For Quick Alerts
ALLOW NOTIFICATIONS  
For Daily Alerts

ಸುಪ್ರೀಂ ಸಿಡಿಲಿಗೆ ಹೆದರಿದ ಏರ್‌ಟೆಲ್ : ಫೆಬ್ರವರಿ 20ರೊಳಗೆ 10 ಸಾವಿರ ಕೋಟಿ ಪಾವತಿ

|

ಬಾಕಿ ಉಳಿಸಿಕೊಂಡಿರುವ ಹಣವನ್ನು ಬಡ್ಡಿ ಹಾಗೂ ದಂಡ ಸಹಿತವಾಗಿ ಸರ್ಕಾರಕ್ಕೆ ಪಾವತಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಏರ್‌ಟೆಲ್‌ ಭಯಪಟ್ಟು ಮೊದಲ ಹಂತದಲ್ಲಿ 10,000 ಕೋಟಿ ರುಪಾಯಿ ಪಾವತಿ ಮಾಡುವುದಾಗಿ ಹೇಳಿದೆ.

ಫೆಬ್ರವರಿ 20ರೊಳಗೆ 10 ಸಾವಿರ ಕೋಟಿ ರುಪಾಯಿಯನ್ನು ಪಾವತಿಸುತ್ತೇವೆ. ಇನ್ನುಳಿದ ಹಣವನ್ನು ಮಾರ್ಚ್ 17ರೊಳಗೆ ಪಾವತಿಸುವುದಾಗಿ ಏರ್ ಟೆಲ್ ಡಿಒಟಿಗೆ ತಿಳಿಸಿದೆ.

ಕೇಂದ್ರ ಟೆಲಿಕಮ್ಯುನಿಕೇಷನ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ

ಕೇಂದ್ರ ಟೆಲಿಕಮ್ಯುನಿಕೇಷನ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ

ಟೆಲಿಕಾಂ ಕಂಪನಿಗಳು ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನ(ಎಜಿಆರ್‌)ದ ಹಣ ಪಾವತಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಸುಪ್ರೀಂ ಕೋರ್ಟ್ ಆದೇಶವನ್ನೇ ತಡೆ ಹಿಡಿದಿದ್ದ ಕೇಂದ್ರ ಟೆಲಿಕಮ್ಯುನಿಕೇಷನ್ ಇಲಾಖೆಯನ್ನು ಸರ್ವೋಚ್ಛ ನ್ಯಾಯಾಲಯ ಶುಕ್ರವಾರ(ಫೆಬ್ರವರಿ 14)ರಂದು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ಕಂಪನಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಯಾಕೆ ದಾಖಲಿಸಿಕೊಳ್ಳಬಾರದು ಎಂದೂ ಪ್ರಶ್ನಿಸಿತ್ತು. ಹಣ ಪಾವತಿಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಿದ್ದಕ್ಕೆ ದೂರಸಂಪರ್ಕ ಇಲಾಖೆಯ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿತ್ತು.

 

ಸುಪ್ರೀಂ ಕೋರ್ಟ್ ಅನ್ನು ಮುಚ್ಚಬೇಕೆ?

ಸುಪ್ರೀಂ ಕೋರ್ಟ್ ಅನ್ನು ಮುಚ್ಚಬೇಕೆ?

ಸುಪ್ರೀಂ ಕೋರ್ಟ್ ಅನ್ನು ನಾವು ಈಗ ಮುಚ್ಚಬೇಕೆ? ದೇಶದಲ್ಲಿ ಯಾವುದಾದರೂ ಕಾನೂನು ಬಾಕಿ ಉಳಿದಿದೆಯೇ? ಇದು ಹಣದ ಮದ ಅಲ್ಲವೇ? ಇದನ್ನು ಪ್ರಾಯೋಜಿಸುತ್ತಿರುವವರು ಯಾರು? ಎಲ್ಲರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಆಕ್ರೋಶ ವ್ಯಕ್ತಪಡಿಸಿತು.

ಮಧ್ಯರಾತ್ರಿಯೊಳಗೆ ಬಾಕಿ ಹಣ ಪಾವತಿಸುವಂತೆ ಆದೇಶಿಸಿದ ಡಿಒಟಿ

ಮಧ್ಯರಾತ್ರಿಯೊಳಗೆ ಬಾಕಿ ಹಣ ಪಾವತಿಸುವಂತೆ ಆದೇಶಿಸಿದ ಡಿಒಟಿ

ತನ್ನ ಆದೇಶವನ್ನು ಪಾಲಿಸದೇ ಇರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ನ್ಯಾಯಾಂಗ ನಿಂದನೆ ನೋಟಿಸ್ ನೀಡುವುದಾಗಿ ಹೇಳಿತ್ತು. ಇದರಿಂದ ಎಚ್ಚೆತ್ತುಕೊಂಡ ಡಿಒಟಿ(ಟೆಲಿಕಮ್ಯುನಿಕೇಷನ್ ಇಲಾಖೆ), ಫೆಬ್ರವರಿ 14ರ ಮಧ್ಯರಾತ್ರಿಯೊಳಗೆ ಬಾಕಿ ಹಣ ಪಾವತಿಸುವಂತೆ ಭಾರ್ತಿ ಏರ್‌ಟೆಲ್ ಹಾಗೂ ವೊಡಾಫೋನ್ ಗೆ ಆದೇಶಿಸಿದೆ.

''ಫೆಬ್ರವರಿ 14 ರ ರಾತ್ರಿ 11:59 ರೊಳಗೆ ಪರವಾನಗಿ ಶುಲ್ಕ ಮತ್ತು ಸ್ಪೆಕ್ಟ್ರಮ್ ಬಳಕೆಯ ಶುಲ್ಕವನ್ನು ಬಾಕಿ ಪಾವತಿಸಲು ನಿಮಗೆ ನಿರ್ದೇಶಿಸಲಾಗಿದೆ, " ಎಂದು ಡಿಒಟಿ ಫೆಬ್ರವರಿ 14ರಂದು ಪತ್ರದ ಮೂಲಕ ತಿಳಿಸಿತ್ತು. ಆದರೆ ಏರ್‌ಟೆಲ್‌ ಮೊದಲ ಹಂತದಲ್ಲಿ 10,000 ಕೋಟಿ ರುಪಾಯಿ ಪಾವತಿ ಮಾಡುವುದಾಗಿ ಕೇಳಿಕೊಂಡಿದೆ.

 

ಸಾವಿರಾರು ಕೋಟಿ ಬಾಕಿ ಉಳಿಸಿಕೊಂಡಿರುವ ಏರ್‌ಟೆಲ್‌, ವೊಡಾಪೋನ್ ಐಡಿಯಾ

ಸಾವಿರಾರು ಕೋಟಿ ಬಾಕಿ ಉಳಿಸಿಕೊಂಡಿರುವ ಏರ್‌ಟೆಲ್‌, ವೊಡಾಪೋನ್ ಐಡಿಯಾ

ವೊಡಾಫೋನ್ ಐಡಿಯಾ 50 ಸಾವಿರ ಕೋಟಿ, ಭಾರತಿ ಏರ್‌ಟೆಲ್ 35,586 ಕೋಟಿ ಹಾಗೂ ತನ್ನ ವ್ಯವಹಾರವನ್ನು ಏರ್‌ಟೆಲ್ ಗೆ ಮಾರಾಟ ಮಾಡಿರುವ ಟಾಟಾ ಟೆಲೆ ಸರ್ವಿಸಸ್ 14 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ.

ಏನಿದು ಬಾಕಿ ಹಣ?

ಏನಿದು ಬಾಕಿ ಹಣ?

ಹೊಂದಾಣಿಕೆಯ ಒಟ್ಟು ಆದಾಯ(AGR) ಆಧಾರದ ಮೇಲೆ ಪರವಾನಗಿ ಶುಲ್ಕ ಹಾಗೂ ಸ್ಪೆಕ್ಟ್ರಮ್ ಬಳಕೆಯ ಶುಲ್ಕವನ್ನು ಹಾಕಲಾಗುತ್ತದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಹೊಂದಾಣಿಕೆಯ ಒಟ್ಟು ಆದಾಯ ಕುರಿತಾಗಿ ವೊಡಾಫೋನ್ , ಐಡಿಯಾ ಭಾರ್ತಿ ಏರ್‌ಟೆಲ್ ಸಂಸ್ಥೆಗಳು ಒಟ್ಟಾರೆ 92,000 ಕೋಟಿ ರುಪಾಯಿಯಷ್ಟು ಬಾಕಿ ಮೊತ್ತ ಹಾಗೂ ಬಡ್ಡಿ ಸೇರಿದ ಹಣವನ್ನು ಪಾವತಿಸಬೇಕಾಗಿತ್ತು.

English summary

Airtel Says Will Pay 10,000 Crore By 20 February

Bharti Airtel will deposit ₹10,000 crore as part payment for adjusted gross revenue related dues to the department of telecommunications by 20
Story first published: Saturday, February 15, 2020, 10:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X