For Quick Alerts
ALLOW NOTIFICATIONS  
For Daily Alerts

ಬಾಕಿ ಹಣ ಕೊಡದಿದ್ರೆ ಟಿಕೆಟ್ ಕೊಡಲ್ಲ: ಏರ್ ಇಂಡಿಯಾ

|

ಈಗಾಗಲೇ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಕೇಂದ್ರದ ಸಂಸ್ಥೆಗಳಿಗೆ ಖಡಕ್ ಸೂಚನೆ ಕೊಟ್ಟಿದೆ. 10 ಲಕ್ಷ ರುಪಾಯಿಗಿಂತ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸರಕಾರಿ ಸಂಸ್ಥೆಗಳಿಗೆ ಬಾಕಿ ಹಣ ಪಾವತಿಸದಿದ್ರೆ ಟಿಕೆಟ್ ಕೊಡಲ್ಲ ಎಂದಿದೆ.

 

ಪ್ರಮುಖ ಸರಕಾರಿ ಸಂಸ್ಥೆಗಳಾದ ಸಿಬಿಐ, ಐಬಿ, ಜಾರಿ ನಿರ್ದೇಶನಾಲಯ(ED), ಕೇಂದ್ರ ಕಾರ್ಮಿಕ ಸಂಸ್ಥೆ(ಸಿಎಲ್ಐ), ಭಾರತೀಯ ಲೆಕ್ಕ ಪತ್ರ ಮಂಡಳಿ, ಬಿಎಸ್‌ಎಫ್‌ನಂತಹ ಪ್ರಮುಖ ಸರಕಾರಿ ಸಂಸ್ಥೆಗಳು ಏರ್ ಇಂಡಿಯಾಕ್ಕೆ ಹಣ ನೀಡದೆ ಬಾಕಿ ಉಳಿಸಿಕೊಂಡಿದ್ದು, ಇದೇ ಕಾರಣಕ್ಕೆ ಏರ್‌ ಇಂಡಿಯಾ ಇದೇ ಮೊದಲ ಬಾರಿಗೆ ಟಿಕೆಟ್ ನೀಡಲು ನಿರಾಕರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬಾಕಿ ಹಣ ಕೊಡದಿದ್ರೆ ಟಿಕೆಟ್ ಕೊಡಲ್ಲ: ಏರ್ ಇಂಡಿಯಾ

ಸದ್ಯ ಏರ್ ಇಂಡಿಯಾಗೆ ದೇಶದ ಸರ್ಕಾರಿ ಸಂಸ್ಥೆಗಳಿಗೆ ಬರಬೇಕಾಗಿರುವ ಒಟ್ಟಾರೆ ಬಾಕಿ ಮೊತ್ತವು 268 ಕೋಟಿ ರುಪಾಯಿನಷ್ಟಿದೆ. ಇದರಲ್ಲಿ ಕಳೆದ ಕೆಲವು ವಾರಗಳಲ್ಲಿ 50 ಕೋಟಿ ಮರಳಿ ಬಂದಿದೆ. ಇನ್ನೂ ಬಾಕಿ ಉಳಿಸಿಕೊಂಡಿರುವ ಸಂಸ್ಥೆಗಳ ಪಟ್ಟಿಯು ದೊಡ್ಡದಾಗಿ ಬೆಳೆದಿದೆ.

ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ, ವಿಮಾನಯಾನಕ್ಕೆ ದೇಶದ ಸರ್ಕಾರಿ ಸಂಸ್ಥೆಗಳ ಮೊದಲ ಆದ್ಯತೆಯು ಏರ್ ಇಂಡಿಯಾ ಆಗಿರಬೇಕು. ಏರ್ ಇಂಡಿಯಾ ವಿಮಾನಗಳು ಆ ಜಾಗಕ್ಕೆ ತಲುಪದಿದ್ದರೆ ಮಾತ್ರ, ಬೇರೆ ವಿಮಾನಯಾನ ಸಂಸ್ಥೆಯ ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಬೇಕು. ಹೀಗಾಗಿ ಸರ್ಕಾರಿ ಸಂಸ್ಥೆಗಳು ಏರ್ ಇಂಡಿಯಾಗೆ ಮೊದಲ ಆದ್ಯತೆಯನ್ನು ನೀಡುತ್ತವೆ. ಆದ್ರೆ ಇದೇ ಮೊದಲ ಬಾರಿಗೆ ಬಾಕಿ ಹಣ ಕೊಡದಿದ್ರೆ ಟಿಕೆಟ್ ನೀಡುವುದಿಲ್ಲ ಎಂದು ಏರ್ ಇಂಡಿಯಾ ಕಡ್ಡಿ ಮುರಿದಂತೆ ಹೇಳಿದೆ.

English summary

Air India Refuses Tickets To Government Agencies

Air india has decided to stop issuing tickets for official travel to personal of government agencies that owe over RS 10 Lakhs
Story first published: Friday, December 27, 2019, 9:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X