For Quick Alerts
ALLOW NOTIFICATIONS  
For Daily Alerts

ಏರ್‌ಟೆಲ್‌ನಿಂದ ಹೊಸ ಪ್ರಿಪೇಯ್ಡ್ ಯೋಜನೆ: 148, 298, 598 ರು. ರೀಚಾರ್ಜ್

|

ದೇಶದ ಬಹುತೇಕ ಎಲ್ಲಾ ಟೆಲಿಕಾಂ ಕಂಪನಿಗಳು ಡಿಸೆಂಬರ್ 3ರಿಂದ ಮೊಬೈಲ್ ಕರೆ ಹಾಗೂ ಡೇಟಾ ದರಗಳನ್ನು ಏರಿಕೆ ಮಾಡಲಿವೆ. ಭಾರತದ ಬಹುದೊಡ್ಡ ಟೆಲಿಕಾಂ ಕಂಪನಿಯಲ್ಲಿ ಒಂದಾದ ಭಾರತಿ ಏರ್‌ಟೆಲ್ ಕೂಡ ಮಂಗಳವಾರ ತನ್ನ ಪ್ರಿಪೇಯ್ಡ್ ಯೋಜನೆಗಳ ಮೇಲಿನ ದರವನ್ನು ಶೇಕಡಾ 47ರಷ್ಟು ಏರಿಕೆ ಮಾಡಲಿದೆ.

 

ಏರ್‌ಟೆಲ್ 19 ರುಪಾಯಿ ರೀಚಾರ್ಜ್ ಪ್ಲ್ಯಾನ್ ಹೊರತುಪಡಿಸಿ ಉಳಿದೆಲ್ಲಾ ಪ್ರಿಪೇಯ್ಡ್‌ ಯೋಜನೆಗಳ ದರದಲ್ಲಿ ಬದಲಾವಣೆ ತರಲಿದೆ. 28 ದಿನಗಳು ಮತ್ತು 84 ದಿನಗಳ ಯೋಜನೆಗಳ ಮಾನ್ಯತೆಯನ್ನು ಒಳಗೊಂಡಂತೆ ದರವನ್ನು ಪರಿಷ್ಕರಿಸಿದೆ.

ಏರ್ ಟೆಲ್ ನಿಂದಲೂ ಪ್ರೀಪೇಯ್ಡ್ ಗ್ರಾಹಕರಿಗೆ ದರ ಏರಿಕೆ; ಡಿಸೆಂಬರ್ 3ರಿಂದ ಜಾರಿಏರ್ ಟೆಲ್ ನಿಂದಲೂ ಪ್ರೀಪೇಯ್ಡ್ ಗ್ರಾಹಕರಿಗೆ ದರ ಏರಿಕೆ; ಡಿಸೆಂಬರ್ 3ರಿಂದ ಜಾರಿ

ಏರ್‌ಟೆಲ್ ತನ್ನ ಪ್ರಿಪೇಯ್ಡ್ ಯೋಜನೆಗಳಲ್ಲಿ ಏನೆಲ್ಲಾ ಬದಲಾವಣೆ ತಂದಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ವಿವರಣೆ ಓದಿ

148 ರುಪಾಯಿ ರೀಚಾರ್ಜ್

148 ರುಪಾಯಿ ರೀಚಾರ್ಜ್

28 ದಿನಗಳ ವ್ಯಾಲಿಡಿಟಿ ಹೊಂದಿರುವ 148 ರುಪಾಯಿ ರೀಚಾರ್ಜ್ ಯೋಜನೆಯು ಈ ಹಿಂದೆ 129 ರುಪಾಯಿಗಳಲ್ಲಿ ದೊರೆಯುತ್ತಿತ್ತು. 148 ರುಪಾಯಿ ರೀಚಾರ್ಜ್ ಮಾಡಿದರೆ ಅನ್‌ಲಿಮಿಟೆಡ್‌ ಕರೆಗಳು, ಪ್ರತಿದಿನ 2 ಜಿಬಿ ಡೇಟಾ ಹಾಗೂ 300 SMSಗಳು ಲಭ್ಯವಿದೆ. ಜೊತೆಗೆ ಎಕ್ಸ್‌ಟ್ರೀಮ್, ವಿಂಕ್ ಮತ್ತು ಹಲೋ ಟ್ಯೂನ್‌ಗಳಿಗೆ ಪ್ರವೇಶ ಸಿಗುವ ಸೌಲಭ್ಯವೂ ಇದೆ. ಈ ಹೊಸ ಯೋಜನೆಯಿಂದಾಗಿ 19 ರುಪಾಯಿ ಬೆಲೆ ಹೆಚ್ಚಳವಾಗಿದೆ.

248 ರುಪಾಯಿ ರೀಚಾರ್ಜ್

248 ರುಪಾಯಿ ರೀಚಾರ್ಜ್

ಡಿಸೆಂಬರ್ 3ರಿಂದ ಜಾರಿಗೆ ಬರುವಂತೆ ಈಗಾಗಲೇ ಬಳಕೆಯಲ್ಲಿದ್ದ 169 ಮತ್ತು 199 ಎರಡು ರೀಚಾರ್ಜ್ ಯೋಜನೆಗಳನ್ನು ಏರ್‌ಟೆಲ್ ವಿಲೀನಗೊಳಿಸಿದೆ. ಇದನ್ನು 248 ರುಪಾಯಿ ರೀಚಾರ್ಜ್ ಯೋಜನೆಯಾಗಿ ಪರಿಷ್ಕರಿಸಿದೆ.

ಹೊಸ 248 ರುಪಾಯಿ ರೀಚಾರ್ಜ್ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕರೆಗಳು, ಪ್ರತಿದಿನ 1.5 ಜಿಬಿ ಡೇಟಾ ಹಾಗೂ 100 SMS ಸೌಲಭ್ಯವಿದೆ. ಜೊತೆಗೆ ಏರ್‌ಟೆಲ್ ಎಕ್ಸ್‌ಟ್ರೀಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್ ಚಂದಾದಾರಿಕೆ, ಉಚಿತ ಹಲೋ ಟ್ಯೂನ್ ಮತ್ತು ಆ್ಯಂಟಿ ವೈರಸ್ ಮೊಬೈಲ್ ಪ್ರೊಟೆಕ್ಷನ್ ಕೂಡ ಲಭ್ಯವಿದೆ.

ಈ ಹೊಸ ಯೋಜನೆಯಿಂದಾಗಿ 169 ರುಪಾಯಿ ಯೋಜನೆಯಲ್ಲಿ 49 ರುಪಾಯಿ ಹಾಗೂ 199 ಯೋಜನೆಯಲ್ಲಿ 79 ರುಪಾಯಿ ಏರಿಕೆಯಾಗಿದೆ.

 

298 ರುಪಾಯಿ ರೀಚಾರ್ಜ್
 

298 ರುಪಾಯಿ ರೀಚಾರ್ಜ್

ಇದುವರೆಗೂ ಬಳಕೆಯಿದ್ದ 249 ರುಪಾಯಿ ರೀಚಾರ್ಜ್‌ ಯೋಜನೆಯನ್ನು 298ಕ್ಕೆ ಪರಿಷ್ಕರಿಸಲಾಗಿದೆ. ಈ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕರೆಗಳು, ಪ್ರತಿದಿನ 2 ಜಿಬಿ ಡೇಟಾ, ಹಾಗೂ 100 SMS ಸೌಲಭ್ಯವಿದೆ.

28 ದಿನಗಳ ಯೋಜನೆಯಲ್ಲಿ ಇದು ದುಬಾರಿಯಾಗಿದ್ದು ಪ್ರತಿ ದಿನಕ್ಕೆ 1.75 ರುಪಾಯಿ ಹೆಚ್ಚಳವಾಗಿದೆ.

 

ಏರ್‌ಟೆಲ್‌ 84 ದಿನಗಳ 4G ಯೋಜನೆ

ಏರ್‌ಟೆಲ್‌ 84 ದಿನಗಳ 4G ಯೋಜನೆ

84 ದಿನಗಳ ಅವಧಿಯಲ್ಲಿ ಏರ್‌ಟೆಲ್ ಎರಡು 4G ಯೋಜನೆಯನ್ನು ಒಳಗೊಂಡಿದ್ದು 598 ಮತ್ತು 698 ರುಪಾಯಿ ರೀಚಾರ್ಜ್ ಆಗಿದೆ. 598 ಯೋಜನೆಯಲ್ಲಿ ಅನ್‌ಲಿಮಿಟೆಡ್ ಕರೆಗಳು, 1.5 ಜಿಬಿ ಡೇಟಾ ಸೌಲಭ್ಯವಿದೆ. 698 ರುಪಾಯಿ ರೀಚಾರ್ಜ್ ಮಾಡಿಸಿದರೆ ಅನಿಲಿಮಿಟೆಡ್ ಕರೆಗಳ ಜೊತೆಗೆ ಪ್ರತಿದಿನ 2 ಜಿಬಿ ಡೇಟಾ ಸಿಗಲಿದ್ದು, ಎರಡರಲ್ಲೂ ಪ್ರತಿದಿನ 100 SMS ಸೌಲಭ್ಯವಿದೆ.

598 ರೀಚಾರ್ಜ್‌ ಯೋಜನೆಯು ಈ ಮೊದಲು 449 ರುಪಾಯಿಯಾಗಿತ್ತು. 698 ರುಪಾಯಿ ರೀಚಾರ್ಜ್ ಯೋಜನೆಯನ್ನು 499ರಿಂದ ಪರಿಷ್ಕರಿಸಲಾಗಿದೆ.

 

English summary

Airtel New Prepaid Plans And Details

Airtel has been introduced new prepaid plans. Prepaid plans prices hikes by upto 47 percent from tommorrow
Story first published: Monday, December 2, 2019, 12:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X