For Quick Alerts
ALLOW NOTIFICATIONS  
For Daily Alerts

ಶ್ರೀಮಂತ ಅಮೆರಿಕನ್ ಆಗಿ ಮುಂದುವರಿದ ಬೆಜೋಸ್, ನಷ್ಟದಲ್ಲಿ ಟ್ರಂಪ್

|

ಅಮೆಜಾನ್ ಸಿಇಒ ಜೆಫ್ ಬೆಜೋಸ್ ಸತತ ಮೂರನೇ ವರ್ಷ ಫೋರ್ಬ್ಸ್ ಪಟ್ಟಿಯಲ್ಲಿ ಅತ್ಯಂತ ಶ್ರೀಮಂತ ಅಮೆರಿಕನ್ ಆಗಿ ಮುಂದುವರಿದಿದ್ದಾರೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಕಚೇರಿ ಕಟ್ಟಡ, ಹೋಟೆಲ್ ಮತ್ತು ರೆಸಾರ್ಟ್ ಗಳಿಗೆ ಪೆಟ್ಟು ಬಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ರೇಯಾಂಕದಲ್ಲಿ ಇಳಿಕೆ ಆಗಿದೆ.

ಫೋರ್ಬ್ಸ್ 400ರ ಪಟ್ಟಿಯಲ್ಲಿ ಇರುವವರ ಸರಾಸರಿ ಸಂಪತ್ತು 3.2 ಲಕ್ಷ ಕೋಟಿ ಅಮೆರಿಕನ್ ಡಾಲರ್ ಗೆ ಹೆಚ್ಚಳವಾಗಿದೆ. ಕೊರೊನಾದ ಕಾರಣಕ್ಕೆ ಆರ್ಥಿಕತೆಗೆ ಭರ್ತಿ ಪೆಟ್ಟು ಬಿದ್ದಿದ್ದರೂ ಹಾಗೂ ಹದಿನೆಂಟು ಲಕ್ಷ ಅಮೆರಿಕನ್ನರು ಉದ್ಯೋಗ ಕಳೆದುಕೊಳ್ಳುವಂತಾಗಿದ್ದರೂ ಶ್ರೀಮಂತ ಅಮೆರಿಕನ್ನರ ಆಸ್ತಿಯಲ್ಲಿ ಮಾತ್ರ ಹೆಚ್ಚಳವೇ ಕಂಡಿದೆ.

ಒಂದೆರಡು ಸಿನಿಮಾ ನೋಡುವ ಟೈಮಲ್ಲಿ ಆತನ ಆಸ್ತಿ 30 ಸಾವಿರ ಕೋಟಿ 'ಜೂಮ್'ಒಂದೆರಡು ಸಿನಿಮಾ ನೋಡುವ ಟೈಮಲ್ಲಿ ಆತನ ಆಸ್ತಿ 30 ಸಾವಿರ ಕೋಟಿ 'ಜೂಮ್'

ಜೂಮ್ ವಿಡಿಯೋ ಸಿಇಒ ಎರಿಕ್ ಯುವಾನ್ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಹದಿನೆಂಟು ಹೊಸಬರಲ್ಲಿ ಒಬ್ಬರು. ಅವರ ಆಸ್ತಿ ಮೌಲ್ಯ 1100 ಕೋಟಿ ಅಮೆರಿಕನ್ ಡಾಲರ್ ಇದೆ. ಕಳೆದ ವರ್ಷ 310 ಕೋಟಿ ಅಮೆರಿಕನ್ ಡಾಲರ್ ಆಸ್ತಿಯೊಂದಿಗೆ 275ನೇ ಸ್ಥಾನದಲ್ಲಿದ್ದ ಡೊನಾಲ್ಡ್ ಟ್ರಂಪ್, ಈ ವರ್ಷ 250 ಕೋಟಿ ಅಮೆರಿಕನ್ ಡಾಲರ್ ಆಸ್ತಿಯೊಂದಿಗೆ 352ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಶ್ರೀಮಂತ ಅಮೆರಿಕನ್ ಆಗಿ ಮುಂದುವರಿದ ಬೆಜೋಸ್, ನಷ್ಟದಲ್ಲಿ ಟ್ರಂಪ್

ಟ್ರಂಪ್ ಸಂಸ್ಥೆ ಹೊಂದಿರುವ ಕಚೇರಿ ಕಟ್ಟಡಗಳು, ಹೋಟೆಲ್ ಹಾಗೂ ರೆಸಾರ್ಟ್ ಗಳು ಕೊರೊನಾ ಕಾರಣಕ್ಕೆ ಭಾರೀ ನಷ್ಟ ಅನುಭವಿಸಿವೆ. ಆದ್ದರಿಂದ ಟ್ರಂಪ್ ಆಸ್ತಿಯ ಮೌಲ್ಯವು ಕಡಿಮೆ ಆಗಿದೆ. ಈ ವಾರ್ಷಿಕ ಪಟ್ಟಿಯು ಅಮೆರಿಕದ ಶ್ರೀಮಂತರ ಆಸ್ತಿ ಮೌಲ್ಯ ಎಷ್ಟು ಎಂಬುದನ್ನು ಹಾಗೂ ಆ ಮೂಲಕ ಅವರಿಗೆ ಇರುವ ಅಧಿಕಾರವನ್ನು ತಿಳಿಸುತ್ತದೆ ಎಂದು ಫೋರ್ಬ್ಸ್ ಕಾರ್ಯ ನಿರ್ವಾಹಕ ಸಂಪಾದಕರು ಟೀವಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

English summary

Amazon CEO Jeff Bezos Continue As Richest American In Forbes List: Trump Poorer Due To Corona

Forbes 400 richest American list released. Amazon CEO Jeff Bezos continued to be number 1 for consecutive 3rd year. American president Donald Trump wealth dropped.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X