For Quick Alerts
ALLOW NOTIFICATIONS  
For Daily Alerts

ಏರ್‌ ಇಂಡಿಯಾ ಖರೀದಿಸಿದ ಟಾಟಾ : ಉದ್ಯೋಗಿಗಳ ಭವಿಷ್ಯ ಏನಾಗಬಹುದು?

|

ಏರ್‌ ಇಂಡಿಯಾ ಬಿಡ್‌ ಗೆದ್ದ ಖುಷಿಯಲ್ಲಿ ಟಾಟಾ ಸನ್ಸ್‌ ಸಂಭ್ರಮಾಚರಣೆ ಒಂದೆಡೆಯಾದ್ರೆ, ಇಷ್ಟು ದಿನಗಳ ಕಾಲ ಸರ್ಕಾರದ ಹಿಡಿತದಲ್ಲಿದ್ದ ಏರ್‌ಇಂಡಿಯಾ ಉದ್ಯೋಗಿಗಳು ಇದೀಗ ಖಾಸಗಿ ಕಂಪನಿಯ ಮಾಲೀಕತ್ವದಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಹೀಗಿದ್ದಾಗ ಮುಂದಿನ ದಿನಗಳಲ್ಲಿ ಅವರ ಕೆಲಸ ಸೇಫ್ ಆಗಿದ್ಯಾ, ಅಥವಾ ಕೆಲಸದಿಂದ ವಜಾಗೊಳಿಸಲಾಗುತ್ತಾ ಎಂಬ ಗೊಂದಲ ಸಹಜ.

 

18,000 ಕೋಟಿ ರೂಪಾಯಿಗೆ ಏರ್‌ ಇಂಡಿಯಾ ಬಿಡ್‌ ಗೆದ್ದ ಟಾಟಾ ಗ್ರೂಪ್‌18,000 ಕೋಟಿ ರೂಪಾಯಿಗೆ ಏರ್‌ ಇಂಡಿಯಾ ಬಿಡ್‌ ಗೆದ್ದ ಟಾಟಾ ಗ್ರೂಪ್‌

ಟಾಟಾ ಸನ್ಸ್ ಸಮೂಹ ಬರೋಬ್ಬರಿ 18,000 ಕೋಟಿ ರೂಪಾಯಿಗೆ ಏರ್ ಇಂಡಿಯಾವನ್ನು ತನ್ನದಾಗಿಸಿಕೊಂಡಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ಪ್ರಕಟಿಸಿತು. ಒಟ್ಟು ಹಸ್ತಾಂತರ ಪ್ರಕ್ರಿಯೆಯು ಅನೇಕ ವ್ಯತ್ಯಾಸಗಳನ್ನು ಒಳಗೊಂಡಿರುತ್ತದೆ. ಆ ಕುರಿತಾದ ಮಾಹಿತಿ ಈ ಕೆಳಗಿದೆ

 
ಏರ್‌ ಇಂಡಿಯಾ ಖರೀದಿಸಿದ ಟಾಟಾ : ಉದ್ಯೋಗಿಗಳ ಭವಿಷ್ಯ ಏನಾಗಬಹುದು?

1. ಹಸ್ತಾಂತರ ಪ್ರಕ್ರಿಯೆಯು ಡಿಸೆಂಬರ್ 2021 ರೊಳಗೆ ಪೂರ್ಣಗೊಳ್ಳುತ್ತದೆ. ಹಣಕಾಸು ಸಚಿವಾಲಯವು ಡಿಸೆಂಬರ್ ವೇಳೆಗೆ ವಹಿವಾಟನ್ನು ಕೊನೆಗೊಳಿಸಲು ನೋಡುತ್ತಿದೆ, ಅಂದರೆ ಡಿಸೆಂಬರ್ ವೇಳೆಗೆ ಟಾಟಾ ಸನ್ಸ್ ಏರ್‌ ಇಂಡಿಯಾ ಷೇರುಗಳನ್ನು ಪಡೆಯುತ್ತದೆ ಮತ್ತು ಸರ್ಕಾರವು ಪರಿಗಣನೆಯನ್ನು ಪಡೆಯುತ್ತದೆ.

2. ಭವಿಷ್ಯದ ವಿಲೀನಕ್ಕೆ ಸಂಬಂಧಿಸಿದಂತೆ ಟಾಟಾ ಸನ್ಸ್ ಮೇಲೆ ಯಾವುದೇ ನಿರ್ಬಂಧವಿರುವುದಿಲ್ಲ. ಮಾಲೀಕರು ಮಾತ್ರ 51% ಇಕ್ವಿಟಿಯನ್ನು ನಿರ್ವಹಿಸಬೇಕಾಗುತ್ತದೆ.

3. ಏರ್ ಇಂಡಿಯಾದ ಪ್ರಸ್ತುತ ಉದ್ಯೋಗಿಗಳನ್ನು ಒಂದು ವರ್ಷದವರೆಗೆ ಉಳಿಸಿಕೊಳ್ಳಲಾಗುವುದು. ಯಾವುದೇ ಉದ್ಯೋಗಿಯ ವಜಾ ಇಲ್ಲ ಎಂದು ಸಚಿವಾಲಯ ಹೇಳಿದೆ.

4. ಒಪ್ಪಂದದ ಪ್ರಕಾರ ಏರ್ ಇಂಡಿಯಾದ ಎಲ್ಲಾ ಉದ್ಯೋಗಿಗಳನ್ನು ಒಂದು ವರ್ಷ ಉಳಿಸಿಕೊಳ್ಳಬೇಕು. ಎರಡನೇ ವರ್ಷದಲ್ಲಿ, ಹೊಸ ಬಿಡ್ಡರ್ ಯಾರನ್ನಾದರೂ ವಜಾಗೊಳಿಸಿದರೆ, ಅವರಿಗೆ ವಿಆರ್ಎಸ್ ಪಾವತಿಸಬೇಕಾಗುತ್ತದೆ.

5. ಎಲ್ಲಾ ಉದ್ಯೋಗಿಗಳು ಗ್ರಾಚ್ಯುಟಿ ಮತ್ತು ಭವಿಷ್ಯ ನಿಧಿ ಮತ್ತು ನಿವೃತ್ತಿ ನಂತರದ ವೈದ್ಯಕೀಯ ಪ್ರಯೋಜನಗಳನ್ನು ಪಡೆಯುತ್ತಾರೆ.

6. ಉದ್ಯೋಗಿಗಳಿಗೆ ಈ ಒಂದು ವರ್ಷದ ರಕ್ಷಣೆ ಸಂಪೂರ್ಣವಲ್ಲ. ಕಾರ್ಯಕ್ಷಮತೆ, ನಡವಳಿಕೆ ಮುಂತಾದ ಆಧಾರದ ಮೇಲೆ ಉದ್ಯೋಗಿಗಳನ್ನ ಉಳಿಸಿಕೊಳ್ಳಲಾಗುತ್ತದೆ. ಏರ್ ಇಂಡಿಯಾ ಪ್ರಸ್ತುತ 8,084 ಖಾಯಂ ಉದ್ಯೋಗಿಗಳು ಸೇರಿದಂತೆ 12,085 ಉದ್ಯೋಗಿಗಳನ್ನು ಹೊಂದಿದೆ. ಮತ್ತೊಂದೆಡೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ 1,434 ಉದ್ಯೋಗಿಗಳಿದ್ದಾರೆ.

7. ಏರ್ ಇಂಡಿಯಾ ಬ್ರಾಂಡ್ ಎಂಟು ಲೋಗೊಗಳನ್ನು ಹೊಂದಿದೆ. ಹೊಸ ಮಾಲೀಕರು ಈ ಲೋಗೋಗಳನ್ನು ಕನಿಷ್ಠ ಐದು ವರ್ಷಗಳವರೆಗೆ ವರ್ಗಾಯಿಸಲು ಸಾಧ್ಯವಿಲ್ಲ. ಐದು ವರ್ಷಗಳ ನಂತರ, ಅವರು ಲೋಗೋವನ್ನು ವರ್ಗಾಯಿಸಬಹುದು ಆದರೆ ಭಾರತೀಯ ಕಂಪನಿಗೆ ಮಾತ್ರ ಸೀಮಿತವಾಗಿದೆ. ಜೊತೆಗೆ ಏರ್ ಇಂಡಿಯಾ ಬ್ರಾಂಡ್‌ನ ಲೋಗೊಗಳು ಯಾವುದೇ ವಿದೇಶಿ ಸಂಸ್ಥೆಗೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರವು ನಿರ್ದಿಷ್ಟಪಡಿಸಿದೆ.

8. ಟಾಟಾ ಈಗ ಬಯಸಿದಲ್ಲಿ ಕಾರ್ಯಾಚರಣೆಯನ್ನು ಕಡಿಮೆ ಮಾಡಬಹುದು. ಟಾಟಾ ಸಮೂಹ ಸದ್ಯ 100% ಪಾಲನ್ನು ಹೊಂದಿದ್ದಾರೆ ಎಂದು ಸರ್ಕಾರ ಹೇಳಿದೆ. ಹಾಗಾಗಿ ಅವರು ವ್ಯವಹಾರದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ 3 ವರ್ಷಗಳ ವ್ಯಾಪಾರ ಮುಂದುವರಿಕೆ ಷರತ್ತು ಇದೆ, ಹೀಗಾಗಿ ಹೊಸ ಮಾಲೀಕರು ಮೂರು ವರ್ಷಗಳ ಕಾಲ ವ್ಯಾಪಾರವನ್ನು ಮುಂದುವರಿಸಬೇಕಾಗುತ್ತದೆ.

9. ಸರ್ಕಾರಿ ನೌಕರರು ಏರ್ ಇಂಡಿಯಾದಲ್ಲೇ ಪ್ರಯಾಣಿಸಬೇಕೆಂಬ ನಿರ್ಬಂಧವು ಇನ್ಮುಂದೆ ಇರೋದಿಲ್ಲ. ಏಕೆಂದರೆ ಅದು ಸರ್ಕಾರದ ಕೈಯಲ್ಲಿದ್ದಾಗ ಅದೇ ವಿಮಾನದಲ್ಲಿ ಪ್ರಯಾಣಿಸಬೇಕಾಗಿತ್ತು. ಆದರೆ ಸಾಲದ ಹೊರೆ ಹೊತ್ತಿರುವ ಏರ್‌ ಇಂಡಿಯಾದ ಜವಾಬ್ದಾರಿಯನ್ನ ಇದೀಗ ರತನ್ ಟಾಟಾ ಸಮೂಹ ನಿರ್ವಹಿಸಲಿದೆ.

English summary

Air India Sold to Tata Group; What will happen to Air India Employees?

Air india Acquisition: Here the details of air india total handover process and Employee Future details here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X