For Quick Alerts
ALLOW NOTIFICATIONS  
For Daily Alerts

ಬಾಹ್ಯಾಕಾಶಕ್ಕೆ ಹಾರಲಿರುವ ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್‌ ಬೇಜೋಸ್

|

ವಿಶ್ವದ ಶ್ರೀಮಂತ ವ್ಯಕ್ತಿ, ಅಮೆಜಾನ್ ಸಂಸ್ಥಾಪಕ ಮತ್ತು ಸಿಇಒ ಜೆಫ್‌ ಬೇಜೋಸ್‌ ಜುಲೈ 20ರಂದು ತನ್ನ ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳಲು ಬಾಹ್ಯಾಕಾಶಕ್ಕೆ ಜಿಗಿಯಲಿದ್ದಾರೆ.

ಬಾಹ್ಯಾಕಾಶ ಪರಿಶೋಧಾನಾ ಕಂಪನಿಯಾದ ಬ್ಲೂ ಒರಿಜಿನ್‌ನ ಮೊದಲ ಮಾನವ ಬಾಹ್ಯಾಕಾಶ ಹಾರಾಟದ ಮಿಷನ್‌ನಲ್ಲಿ ಜೆಫ್‌ ಬೇಜೋಸ್ ಕೂಡ ಬುಕ್ ಮಾಡಿದ್ದು, ಜುಲೈ 20ರಂದು ಬಾಹ್ಯಾಕಾಶಕ್ಕೆ ಹಾರಲಿದ್ದಾರೆ.

ಬಾಹ್ಯಾಕಾಶಕ್ಕೆ ಹಾರಲಿರುವ ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್‌ ಬೇಜೋಸ್

ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ತಿಳಿಸಿರುವಂತೆ ಬೇಜೋಸ್ ಅವರು, ಅವರ ಸಹೋದರ ಮಾರ್ಕ್ ಬೇಜೋಸ್‌ ಮತ್ತು ಸದ್ಯ ನಡೆಯುತ್ತಿರುವ ಹರಾಜಿನ ವಿಜೇತರು ಜುಲೈ 20ರಂದು ನಿಗದಿಯಿರುವ ಉಡಾವಣೆಯ ಸಮಯದಲ್ಲಿ ಬ್ಲೂ ಒರಿಜಿನ್‌ನ ಹೊಸ ಶೆಪರ್ಡ್‌ ಬಾಹ್ಯಾಕಾಶ ನೌಕೆಯ ಮೂಲಕ ಆಗಸಕ್ಕೆ ಜಿಗಿಯಲಿದ್ದಾರೆ ಎಂದು ಹೇಳಿದ್ದಾರೆ.

"ನಾನು ಐದು ವರ್ಷದವನಾಗಿದ್ದಾಗಿನಿಂದ, ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಕನಸು ಕಂಡಿದ್ದೇನೆ. ಜುಲೈ 20 ರಂದು ನಾನು ನನ್ನ ಸಹೋದರನೊಂದಿಗೆ ಆ ಪ್ರಯಾಣವನ್ನು ಮಾಡಲಿದ್ದೇನೆ" ಎಂದು ಜೆಫ್ ಬೇಜೋಸ್ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಜುಲೈ 20 ಅಪೊಲೊ 11 ನೌಕೆಯು ಚಂದ್ರನ ಮೇಲೆ ಲ್ಯಾಂಡ್ ಆದ ವಾರ್ಷಿಕೋತ್ಸವದ ದಿನದಂದು, ಈ ಪ್ರವಾಸವನ್ನು ನಿಗದಿ ಮಾಡಲಾಗಿದೆ. ಇದೇ ದಿನ ಟೆಕ್ಸಾಸ್‌ನಿಂದ ಬಾಹ್ಯಾಕಾಶಕ್ಕೆ ನೌಕೆ ಉಡಾವಣೆ ಆಗಲಿದೆ.

ನ್ಯೂ ಶೆಪರ್ಡ್ ವಾಹನದಲ್ಲಿ ಬಾಹ್ಯಾಕಾಶಕ್ಕೆ ಹೋಗಲು ಆಸನಕ್ಕಾಗಿ ನಡೆಯುತ್ತಿರುವ ಹರಾಜು ಶನಿವಾರ ಕೊನೆಗೊಳ್ಳಲಿದೆ. ಇದೀಗ ಬಿಡ್ಡಿಂಗ್ ಮೊತ್ತ 2.8 ಮಿಲಿಯನ್ ಡಾಲರ್‌ಗಳಷ್ಟಿದೆ. 143 ದೇಶಗಳಿಂದ ಸುಮಾರು 6,000 ಜನರು ಇದರಲ್ಲಿ ಭಾಗಿಯಾಗಿದ್ದಾರೆ.

ಜೆಫ್ ಬೇಜೋಸ್ ಜುಲೈ 5ರಂದು ಅಮೆಜಾನ್ ಸಿಇಒ ಸ್ಥಾನದಿಂದ ಕೆಳಗಿಳಿಯುವುದಾಗಿ ಈಗಾಗಲೇ ತಿಳಿಸಿದ್ದಾರೆ. ಕಂಪನಿಯ ನಿಯಂತ್ರಣವನ್ನು ತನ್ನ ಉತ್ತರಾಧಿಕಾರಿ ಆಂಡಿ ಜಾಸ್ಸಿಗೆ ಹಸ್ತಾಂತರಿಸಲಿದ್ದಾರೆ.

English summary

Amazon Founder Jeff Bezos To Fly To Space On July 20

Amazon founder Jeff Bezos will fly to space on July 20 on his space exploration company Blue Origin's first human space flight.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X