For Quick Alerts
ALLOW NOTIFICATIONS  
For Daily Alerts

ಏಪ್ರಿಲ್ 1 ರಿಂದ ಉದ್ಯೋಗಿಗಳ ವೇತನದಲ್ಲಿ ಭಾರೀ ಬದಲಾವಣೆ ಸಾಧ್ಯತೆ

|

ಭಾರತದ ಹೊಸ ಕಾರ್ಮಿಕ ಕಾನೂನುಗಳು ಉದ್ಯೋಗಿಗಳ ವೇತನ ರಚನೆಯಲ್ಲಿ ಹೊಸ ವ್ಯಾಖ್ಯಾನವನ್ನು ರೂಪಿಸಲಿವೆ. ಮುಂಬರುವ ಆರ್ಥಿಕ ವರ್ಷ ಏಪ್ರಿಲ್ 1ರಿಂದ ಪ್ರಾರಂಭವಾಗಲಿರುವ ವೇತನ ಸಂಬಂಧಿತ ಪುನರ್‌ರಚನೆಯು ಉದ್ಯೋಗಿಗಳ ಮೂಲ ವೇತನ, ಪಿಎಫ್ ಸೇರಿದಂತೆ ನಾನಾ ರೀತಿಯ ಭಾರೀ ಬದಲಾವಣೆಯನ್ನೇ ತರುವ ಸಾಧ್ಯತೆಯಿದೆ.

 

ಕೇಂದ್ರ ಸರ್ಕಾರವು ಹೊಸ ವೇತನ ಸಂಹಿತೆ ಮಸೂದೆ 2021ರ ಜಾರಿಗೆ ತರುವ ಮೂಲಕ ಭಾರಿ ಪ್ರಮಾಣದಲ್ಲಿ ಬದಲಾವಣೆಯನ್ನು ತರಬಹುದು. ಇದರಿಂದಾಗಿ ನಿಮ್ಮ ವೇತನ ಪ್ಯಾಕೇಜ್, ಗ್ರ್ಯಾಚುಟಿ ಮತ್ತು ರಜೆ ಸಂಬಂಧಿತ ಎನ್‌ಕ್ಯಾಶ್‌ಮೆಂಟ್ ಕೂಡ ಬದಲಾವಣೆ ಆಗಬಹುದು. ಜೊತೆಗೆ ಇದರಿಂದಾಗಿ ನಿಮ್ಮ ಟೇಕ್‌ ಹೋಂ ವೇತನದ ಮೇಲೂ ಪರಿಣಾಮ ಬೀಳುವ ಸಾಧ್ಯತೆಯಿದೆ.

ಉದ್ಯೋಗಿಗಳಿಗೆ ದೀರ್ಘಾವಧಿ ಕೊಡುಗೆಗಳ ಜೊತೆಗೆ ಮೂಲ ವೇತನ ಹಾಗೂ ಪಿಎಫ್ ಕೊಡುಗೆಯನ್ನು ಹೆಚ್ಚಿಸುವ ಯೋಜನೆಯನ್ನು ನೂತನ ವೇತನ ಸಂಹಿತೆ ಮಸೂದೆ ಹೊಂದಿದೆ.

ವೇತನ ಪುನರ್‌ರಚನೆ ಸಾಧ್ಯತೆ

ವೇತನ ಪುನರ್‌ರಚನೆ ಸಾಧ್ಯತೆ

ಹೊಸ ವೇತನ ಸಂಹಿತೆ ಮಸೂದೆ ಪ್ರಕಾರ ಇದು ಜಾರಿಯಾದಲ್ಲಿ ನಿಮ್ಮ ಒಟ್ಟಾರೆ CTCಯಲ್ಲಿ ಮೂಲ ವೇತನದ ಪ್ರಮಾಣವು ಶೇಕಡಾ 50ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ನಿಮ್ಮ ಮೂಲ ವೇತನವು ಒಟ್ಟಾರೆ CTCಯಲ್ಲಿ ಶೇಕಡಾ 50ಕ್ಕಿಂತ ಕಡಿಮೆಯಿದ್ದರೆ ಸದ್ಯದಲ್ಲೇ ಬದಲಾವಣೆ ಆಗುವ ಸಾಧ್ಯತೆಯಿದೆ.

ಹೊಸ ನಿಯಮಗಳು ಜಾರಿಯಾಗಿದ್ದೇ ಆದಲ್ಲಿ ನಿಮ್ಮ ಮೂಲ ವೇತನದ ಜೊತೆಗೆ ನಿಮ್ಮ CTCಯು ಹೆಚ್ಚಾಗುವ ಸಾಧ್ಯತೆಯಿದೆ. ನಿಮಗೆ ನೀಡುವ ಭತ್ಯೆ, (ಮನೆ ಬಾಡಿಗೆ, ಪ್ರಯಾಣ ಭತ್ಯೆ, ಓಟಿ,) ನಿಮ್ಮ ಉಳಿದ ಶೇಕಡಾ 50ರಷ್ಟು CTCಯನ್ನು ಒಳಗೊಳ್ಳಲಿದೆ.

 

ಪಿಎಫ್‌ ಕೊಡುಗೆ ಹೆಚ್ಚಾಗಬಹುದು

ಪಿಎಫ್‌ ಕೊಡುಗೆ ಹೆಚ್ಚಾಗಬಹುದು

ಸದ್ಯ ನಿಮ್ಮ ಮೂಲ ವೇತನದಲ್ಲಿ ಶೇಕಡಾ 12ರಷ್ಟು ಹಣವನ್ನು ಪಿಎಫ್ ಕೊಡುಗೆಯಾಗಿ ನೀಡಲಾಗುವುದು. ಆದರೆ ಯಾವಾಗ ನಿಮ್ಮ CTCಯಲ್ಲಿ ಮೂಲ ವೇತನವು ಶೇಕಡಾ 50ರಷ್ಟು ಹೆಚ್ಚಾದಾಗ, ನಿಮ್ಮ ಪಿಎಫ್ ಕೊಡುಗೆ ಕೂಡ ಹೆಚ್ಚಾಗುವುದು. ಉದಾಹರಣೆಗೆ ನಿಮ್ಮ ತಿಂಗಳ ವೇತನ 20,000 ರೂಪಾಯಿ ಆಗಿದ್ದರೆ, ಮೂಲ ವೇತನವು 10,000 ರೂಪಾಯಿ ಆಗಿರಲಿದೆ ಮತ್ತು 1,200 ರೂಪಾಯಿ ಪಿಎಫ್‌ ಕೊಡುಗೆಯಾಗಿ ಅಕೌಂಟ್‌ಗೆ ಸೇರಲಿದೆ.

ಹೊಸ ಗ್ರಾಚ್ಯುಟಿ ನಿಯಮ
 

ಹೊಸ ಗ್ರಾಚ್ಯುಟಿ ನಿಯಮ

ಹೊಸ ವೇತನ ಸಂಹಿತೆ ಮಸೂದೆ ಪ್ರಕಾರ ಗ್ರಾಚ್ಯುಟಿ ನಿಯಮಗಳು ಕೂಡ ಬದಲಾವಣೆ ಆಗಲಿದೆ. ಸದ್ಯ ಯಾವುದೇ ಉದ್ಯೋಗಿಯು ಒಂದೇ ಕಂಪನಿಯಲ್ಲಿ ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಬಳಿಕ ಗ್ರಾಚ್ಯುಟಿ ಕೊಡುಗೆ ಸಿಗಲಿದೆ. ಆದರೆ ಹೊಸ ನಿಯಮಗಳ ಪ್ರಕಾರ ಉದ್ಯೋಗಿಯು ಕಂಪನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಿಸಿದರು ಗ್ರಾಚ್ಯುಟಿ ಸಿಗಲಿದೆ.

ಡಿಎ ಹೆಚ್ಚಳ ಸಾಧ್ಯತೆ

ಡಿಎ ಹೆಚ್ಚಳ ಸಾಧ್ಯತೆ

ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಭರ್ಜರಿಯಾದ ಕೊಡುಗೆ ನೀಡುವ ಸಾಧ್ಯತೆಯಿದೆ. ಕೊರೊನಾವೈರಸ್ ಕಾರಣ ತಡೆಹಿಡಿಯಲಾಗಿದ್ದ ತುಟ್ಟಿಭತ್ಯೆಯನ್ನು ಶೇಕಡಾ 4ರಷ್ಟು ಹೆಚ್ಚಿಸುವ ಯೋಜನೆಯಿದೆ.

ಕೇಂದ್ರದ ಉದ್ಯೋಗಿಗಳು ಈವರೆಗೆ ಶೇ.17ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ಕೊರೋನಾ ಕಾರಣ ಅವರಿಗೆ 2020ರ ಜ.1, ಜು.1 ಹಾಗೂ 2021ರ ಜ.1ರ ಡಿಎ ಕಂತು ಬಿಡುಗಡೆ ಆಗಿರಲಿಲ್ಲ. ಆದರೆ ಈಗ ಒಮ್ಮೆಲೇ ಜುಲೈ 1ರಂದು ತಡೆ ಹಿಡಿದ 3 ಕಂತು ಸೇರಿ 4 ಕಂತಿನ ಡಿಎ ಬಿಡುಗೆಯಾಗಬಹುದು. ಸದ್ಯ ಇರುವ ಶೇ.17ರಷ್ಟು ತುಟ್ಟಿಭತ್ಯೆ ಶೇಕಡಾ 25ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ (17+4+4).

 

2.5 ಲಕ್ಷ ರೂ.ಗಿಂತ ಹೆಚ್ಚಿನ ಹಣಕ್ಕೆ ತೆರಿಗೆ

2.5 ಲಕ್ಷ ರೂ.ಗಿಂತ ಹೆಚ್ಚಿನ ಹಣಕ್ಕೆ ತೆರಿಗೆ

ಇಪಿಎಫ್‌ನಲ್ಲಿ ವಾರ್ಷಿಕವಾಗಿ 2.5 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ನೌಕರರ ಭವಿಷ್ಯ ನಿಧಿಯಲ್ಲಿ (ಇಪಿಎಫ್) ಠೇವಣಿ ಇಟ್ಟರೆ ಅಂತಹ ಠೇವಣಿಗಳಿಗೆ ತೆರಿಗೆ ವಿಧಿಸಲಾಗುತ್ತದೆ. ಈ ಬದಲಾವಣೆಯು ಹೆಚ್ಚಿನ ಆದಾಯ ಗಳಿಸುವವರ ಮೇಲೆ ಮತ್ತು ಇಪಿಎಫ್‌ಗೆ ಹೆಚ್ಚಿನ ಮೊತ್ತವನ್ನು ನೀಡುವವರ ಮೇಲೆ ತೆರಿಗೆ ಹೊರೆ ವಿಧಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಹೇಳಿದೆ.

ಹಿರಿಯ ನಾಗರಿಕರಿಗೆ ತೆರಿಗೆ ಪ್ರಯೋಜನ

ಹಿರಿಯ ನಾಗರಿಕರಿಗೆ ತೆರಿಗೆ ಪ್ರಯೋಜನ

75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಪಿಂಚಣಿ ಪಡೆಯುತ್ತಿದ್ದರೆ ಮತ್ತು ಅದೇ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಗಳನ್ನು ಹೊಂದಿದ್ದು ಅದರ ಮೇಲಿನ ಬಡ್ಡಿಗೆ ತೆರಿಗೆ ವಿನಾಯಿತಿ ಪಡೆಯಲಿದ್ದಾರೆ. 1 ಏಪ್ರಿಲ್ 2021 ರಿಂದ ಐಟಿ ರಿಟರ್ನ್ಸ್ ಸಲ್ಲಿಸುವ ಅಗತ್ಯವಿಲ್ಲದೇ ಕೇಂದ್ರವು ಈ ರೀತಿಯ ಪ್ರಸ್ತಾಪಗಳನ್ನು ತಂದಿದೆ.

English summary

Alert: Big Change Expected In Employees Salary Structure From Next Month

India's New Labour codes, which include a revised definition of wages are supposed to kick in starting April 1.
Story first published: Tuesday, March 23, 2021, 15:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X