For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್ ಭೀತಿ: 1 ಲಕ್ಷ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಿರುವ ಅಮೆಜಾನ್‌

|

ವಿಶ್ವದಾದ್ಯಂತ ಕೊರೊನಾವೈರಸ್ ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದು, ಅಮೆರಿಕಾದಲ್ಲೂ ಇದರ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಜನರು ಆಚೆ ಬರಲು ಹೆದರುತ್ತಿದ್ದು ಆನ್‌ಲೈನ್ ಆರ್ಡರ್‌ಗೆ ಹೆಚ್ಚು ಮೊರೆ ಹೋಗಿದ್ದಾರೆ. ಹೀಗಾಗಿ ಇ ಕಾಮರ್ಸ್ ದಿಗ್ಗಜ ಅಮೆಜಾನ್ 1 ಲಕ್ಷ ಕಾರ್ಮಿಕರನ್ನು(ಡಿಲಿವರ್ ವರ್ಕರ್ಸ್) ನೇಮಕ ಮಾಡಿಕೊಳ್ಳಲು ಮುಂದಾಗಿದೆ.

 

ಸೋಮವಾರ ಈ ಕುರಿತು ಅಧಿಕೃತವಾಗಿ ತಿಳಿಸಿರುವ ಅಮೆಜಾನ್ ಆನ್‌ಲೈನ್ ಬೇಡಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಎದುರಿಸಲು ಅಮೆರಿಕಾದಲ್ಲಿ 1 ಲಕ್ಷ ಡೆಲಿವರಿ ವರ್ಕರ್ಸ್ ನೇಮಿಸಿಕೊಳ್ಳುವುದಾಗಿ ಹೇಳಿದೆ. ಕೊರೊನಾವೈರಸ್ ಭೀತಿಯಿಂದ ಜನರು ತಮ್ಮ ಅಗತ್ಯಗಳನ್ನು ಪೂರೈಸಲು ವೆಬ್‌ನತ್ತ ಮುಖ ಮಾಡಿದ್ದಾರೆ.

 
1 ಲಕ್ಷ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಿರುವ ಅಮೆಜಾನ್‌

ಅಮೆಜಾನ್ ಮಾದರಿಯಲ್ಲೇ ಯು.ಎಸ್. ಸೂಪರ್ ಮಾರ್ಕೆಟ್ ಸರಪಳಿಗಳಾದ ಆಲ್ಬರ್ಟ್‌ಸನ್ಸ್‌, ಕ್ರೊಗರ್ ಮತ್ತು ರೇಲಿಗಳು ಹೊಸ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿವೆ.

''ಪರಿಸ್ಥಿತಿಯು ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಮತ್ತು ಅವರ ಹಿಂದಿನ ಉದ್ಯೋಗದಾತರು ಅವರನ್ನು ಮತ್ತೆ ಮರಳಿ ಕಂಪನಿಗೆ ಕರೆಸಿಕೊಳ್ಳುವವರೆಗೂ ನಾವು ಕಾರ್ಮಿಕರನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಸ್ವಾಗತಿಸುತ್ತೇವೆ ''ಎಂದು ಅಮೆಜಾನ್ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

ಡೆಲಿವರಿ ವರ್ಕರ್ಸ್ ಅತ್ಯಂತ ಶುಚಿಯಾಗಿ ಸ್ಯಾನಿಟೈಸ್‌ಗಳನ್ನು ಬಳಸಿ ಗ್ರಾಹಕರಿಗೆ ಆನ್‌ಲೈನ್ ಆರ್ಡರ್ ಡೆಲಿವರಿ ಮಾಡುವಂತೆ ನೋಡಿಕೊಳ್ಳಲಾಗುವುದು ಎಂದು ಅಮೆಜಾನ್ ಹೇಳಿದೆ.

English summary

Amazon To Hire 1 Lakh Workers As Online Orders Surge

Amazon.com Inc on Monday said it would hire 100,000 warehouse and delivery workers in the United States
Story first published: Tuesday, March 17, 2020, 9:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X