For Quick Alerts
ALLOW NOTIFICATIONS  
For Daily Alerts

ಫ್ಯೂಚರ್- ರಿಲಯನ್ಸ್ ಆಸ್ತಿ ವ್ಯವಹಾರ: ಸುಪ್ರೀಂ ಮೆಟ್ಟಿಲೇರಿದ ಅಮೆಜಾನ್

By ಅನಿಲ್ ಆಚಾರ್
|

ಜೆಫ್ ಬೆಜೋಸ್ ನೇತೃತ್ವದ ಅಮೆಜಾನ್.ಕಾಮ್ ನಿಂದ ಫ್ಯೂಚರ್ ಗ್ರೂಪ್ ನ 3.4 ಬಿಲಿಯನ್ ಯುಎಸ್ ಡಿ ಆಸ್ತಿ ಮಾರಾಟ ವ್ಯವಹಾರ ವಿರುದ್ಧದ ಕಾನೂನು ಹೋರಾಟವನ್ನು ಗುರುವಾರ ಸುಪ್ರೀಮ್ ಕೋರ್ಟ್ ಗೆ ಒಯ್ದಿದೆ. ಫ್ಯೂಚರ್ ಗ್ರೂಪ್ ಆಸ್ತಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಖರೀದಿ ಮಾಡದಂತೆ ತಡೆ ತರಬೇಕು ಎಂಬುದು ಅಮೆಜಾನ್ ಉದ್ದೇಶ.

ಅಮೆಜಾನ್ ಆರೋಪಿಸಿರುವ ಪ್ರಕಾರ, ಫ್ಯೂಚರ್ ಸಮೂಹವು ಕಳೆದ ವರ್ಷ ರಿಲಯನ್ಸ್ ಇಂಡಸ್ಟ್ರೀಸ್ ಗೆ ರೀಟೇಲ್ ಆಸ್ತಿ ಮಾರಾಟ ಮಾಡುವುದಕ್ಕೆ ಒಪ್ಪಿಗೆ ಸೂಚಿಸುವ ಮೂಲಕ ಒಪ್ಪಂದದ ಉಲಂಘನೆ ಮಾಡುತ್ತಿದೆ ಎಂದು ಆರೋಪಿಸಿದೆ. ಆದರೆ ಈ ಆರೋಪವನ್ನು ಫ್ಯೂಚರ್ ನಿರಾಕರಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್- ಫ್ಯೂಚರ್ ಸಮೂಹದ ವ್ಯವಹಾರಕ್ಕೆ ಸೆಬಿ ಸಮ್ಮತಿರಿಲಯನ್ಸ್ ಇಂಡಸ್ಟ್ರೀಸ್- ಫ್ಯೂಚರ್ ಸಮೂಹದ ವ್ಯವಹಾರಕ್ಕೆ ಸೆಬಿ ಸಮ್ಮತಿ

ಇದಕ್ಕೂ ಮುಂಚೆ ಕೋರ್ಟ್ ನೀಡಿದ್ದ ತೀರ್ಮಾನ ತೆರವುಗೊಳಿಸುವ ಮೂಲಕ ಈ ವಾರ ನವದೆಹಲಿಯ ಕೋರ್ಟ್ ಆದೇಶದಿಂದ ಅಮೆಜಾನ್ ಗೆ ಹಿನ್ನಡೆಯಾಯಿತು. ಈಗ ಆ ಆದೇಶದ ವಿರುದ್ಧ ಅಮೆಜಾನ್ ನಿಂದ ಸುಪ್ರೀಮ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

ಫ್ಯೂಚರ್- ರಿಲಯನ್ಸ್ ಆಸ್ತಿ ವ್ಯವಹಾರ: ಸುಪ್ರೀಂ ಮೆಟ್ಟಿಲೇರಿದ ಅಮೆಜಾನ್

ಅಮೆಜಾನ್ ಸಲ್ಲಿಸಿರುವ ಅರ್ಜಿಯಲ್ಲಿ, ದೆಹಲಿ ಕೋರ್ಟ್ ಆದೇಶ "ಕಾನೂನುಬಾಹಿರ" ಮತ್ತು "ನಿರಂಕುಶ". ಒಂದು ವೇಳೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡದಿದ್ದಲ್ಲಿ ಇದರಿಂದ ಕಂಪೆನಿಗೆ "ಸರಿಪಡಿಸಲಾಗದಂಥ ಹಾನಿ" ಆಗುತ್ತದೆ. ಒಪ್ಪಂದ ಪೂರ್ತಿ ಆಗುವ ಕಡೆಗೆ ಈ ವ್ಯವಹಾರ ಸಾಗಿದರೆ ಬಿಡಿಸಲು ಸಾಧ್ಯವಾಗದಂಥ ಗೋಜಲಾಗುತ್ತದೆ ಎಂದು ಹೇಳಿದೆ. ಆದರೆ ಈ ಅರ್ಜಿ ವಿಚಾರವಾಗಿ ಅಮೆಜಾನ್ ಅಥವಾ ಫ್ಯೂಚರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಫ್ಯೂಚರ್ ಆಸ್ತಿ ಮಾರಾಟ ವಿಚಾರವು ಅಮೆಜಾನ್ ಸಿಇಒ- ವಿಶ್ವದ ಶ್ರೀಮಂತರಾದ ಜೆಫ್ ಬೆಜೋಸ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಮಧ್ಯೆ ಕಾನೂನು ಸಮರಕ್ಕೆ ಕಾರಣವಾಗಿದೆ. ಕಳೆದ ಆಗಸ್ಟ್ ನಲ್ಲಿ ಫ್ಯೂಚರ್ ಗ್ರೂಪ್ ತನ್ನ ರೀಟೇಲ್, ಹೋಲ್ ಸೇಲ್ ಹಾಗೂ ಕೆಲವು ಉದ್ಯಮವನ್ನು ರಿಲಯನ್ಸ್ ಗೆ ಮಾರಾಟ ಮಾಡುವುದಕ್ಕೆ ಒಪ್ಪಿಕೊಂಡಿತ್ತು.

ಆದರೆ, ಅಮೆಜಾನ್ ವಾದ ಮಂಡಿಸಿದ ಪ್ರಕಾರ, 2019ರಲ್ಲಿ ಮಾಡಿಕೊಂಡ ಒಪ್ಪಂದದಂತೆ ಫ್ಯೂಚರ್ ತನ್ನ ರೀಟೇಲ್ ವ್ಯವಹಾರವನ್ನು ರಿಲಯನ್ಸ್ ಸೇರಿದಂತೆ "ನಿರ್ಬಂಧಿತ ವ್ಯಕ್ತಿಗಳ" ಪಟ್ಟಿಯಲ್ಲಿ ಇರುವವರಿಗೆ ಮಾರುವಂತಿಲ್ಲ. ಅಂದ ಹಾಗೆ 1700 ಮಳಿಗೆಗಳಿರುವ ಫ್ಯೂಚರ್ ಭಾರತದ ಎರಡನೇ ಅತಿ ದೊಡ್ಡ ರೀಟೇಲರ್.

English summary

Amazon Moves To Supreme Court Over Reliance- Future Deal

E commerce giant Amazon move to India's Supreme Court over Reliance- Future group deal.
Story first published: Friday, February 12, 2021, 11:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X