For Quick Alerts
ALLOW NOTIFICATIONS  
For Daily Alerts

ಏರ್‌ಟೆಲ್‌, BSNL ಪ್ರಿಪೇಯ್ಡ್ ಗ್ರಾಹಕರಿಗೆ ಸಿಹಿ ಸುದ್ದಿ: ವ್ಯಾಲಿಡಿಟಿ ವಿಸ್ತರಣೆ

|

ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್ ಮತ್ತು ಬಿಎಸ್‌ಎನ್‌ಎಲ್‌ ತಮ್ಮ ಪ್ರಿಪೇಯ್ಡ್ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಕೊರೊನಾಯಿಂದ ದೇಶ ಪೂರ್ತಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರಿಪೇಯ್ಡ್ ವ್ಯಾಲಿಡಿಟಿಯನ್ನು ವಿಸ್ತರಣೆ ಮಾಡಿದೆ.

ಸೋಮವಾರ (ಮಾರ್ಚ್‌ 30) ಏರ್‌ಟೆಲ್‌ ತನ್ನ 8 ಕೋಟಿಗೂ ಹೆಚ್ಚು ಪ್ರಿಪೇಯ್ಡ್ ಗ್ರಾಹಕರ ವ್ಯಾಲಿಡಿಟಿಯನ್ನು ಏಪ್ರಿಲ್ 17ರವರೆಗೆ ವಿಸ್ತರಿಸಿ ಆದೇಶಿಸಿದೆ. ಇಂತಹ ಪ್ರಿಪೇಯ್ಡ್‌ ಗ್ರಾಹಕರ ಖಾತೆದಾರರಿಗೆ ಕಂಪನಿ 10 ರುಪಾಯಿ ಟಾಕ್‌ಟೈಮ್ ಜಮೆ ಮಾಡಲಿದೆ.

ಏರ್‌ಟೆಲ್‌, BSNL ಪ್ರಿಪೇಯ್ಡ್ ಗ್ರಾಹಕರಿಗೆ ಸಿಹಿ ಸುದ್ದಿ

''ಏರ್‌ಟೆಲ್ 2020 ರ ಏಪ್ರಿಲ್ 17 ರವರೆಗೆ 80 ಮಿಲಿಯನ್ ಗ್ರಾಹಕರಿಗೆ ಪ್ರಿ ಪೇಯ್ಡ್ ಪ್ಯಾಕ್ ವ್ಯಾಲಿಡಿಟಿಯನ್ನು ವಿಸ್ತರಿಸಿದೆ. ಈ ಯೋಜನೆಯ ಅನ್ವಯ ಎಲ್ಲಾ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಗಳಿಗೆ ಒಳಬರುವ ಕರೆಗಳನ್ನು ಸ್ವೀಕರಿಸುವುದನ್ನು ಮುಂದುವರಿಸಲಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಇದರ ಲಾಭ ಬಳಕೆದಾರರಿಗೆ ಲಭ್ಯವಾಗಲಿದೆ'' ಎಂದು ಕಂಪನಿ ಹೇಳಿದೆ. ಈ ಮೂಲಕ ಎಲ್ಲಾ ಗ್ರಾಹಕರಿಗೆ ಏಪ್ರಿಲ್ 17 ರವರೆಗೆ ತಡೆ ಇಲ್ಲದೆ ಒಳ ಬರುವ ಕರೆಗಳು ಲಭ್ಯವಿರಲಿವೆ.

ಏರ್‌ಟೆಲ್ ಜೊತೆಗೆ ಬಿಎಸ್‌ಎನ್‌ಎಲ್ ಪ್ರಿಪೇಯ್ಡ್ ಸಿಮ್ ಬಳಕೆದಾರರು ತಮ್ಮ ಸಿಮ್‌ಗಳನ್ನು ಏಪ್ರಿಲ್ 20 ರವರೆಗೆ ಮುಂದುವರಿಸಬಹುದು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸೋಮವಾರ ಪ್ರಕಟಿಸಿದ್ದಾರೆ. 21 ದಿನಗಳ ಕೊರೊನಾವೈರಸ್ ಲಾಕ್‌ಡೌನ್ ಸಮಯದಲ್ಲಿ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಸಲುವಾಗಿ ಹೊರಹೋಗುವ ಕರೆಗಳನ್ನು ಸಕ್ರಿಯಗೊಳಿಸಲು ಸರ್ಕಾರವು 10 ರುಪಾಯಿ ಪ್ರೋತ್ಸಾಹವನ್ನು ನೀಡುತ್ತದೆ.

ಟ್ರಾಯ್ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಮನವಿ ಮಾಡಿಕೊಂಡ ಬಳಿಕ ಏರ್‌ಟೆಲ್ ಹಾಗೂ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ತಮ್ಮ ಪ್ರಿಪೇಯ್ಡ್‌ ಸೇವೆಗಳ ವ್ಯಾಲಿಡಿಟಿ ಅವಧಿಯನ್ನು ಏಪ್ರಿಲ್ 20ರವರೆಗೆ ವಿಸ್ತರಿಸಿದೆ.

English summary

Airtel BSNL Extends Validity Of Prepaid SIMs Till 20th April

Airtel and Bsnl Prepaid Sim users can continue to use their SIMs till April 20
Story first published: Tuesday, March 31, 2020, 15:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X