ALLOW NOTIFICATIONS  
For Daily Alerts

ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಆದಿತ್ಯ ಪುರಿ ನಿವೃತ್ತಿ, ಶಶಿಧರ್ ಜಗದೀಶನ್ ನೂತನ ಎಂಡಿ-ಸಿಇಒ

|

ಮುಂಬೈ, ಅಕ್ಟೋಬರ್ 27: ಕಳೆದ 26 ವರ್ಷಗಳಿಂದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆದಿತ್ಯ ಪುರಿ ಸೋಮವಾರ ನಿವೃತ್ತರಾದರು. ಅವರ ಸ್ಥಾನದಲ್ಲಿ ಶಶಿಧರ್ ಜಗದೀಶನ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಭಾರತದ ಅತಿ ದೊಡ್ಡ ಖಾಸಗಿ ವಲಯಸ ಬ್ಯಾಂಕ್ ಎನಿಸಿಕೊಂಡಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕಾರ್ಪೊರೇಟ್ ಕೇಂದ್ರ ಕಚೇರಿಯಲ್ಲಿ ಸೋಮವಾರ ಸಂಜೆ 5.30ರ ವೇಳೆಗೆ ಶಶಿಧರ್ ಜಗದೀಶನ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಕಚೇರಿಯಲ್ಲಿ ಕೊನೆಯ ದಿನ ತಮ್ಮ ಆನ್‌ಲೈನ್‌ನಲ್ಲಿ ಸಹೋದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ 70 ವರ್ಷ ಪುರಿ, ಉದ್ಯೋಗಿಗಳನ್ನು ಕೇಂದ್ರೀಕರಣ ಮಾಡುವ ನಿಟ್ಟಿನಲ್ಲಿ ಬ್ಯಾಂಕ್‌ ಕಟ್ಟುವ ಪ್ರಯಾಣದ ಬಗ್ಗೆ ಅನುಭವ ಹಂಚಿಕೊಂಡರು. 25 ವರ್ಷಗಳ ಹಿಂದೆ ಲೋವರ್ ಪ್ಯಾರೆಲ್‌ನ ಕಮಲಾ ಮಿಲ್ಸ್ ಕಾಂಪೌಂಡ್‌ನಲ್ಲಿ ಚಿಕ್ಕ ಕಚೇರಿಯಲ್ಲಿ ಬ್ಯಾಂಕ್‌ನ ಮೊದಲ ಮುಖ್ಯಸ್ಥರಾಗಿ ಕೆಲಸ ಆರಂಭಿಸಿದ ಪುರಿ, ಈಗ ಸುಮಾರು 1.20 ಲಕ್ಷ ಉದ್ಯೋಗಿಗಳನ್ನು ಹೊಂದಿರುವಷ್ಟು ದೊಡ್ಡದಾಗಿ ಬ್ಯಾಂಕ್‌ಅನ್ನು ಬೆಳೆಸಿದ್ದಾರೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ಎಂಡಿ-ಸಿಇಒ ಆದಿತ್ಯ ಪುರಿ ನಿವೃತ್ತಿ

ಖಾಸಗಿ ಬ್ಯಾಂಕುಗಳ ಸಿಇಒಗಳ ಅಧಿಕಾರಾವಧಿ 70 ವರ್ಷವನ್ನು ಮೀರಬಾರದು ಎಂಬ ಆರ್‌ಬಿಐ ನಿಯಮಕ್ಕೆ ಅನುಗುಣವಾಗಿ ಪುರಿ ನಿವೃತ್ತರಾಗಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ 30 ವರ್ಷಕ್ಕೂ ಹೆಚ್ಚು ಅನುಭವ ಇರುವ ಪುರಿ ಅವರು, 1996ರಿಂದ ಎಚ್‌ಡಿಎಫ್‌ಸಿಯ ಭಾಗವಾಗಿದ್ದಾರೆ.

ಎಚ್‌ಡಿಎಫ್‌ಸಿಯ ಪ್ರತಿಸ್ಪರ್ಧಿಯಾದ ಐಸಿಐಸಿಐ ಬ್ಯಾಂಕ್ ಕೂಡ ಆದಿತ್ಯ ಪುರಿ ಅವರ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದೆ. 'ಭಾರತೀಯ ಬ್ಯಾಂಕಿಂಗ್ ಕ್ಷೇತ್ರಕ್ಕೆ ನಿಮ್ಮ ಕೊಡುಗೆಗಾಗಿ ಧನ್ಯವಾದಗಳು. ಹಲವು ದಶಕಗಳ ನಿಮ್ಮ ವೃತ್ತಿ ಜೀವನದಲ್ಲಿ ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ. ನಿಮ್ಮ ಭವಿಷ್ಯದ ದಿನಗಳಿಗೆ ಶುಭವಾಗಲಿ' ಎಂದು ಐಸಿಐಸಿಐ ಟ್ಟೀಟ್ ಮಾಡಿದೆ.

English summary

Aditya Puri Retires Hands Over Charge To Sashidhar Jagdishan As HDFC Bank MD-CEO

Aditya Puri who was HDFC Bank MD and CEO for 26 years retired on Monday and handed over charge to Shashidhar Jagdishan.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X