For Quick Alerts
ALLOW NOTIFICATIONS  
For Daily Alerts

ಅಮೆಜಾನ್ ನಿಂದ ಆಗಸ್ಟ್ 11ರ ತನಕ "ಸ್ವಾತಂತ್ರ್ಯ ದಿನ"ದ ಮಾರಾಟ

|

ಆಗಸ್ಟ್ 6 ಮತ್ತು 7ರಂದು ನಡೆದ ಎರಡು ದಿನಗಳ ಅಮೆಜಾನ್ "ಪ್ರೈಮ್ ಡೇ" ಮಾರಾಟದ ಯಶಸ್ಸಿನ ಬೆನ್ನಿಗೇ ಶನಿವಾರದಂದು "ಸ್ವಾತಂತ್ರ್ಯ ದಿನ"ದ ಮಾರಾಟವನ್ನು ಘೋಷಣೆ ಮಾಡಲಾಗಿದೆ. ಆಗಸ್ಟ್ 11ನೇ ತಾರೀಕಿನವರೆಗೆ ಇದು ನಡೆಯುತ್ತದೆ. ಹೆಸರಾಂತ ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್ ಗಳು, ಟೀವಿಗಳು, ಅಮೆಜಾನ್ ಸಲಕರಣೆಗಳು ಸೇರಿದಂತೆ ನೂರಾರು ಉತ್ಪನ್ನಗಳ ಮೇಲೆ ಆಫರ್ ಗಳಿವೆ.

ಕನಿಷ್ಠ 5000 ರುಪಾಯಿ ಮೊತ್ತಕ್ಕೆ ಖರೀದಿ ಮಾಡಿರಬೇಕು. ಆಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್ ಬಳಸಿದರೆ 10% ರಿಯಾಯಿತಿ ತಕ್ಷಣ ದೊರೆಯುತ್ತದೆ. ಗರಿಷ್ಠ 1500 ರುಪಾಯಿವರೆಗೂ ರಿಯಾಯಿತಿ ಸಿಗುತ್ತದೆ. ಒಂದು ವೇಳೆ ತಮ್ಮ ಬಜೆಟ್ ಗೆ ಮೀರಿದ ಮೊತ್ತ ಆಗಿದ್ದಲ್ಲಿ ನೋ ಕಾಸ್ಟ್ EMI ಆಯ್ಕೆ ಮಾಡಿಕೊಳ್ಳಬಹುದು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಬಜಾಜ್ ಫೈನಾನ್ಸ್ ಸರ್ವೀಸ್ ಮತ್ತು ಅಮೆಜಾನ್ ಪೇನಿಂದ ಇಎಂಐಗೆ ಪರಿವರ್ತನೆ ಮಾಡಿಸಬಹುದು.

 

ಜಿಯೋಮಾರ್ಟ್ ನಲ್ಲಿ 9.9% ಷೇರು ಖರೀದಿಸುವುದಕ್ಕೆ ಅಮೆಜಾನ್ ಮಾತುಕತೆ

ಹೆಡ್ ಫೋನ್ ಗಳ ಮೇಲೆ 70% ತನಕ ಕಡಿತ ಸಿಗುತ್ತದೆ. ಕ್ಯಾಮೆರಾ ಸಲಕರಣೆಗಳಿಗೆ 70% ತನಕ ಕಡಿತ ಹಾಗೂ ಸ್ಪೀಕರ್ ಮತ್ತು ಹೋಮ್ ಆಡಿಯೋ ಮೇಲೆ 60 ಪರ್ಸೆಂಟ್ ವರೆಗೆ ಕಡಿತ ಆಗುತ್ತದೆ. ಲ್ಯಾಪ್ ಟಾಪ್ ಗಳ ಮೇಲೆ 30% ತನಕ, ಪ್ರಿಂಟರ್ಸ್ ಗಳ ಮೇಲೆ 50% ವರೆಗೆ, ಗೇಮಿಂಗ್ ಸಲಕರಣೆಗಳ ಮೇಲೆ 40% ತನಕ ಹಾಗೂ ಸ್ಮಾರ್ಟ್ ವಾಚ್ ಗಳಿಗೆ 60%ವರೆಗೆ ಕಡಿತ ಆಗುತ್ತದೆ.

ಅಮೆಜಾನ್ ನಿಂದ ಆಗಸ್ಟ್ 11ರ ತನಕ

ಕಂಪ್ಯೂಟರ್ ಸಲಕರಣೆಗಳು, ಪೆರಿಫೆರಲ್ಸ್ 99 ರುಪಾಯಿಯಿಂದ ದೊರೆತರೆ, ಫಿಟ್ ನೆಸ್ ಟ್ರ್ಯಾಕರ್ ಗಳ ಬೆಲೆ 999 ರುಪಾಯಿಯಿಂದ ಶುರುವಾಗುತ್ತದೆ.

English summary

Amazon 'Freedom Day' Sale Till August 11

After the success of Amazon 'Prime Day' sale, "Freedom Sale" announced till August 11th. Here is the details.
Company Search
COVID-19