For Quick Alerts
ALLOW NOTIFICATIONS  
For Daily Alerts

ಜಿಯೋಮಾರ್ಟ್ ನಲ್ಲಿ 9.9% ಷೇರು ಖರೀದಿಸುವುದಕ್ಕೆ ಅಮೆಜಾನ್ ಮಾತುಕತೆ

|

ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ರೀಟೇಲ್ ವ್ಯವಹಾರ ಅಂಗ ಸಂಸ್ಥೆ ಜಿಯೋ ಮಾರ್ಟ್ ನಲ್ಲಿ 9.9 ಪರ್ಸೆಂಟ್ ಷೇರಿನ ಪಾಲು ಖರೀದಿಸಲು ಮಾತುಕತೆ ನಡೆಸಿದೆ ಎಂದು ಗುರುವಾರ ಮೂಲಗಳು ತಿಳಿಸಿವೆ. ಜಿಯೋ ಮಾರ್ಟ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಇ ಕಾಮರ್ಸ್ ವ್ಯವಹಾರದ ಭಾಗ. ಮೇ ತಿಂಗಳಲ್ಲಿ ಜಿಯೋ ಮಾರ್ಟ್ ಆರಂಭವಾಗಿದೆ.

ಈ ಕಂಪೆನಿಯಿಂದ ಅಮೆಜಾನ್.ಕಾಮ್ ಹಾಗೂ ವಾಲ್ ಮಾರ್ಟ್ ಕಂಪೆನಿಯ ಫ್ಲಿಪ್ ಕಾರ್ಟ್ ಗೆ ಸವಾಲು ಒಡ್ಡುತ್ತಿದೆ. ಈ ವರ್ಷದ ಆರಂಭದಲ್ಲಿ ಅಮೆಜಾನ್ ಇಂಡಿಯಾವು ತನ್ನ ಪ್ಲಾಟ್ ಫಾರ್ಮ್ ಗೆ ಸಣ್ಣ ಮಳಿಗೆಗಳನ್ನು ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮ ಆರಂಭಿಸಿತು. ಕೊರೊನಾ ಕಾರಣಕ್ಕೆ ಭಾರತದಲ್ಲಿ ಲಾಕ್ ಡೌನ್ ಜಾರಿಗೆ ಬಂದ ಮೇಲೆ ಈ ಬೆಳವಣಿಗೆ ನಡೆದಿದೆ.

ಮುಕೇಶ್ ಅಂಬಾನಿ ವಿಶ್ವದ 6ನೇ ಅತ್ಯಂತ ಸಿರಿವಂತ: ಆಸ್ತಿ ಮೌಲ್ಯ 7240 ಕೋಟಿ USDಮುಕೇಶ್ ಅಂಬಾನಿ ವಿಶ್ವದ 6ನೇ ಅತ್ಯಂತ ಸಿರಿವಂತ: ಆಸ್ತಿ ಮೌಲ್ಯ 7240 ಕೋಟಿ USD

ಆದರೆ, ಈ ಬೆಳವಣಿಗೆ ಕುರಿತಾದ ಯಾವುದೇ ಊಹೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅಮೆಜಾನ್ ವಕ್ತಾರರು ಇಮೇಲ್ ಮೂಲಕ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಇದೇ ವೇಳೆ ರಿಲಯನ್ಸ್ ಕೂಡ ಪ್ರತಿಕ್ರಿಯೆ ನೀಡಿಲ್ಲ. ಏಷ್ಯಾ ಖಂಡದ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ನೇತೃತ್ವ ವಹಿಸಿದ್ದಾರೆ.

ಜಿಯೋಮಾರ್ಟ್ ನಲ್ಲಿ 9.9% ಷೇರು ಖರೀದಿಸುವುದಕ್ಕೆ ಅಮೆಜಾನ್ ಮಾತುಕತೆ

ಏಪ್ರಿಲ್ ಕೊನೆ ಭಾಗದಿಂದ ಈಚೆಗೆ ಕಂಪೆನಿಯು 2000 ಕೋಟಿ ಅಮೆರಿಕನ್ ಡಾಲರ್ ಅನ್ನು ಡಿಜಿಟಲ್ ಅಂಗ ಸಂಸ್ಥೆಗಾಗಿ ಜಿಯೋಗಾಗಿ ಸಂಗ್ರಹಿಸಿದೆ. ಅದರಲ್ಲಿ ಗೂಗಲ್, ಫೇಸ್ ಬುಕ್ ಸೇರಿದಂತೆ ಇತರ ಕಂಪೆನಿಗಳು ಹೂಡಿಕೆ ಮಾಡಿವೆ.

English summary

Amazon In Talk To Invest In Reliance Retail Arm JioMart

According to sources, Amazon talk to purchase 9.9% stake in Reliance retail arm JioMart. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X