For Quick Alerts
ALLOW NOTIFICATIONS  
For Daily Alerts

ಸಂಬಳ ಕಡಿತ ತಾರತಮ್ಯ: ಏರ್ ಇಂಡಿಯಾ ಎಂಡಿಗೆ ಪೈಲಟ್‌ಗಳ ಪತ್ರ

|

ಈಗಾಗಲೇ ಹರಾಜಿಗೆ ಇಟ್ಟಿರುವ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ಪರಿಸ್ಥಿತಿ ಕೋವಿಡ್ ನಿಂದಾಗಿ ಮತ್ತಷ್ಟು ಬಿಗಡಾಯಿಸಿದೆ.

ಏರ್‌ ಇಂಡಿಯಾ ತನ್ನ ನೌಕರರಿಗೆ ಇಂದು ಬೃಹತ್ ಶಾಕ್ ನೀಡಿತ್ತು. ತನ್ನ ನೌಕರರಿಗೆ ಐದು ವರ್ಷ ಸಂಬಳ ರಹಿತ ರಜೆಯನ್ನು ಘೋಷಣೆ ಮಾಡಿದೆ. ಇದರಿಂದ ಏರ್ ಇಂಡಿಯಾ ನೌಕರರು ಕಂಗಾಲಾಗಿದ್ದಾರೆ.

ಇದಲ್ಲದೇ ಶೇ 70 ರವರೆಗೆ ಏರ್‌ ಇಂಡಿಯಾ ಪೈಲಟ್‌ಗಳ ಸಂಬಳವನ್ನು ಕಡಿತಗೊಳಿಸಲಾಗಿದೆ. ಈ ಕುರಿತಂತೆ ತೀವ್ರ ಅಸಮಾಧಾನಗೊಂಡಿರುವ ಪೈಲಟ್‌ಗಳು ಏರ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬನ್ಸಾಲ್ ಅವರಿಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಶೇ 60 ರಷ್ಟು ವೇತನವನ್ನು ಕಡಿತ ಮಾಡಲಾಗಿದೆ

ಶೇ 60 ರಷ್ಟು ವೇತನವನ್ನು ಕಡಿತ ಮಾಡಲಾಗಿದೆ

ಏರ್ ಇಂಡಿಯಾ ಪೈಲಟ್‌ಗಳಿಗೆ ಶೇ 60 ರಷ್ಟು ವೇತನವನ್ನು ಕಡಿತ ಮಾಡಲಾಗಿದೆ. ಈ ಕುರಿತು ಬನ್ಸಾಲ್‌ಗೆ ಬರೆದಿರುವ ಪತ್ರದಲ್ಲಿ ನಿರ್ದೇಶಕ ಸಿಬ್ಬಂದಿ ಒಟ್ಟು ವೇತನದಲ್ಲಿ ಶೇಕಡಾ 4 ರಷ್ಟು ಕಡಿತವನ್ನು ತೆಗೆದುಕೊಳ್ಳುತ್ತಾರೆ, ಆದರೆ ಮಾರುಕಟ್ಟೆಗಿಂತ ಕಡಿಮೆ ಸಂಬಳ ಪಡೆಯುವ ಸಹ ಪೈಲಟ್‌ಗೆ ಶೇಕಡಾ 60 ರಷ್ಟು ಕಡಿತವನ್ನು ನೀಡಲಾಗುತ್ತದೆ. ಇದನ್ನು ಹೇಗೆ ಸಮರ್ಥಿಸಲಾಗುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ.

ವೇತನ ಕಡಿತವನ್ನು ಪ್ರಸ್ತಾಪಿಸಲಾಗಿದೆ

ವೇತನ ಕಡಿತವನ್ನು ಪ್ರಸ್ತಾಪಿಸಲಾಗಿದೆ

ಈ ವರ್ಷದ ಏಪ್ರಿಲ್‌ನಿಂದ 70 ಪ್ರತಿ ಶತದಷ್ಟು ಸಂಬಳವನ್ನು ಪಡೆಯದಿರುವ ಸಮಯದಲ್ಲಿ ವೇತನ ಕಡಿತವನ್ನು ಪ್ರಸ್ತಾಪಿಸಲಾಗಿದೆ ಎಂದು ಪೈಲಟ್‌ಗಳು ಬರೆದಿದ್ದಾರೆ.

55 ಪೈಲಟ್‌ ಕೊರೊನಾವೈರಸ್‌ ಸೋಂಕಿಗೆ ತುತ್ತಾಗಿದ್ದಾರೆ

55 ಪೈಲಟ್‌ ಕೊರೊನಾವೈರಸ್‌ ಸೋಂಕಿಗೆ ತುತ್ತಾಗಿದ್ದಾರೆ

ಇಲ್ಲಿಯವರೆಗೆ, ಕನಿಷ್ಠ 55 ಪೈಲಟ್‌ ಕೊರೊನಾವೈರಸ್‌ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಲಟ್‌ಗಳಿಗೆ ವಿಮಾನಗಳು ಪ್ರಾರಂಭವಾದ ನಂತರ ಸಂಬಳ ನೀಡಲಾಗುವುದು ಎಂದು ಹೇಳುವ ಮೂಲಕ ದಂಡ ವಿಧಿಸುವುದು ನ್ಯಾಯವೇ? ಇದು ನಾಗರಿಕ ವಿಮಾನಯಾನ ಸಚಿವಾಲಯವು (MoCA) ಮುಂಚೂಣಿ ಕಾರ್ಮಿಕರನ್ನು ಗೌರವಿಸಲು ಹೇಗೆ ಬಯಸುತ್ತದೆ? ಎಂದು ಕೇಳಿದ್ದಾರೆ.

ಮಾರುಕಟ್ಟೆ ಮಾನದಂಡಗಳಿಗೆ ಸಮನಾಗಿರುವುದಿಲ್ಲ

ಮಾರುಕಟ್ಟೆ ಮಾನದಂಡಗಳಿಗೆ ಸಮನಾಗಿರುವುದಿಲ್ಲ

"ಪೈಲಟ್‌ಗಳ ವೇತನವನ್ನು ಶೇಕಡಾ 60 ರಷ್ಟು ಕಡಿತಗೊಳಿಸಲು MoCA ನಿಮಗೆ ನಿರ್ದೇಶನಗಳನ್ನು ನೀಡಿದೆ ಎಂದು ನೀವು ನಮಗೆ ತಿಳಿಸಿದ್ದೀರಿ. ಇದು ಮಾರುಕಟ್ಟೆ ಮಾನದಂಡಗಳಿಗೆ ಸಮನಾಗಿರುವುದಿಲ್ಲ. ನಮ್ಮ ಪೈಲಟ್‌ಗಳಿಗೆ ನೀಡಿದ ಎಲ್ಲಾ ಮೆಚ್ಚುಗೆಯ ಪತ್ರಗಳನ್ನು ಹಿಂದಿರುಗಿಸಿ'' ಎಂದು ಏರ್ ಇಂಡಿಯಾ ಪೈಲಟ್‌ಗಳು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

English summary

Air India Pilots Letter To Air India MD Rajeev Bansal About Salary Issue

Air India Pilots Letter To Air India MD Rajeev Bansal About Salary Issue
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X