For Quick Alerts
ALLOW NOTIFICATIONS  
For Daily Alerts

ಸಿಹಿಸುದ್ದಿ: ಹಬ್ಬದ ಸೀಸನ್‌ ನಡುವೆ ಅಡುಗೆ ಎಣ್ಣೆ ಬೆಲೆ ಇಳಿಕೆ

|

ಹಬ್ಬದ ಸೀಸನ್‌ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯು ಜನರಿಗೆ ತಲೆ ನೋವು ಉಂಟು ಮಾಡಿದೆ. ದೀಪಾವಳಿ ಸಂದರ್ಭದಲ್ಲಿ ಕಾರು ಹಾಗೂ ಮೊಬೈಲ್‌ ಫೋನ್‌ಗಳನ್ನು ಖರೀದಿ ಮಾಡಬೇಕು ಎಂದು ಅಂದುಕೊಂಡಿದ್ದವರಿಗೆ ಈ ಹಬ್ಬದ ಸೀಸನ್‌ ನಡುವೆ ಬೆಲೆ ಏರಿಕೆ ಆಗಲಿದೆ ಎಂಬ ಸುದ್ದಿ ಕೇಳಿ ಬೇಸರವಾಗಿದೆ. ಆದರೆ ಈಗ ನಿಮಗೊಂದು ಸಿಹಿ ಸುದ್ದಿ ಇದೆ.

 

ಕಳೆದ ತಿಂಗಳಿಗಿಂತ ಅಡುಗೆ ಎಣ್ಣೆಯ ಬೆಲೆಯು ಈಗ ಕೊಂಚ ಕಡಿಮೆ ಆಗು‌ತ್ತಿದೆ. ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಕಡಿಮೆ ಆದ ಹಿನ್ನೆಲೆಯಲ್ಲಿ ಈ ಅಡುಗೆ ಎಣ್ಣೆಯ ಬೆಲೆಯು ಇಳಿಕೆ ಕಂಡಿದೆ. ಇನ್ನು ದಾಸ್ತಾನುಗಳನ್ನು ಕಾಪಾಡಿಕೊಳ್ಳಲು ಮತ್ತು ಅಗತ್ಯ ಅಡುಗೆ ವಸ್ತುಗಳ ಸಂಗ್ರಹಣೆಯನ್ನು ತಡೆಯಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶನದ ಹಿನ್ನೆಲೆಯಲ್ಲಿ ಭಾರತದಲ್ಲಿ ಅಡುಗೆ ಎಣ್ಣೆಯ ಬೆಲೆಯು ಕಡಿಮೆ ಆಗುತ್ತಲಿದೆ ಎಂದು ವರದಿಯು ಉಲ್ಲೇಖ ಮಾಡಿದೆ.

ದೀಪಾವಳಿ ನಡುವೆ ಕಾರು, ಮೊಬೈಲ್‌ ಫೋನ್‌ ದುಬಾರಿ!, ಕಾರಣವೇನು?ದೀಪಾವಳಿ ನಡುವೆ ಕಾರು, ಮೊಬೈಲ್‌ ಫೋನ್‌ ದುಬಾರಿ!, ಕಾರಣವೇನು?

ಈ ಹಿಂದಿನ ತಿಂಗಳು ಅಡುಗೆ ಎಣ್ಣೆಗಳ ಬೆಲೆಯು ಭಾರತದಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿತ್ತು. ಸೋಯಾಬಿನ್‌ ಎಣ್ಣೆಯ ಸಗಟು ಬೆಲೆಯು ಲೀಟರ್‌ಗೆ 142 ರೂಪಾಯಿ ಆಗಿತ್ತು. ಪಾಮ್‌ ಆಯಿಲ್‌ ಬೆಲೆಯು ಲೀಟರ್‌ಗೆ 130 ರೂಪಾಯಿ ಆಗಿತ್ತು. ಸೂರ್ಯಕಾಂತಿ ಎಣ್ಣೆಯ ಬೆಲೆಯು ಲೀಟರ್‌ಗೆ 147 ರೂಪಾಯಿ ಆಗಿತ್ತು. ಹಾಗಾದರೆ ಈಗ ಅಡುಗೆ ಎಣ್ಣೆಯ ಬೆಲೆಯು ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ.

 ಈಗ ಅಡುಗೆ ಎಣ್ಣೆಯ ಬೆಲೆ ಎಷ್ಟಿದೆ?

ಈಗ ಅಡುಗೆ ಎಣ್ಣೆಯ ಬೆಲೆ ಎಷ್ಟಿದೆ?

ಪ್ರಸ್ತುತ ಆಮದು ಸುಂಕ ಕಡಿಮೆ ಆದ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆಯ ಬೆಲೆಯು ಕೊಂಚ ಇಳಿಕೆ ಕಂಡಿದೆ. ಕಳೆದ ತಿಂಗಳು ಸೋಯಾಬಿನ್‌ ಎಣ್ಣೆಯ ಸಗಟು ಬೆಲೆಯು ಲೀಟರ್‌ಗೆ 142 ರೂಪಾಯಿ ಆಗಿತ್ತು. ಆದರೆ ಈಗ ಲೀಟರ್‌ಗೆ 129 ರೂಪಾಯಿಗೆ ಇಳಿಕೆ ಕಂಡಿದೆ. ಇನ್ನು ಲೀಟರ್‌ಗೆ 130 ರೂಪಾಯಿ ಆಗಿದ್ದ ಪಾಮ್‌ ಆಯಿಲ್‌ ಬೆಲೆಯು ಈಗ ಲೀಟರ್‌ಗೆ 121 ರೂಪಾಯಿಗೆ ಇಳಿದಿದೆ. ಸೂರ್ಯಕಾಂತಿ ಎಣ್ಣೆಯ ಬೆಲೆಯು ಲೀಟರ್‌ಗೆ 147 ರೂಪಾಯಿ ಆಗಿತ್ತು. ಆದರೆ ಈಗ ಲೀಟರ್‌ಗೆ 138 ರೂಪಾಯಿ ಆಗಿದೆ. ಈ ನಡುವೆ ಸಾಸಿವೆ ಎಣ್ಣೆಯ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಫೆಬ್ರವರಿ-ಮಾರ್ಚ್‌ನಲ್ಲಿ ಸಾಸಿವೆಯ ಹೊಸ ಬೆಲೆ ಬರುವವರೆಗೂ ಬೆಲೆ ಇಳಿಕೆಯ ಸಾಧ್ಯತೆ ಕಡಿಮೆಯಾಗಿದೆ. ಮುಂಬರುವ ಹಬ್ಬದ ಸಂದರ್ಭದಲ್ಲಿ ಖಾದ್ಯ ತೈಲಗಳ ಬೆಲೆಗಳಲ್ಲಿ ಹಠಾತ್ ಏರಿಕೆಯು ಅಸಾಧ್ಯ ಎಂದು ಉದ್ಯಮದ ಅಧಿಕಾರಿಗಳು ಹೇಳಿದ್ದಾರೆ.

 ಬೆಲೆ ಏರಿಕೆಯ ಸಾಧ್ಯತೆ ಇಲ್ಲ
 

ಬೆಲೆ ಏರಿಕೆಯ ಸಾಧ್ಯತೆ ಇಲ್ಲ

"ಆಮದು ಸುಂಕವು ಕಡಿಮೆ ಆದ ಕಾರಣದಿಂದಾಗಿ ಕಳೆದ ಒಂದು ತಿಂಗಳಿನಲ್ಲಿ ಆಮದು ಮಾಡಿಕೊಂಡ ತೈಲಗಳ ಬೆಲೆಗಳು ಶೇಕಡ 5 ರಿಂದ 9 ರಷ್ಟು ಇಳಿಕೆ ಕಂಡಿದೆ. ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ನೀಡಿದ ಆದೇಶದಿಂದಾಗಿ ಈ ಹಬ್ಬದ ಸೀಸನ್‌ನಲ್ಲಿ ಅಡುಗೆ ತೈಲದ ಬೆಲೆಯು ಸ್ಥಿರವಾಗಿ ಇರಲಿದೆ. ಈಗ ಬೆಲೆಯು ಇಳಿಕೆ ಕಾಣುತ್ತಿದೆ. ಹಠತ್ತಾಗಿ ಬೆಲೆ ಏರಿಕೆ ಆಗುವುದು ಕಂಡು ಬರುವುದಿಲ್ಲ. ಖಾರಿಫ್ ಎಣ್ಣೆಕಾಳುಗಳು ಮಾರುಕಟ್ಟೆಗೆ ಬರಲಾರಂಭಿಸಿದೆ. ಅದರಿಂದಾಗಿ ಸೋಯಾಬೀನ್‌ ತೈಲ ಬೆಲೆಗಳು ನಿಯಂತ್ರಣವಾಗಲಿದೆ" ಎಂದು ತರಕಾರಿ ತೈಲ ಬ್ರೋಕರ್ ಸನ್ವಿನ್ ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಸಂದೀಪ್‌ ಬಜೋರಿಯಾ ಹೇಳಿದ್ದಾರೆ.

ಜಾಗತಿಕ ಚೇತರಿಕೆ ಆಶಾವಾದ: ಕಚ್ಚಾ ತೈಲ ಬೆಲೆ, ಬ್ಯಾರೆಲ್‌ಗೆ  ಏರಿಕೆಜಾಗತಿಕ ಚೇತರಿಕೆ ಆಶಾವಾದ: ಕಚ್ಚಾ ತೈಲ ಬೆಲೆ, ಬ್ಯಾರೆಲ್‌ಗೆ ಏರಿಕೆ

 ಕೇಂದ್ರದಿಂದ ದಾಸ್ತಾನು ಮಿತಿ ಆದೇಶ

ಕೇಂದ್ರದಿಂದ ದಾಸ್ತಾನು ಮಿತಿ ಆದೇಶ

ಅಕ್ಟೋಬರ್‌ 12 ರಂದು ಉತ್ತರ ಪ್ರದೇಶ ಸರ್ಕಾರವು ದಾಸ್ತಾನು ಮಿತಿ ಆದೇಶವನ್ನು ಹೊರಡಿಸಿದೆ. ಈ ನಿಟ್ಟಿನಲ್ಲಿ ಅಡುಗೆ ಎಣ್ಣೆ ಬೆಲೆಯು ಕಡಿಮೆ ಆಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿತ್ತು. ಇತರ ರಾಜ್ಯಗಳು ಆದ ರಾಜಸ್ಥಾನ, ಗುಜರಾತ್‌, ಹರಿಯಾಣ ದಾಸ್ತಾನು ಮಿತಿಯನ್ನು ಶೀ‌ಘ್ರವೇ ಜಾರಿಗೆ ತರುವ ಸಾಧ್ಯತೆ ಇದೆ ಎಂದು ಉದ್ಯಮ ಮೂಲಗಳು ತಿಳಿಸಿದೆ. ಸೋಮವಾರ ಕೇಂದ್ರ ಸರ್ಕಾರವು, ಖಾದ್ಯ ಎಣ್ಣೆಗಳ ದಾಸ್ತಾನು ಮಿತಿಯ ಬಗ್ಗೆ ಆದೇಶವನ್ನು ನೀಡುವ ಕಾರ್ಯವನ್ನು ಶೀಘ್ರವೇ ಮಾಡಿ ಎಂದು ತಿಳಿಸಿದೆ. ಹಾಗೆಯೇ ಸರ್ಕಾರವು ಆಮದು ಸುಂಕವನ್ನು ಕೂಡಾ ಇಳಿಕೆ ಮಾಡಿದೆ.

ಸದ್ಯದಲ್ಲೇ ಅಡುಗೆ ಎಣ್ಣೆ ಬೆಲೆ 10 ಪರ್ಸೆಂಟ್ ಇಳಿಕೆ ಸಾಧ್ಯತೆಸದ್ಯದಲ್ಲೇ ಅಡುಗೆ ಎಣ್ಣೆ ಬೆಲೆ 10 ಪರ್ಸೆಂಟ್ ಇಳಿಕೆ ಸಾಧ್ಯತೆ

 ಜಾಗತಿಕ ಮಟ್ಟದಲ್ಲಿ ಕಚ್ಚಾ ಖಾದ್ಯ ತೈಲದ ಬೆಲೆ ಏರಿಕೆ

ಜಾಗತಿಕ ಮಟ್ಟದಲ್ಲಿ ಕಚ್ಚಾ ಖಾದ್ಯ ತೈಲದ ಬೆಲೆ ಏರಿಕೆ

"ಕಚ್ಚಾ ಖಾದ್ಯ ತೈಲದ ಜಾಗತಿಕ ಬೆಲೆಗಳು ಏರಿಕೆಯಾಗಿದೆ. ಈ ಹಿನ್ನೆಲೆ ಭಾರತವು ಆಮದು ಸುಂಕವನ್ನು ಕಡಿತಗಿಳೊಳಿಸಿದೆ. ಸರ್ಕಾರದ ಈ ಕ್ರಮದಿಂದಾಗಿ ಗ್ರಾಹಕರಿಗೆ ಅಧಿಕ ಲಾಭವೇನು ದೊರಕದು. ಮಲೇಷಿಯಾದ ಪಾಮ್ ಆಯಿಲ್ ಬೆಲೆಗಳು ಗಮನಾರ್ಹವಾಗಿ ಏರಿದೆ. ನಾವು ಆಮದು ಮಾಡಿದ ತೈಲಗಳ ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದೇವೆ. ಆದ್ದರಿಂದ ನಮ್ಮ ದೇಶದಲ್ಲಿ ಪಾಮ್ ಆಯಿಲ್ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ," ಎಂದು ಭಾರತದ ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಬಿ ವಿ ಮೆಹ್ತಾ ಅಭಿಪ್ರಾಯಿಸಿದ್ದಾರೆ. ಭಾರತದಲ್ಲಿ 2020 ನವೆಂಬರ್‌ನಿಂದ 2021 ಅಕ್ಟೋಬರ್‌ವರೆಗೆ ಸುಮಾರು 13.15 ಮಿಲಿಯನ್‌ ಟನ್‌ ಅಡುಗೆ ಎಣ್ಣೆಯನ್ನು ಆಮದು ಮಾಡಲಾಗಿದೆ ಎಂದು ವರದಿಯು ಹೇಳಿದೆ.

English summary

Ahead Of Festive Season Cooking oil prices come down

Ahead Of Festive Season Cooking oil prices come down. To know price Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X