For Quick Alerts
ALLOW NOTIFICATIONS  
For Daily Alerts

ರಿಲಯನ್ಸ್-ಫ್ಯೂಚರ್ ಡೀಲ್ ಸ್ಥಗಿತ, ಅಮೆಜಾನ್‌ಗೆ ತಾತ್ಕಾಲಿಕ ರಿಲೀಫ್

|

ದೇಶದ ಅತಿದೊಡ್ಡ ಕಂಪನಿಗಳಾದ ಒಂದೆನಿಸಿರುವ ಮುಖೇಶ್ ಅಂಬಾನಿ ನೇತೃತ್ವ ರಿಲಯನ್ಸ್ ಇಂಡಸ್ಟ್ರೀಸ್ (RIL) ದೊಡ್ಡ ಹಿನ್ನಡೆ ಅನುಭವಿಸಿದೆ. ಮುಖೇಶ್ ಅಂಬಾನಿಯ ರಿಲಯನ್ಸ್ ಹಾಗೂ ಕಿಶೋರ್ ಬಿಯಾನಿಯ ಫ್ಯೂಚರ್ ಗ್ರೂಪ್ ನಡುವಿನ ಒಪ್ಪಂದಕ್ಕೆ ಅಮೆರಿಕದ ಇ-ಕಾಮರ್ಸ್ ದೈತ್ಯ ಅಮೆಜಾನ್ ತಡೆಯೊಡ್ಡಿದೆ.

 

ಸರಿ ಸುಮಾರು 24,713 ಕೋಟಿ ರು ಮೌಲ್ಯಕ್ಕೆ ಫ್ಯೂಚರ್ ಗ್ರೂಪ್ ಸಂಸ್ಥೆಯನ್ನು ಖರೀದಿಸಲು ರಿಲಯನ್ಸ್ ಇಂಡಸ್ಟ್ರೀಸ್ ಮುಂದಾಗಿತ್ತು. ಆದರೆ, ಇದರ ವಿರುದ್ಧ ಅಮೆಜಾನ್ ಸಂಸ್ಥೆ ಸಿಂಗಪುರದಲ್ಲಿ ದಾವೆ ಹೂಡಿತ್ತು.

ಅರ್ಜಿ ವಿಚಾರಣೆ ನಡೆಸಿದ ಸಿಂಗಪುರದ ಏಕಸದಸ್ಯ ನ್ಯಾಯಪೀಠವು ರಿಲಯನ್ಸ್-ಫ್ಯೂಚರ್ ಒಪ್ಪಂದಕ್ಕೆ ತಡೆಯಾಜ್ಞೆ ನೀಡಿದೆ.

ರಿಲಯನ್ಸ್ ತೆಕ್ಕೆಗೆ ಬಿಗ್ ಬಜಾರ್ ಒಡೆತನದ ಫ್ಯೂಚರ್ ಸಂಸ್ಥೆ

ಬಿಯಾನಿ ಅವರ ಫ್ಯೂಚರ್ ಗ್ರೂಪ್ ಸಂಸ್ಥೆಯು ರಿಲಯನ್ಸ್ ರಿಟೇಲ್ ಜೊತೆ ಒಪ್ಪಂದವನ್ನು ಘೋಷಿಸುವ ಮೂಲಕ ಈ ಹಿಂದೆ ಅಮೆಜಾನ್ ಜೊತೆಗಿನ ಒಪ್ಪಂದದ ಕಟ್ಟುಪಾಡುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ನೋಟಿಸ್ ಕಳುಹಿಸಿತ್ತು.

ಅಮೆಜಾನ್‌ ಮಾಡಿರುವ ಆರೋಪವೇನು?

ಅಮೆಜಾನ್‌ ಮಾಡಿರುವ ಆರೋಪವೇನು?

ಕಳೆದ ವರ್ಷ ಫ್ಯೂಚರ್ ಗ್ರೂಪಿನ ಒಂದು ಸಂಸ್ಥೆ(unlisted)ಯ ಶೇ 49ರಷ್ಟು ಪಾಲನ್ನು ಖರೀದಿಸಲು ಅಮೆಜಾನ್ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಸಾಲದ ಹೊರೆ ಹೊತ್ತುಕೊಂಡಿರುವ ಕಿಶೋರ್ ಬಿಯಾನಿ ಅವರು ರೀಟೇಲ್, ಹೋಲ್ ಸೆಲ್, ಲಾಜಿಸ್ಟಿಕ್, ವೇರ್ ಹೌಸ್ ಘಟಕಗಳನ್ನು ಬಿಲಿಯನೇರ್ ಮುಖೇಶ್ ಅವರಿಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ಅಮೆಜಾನ್ ಸಂಸ್ಥೆ ಜೊತೆಗಿನ ಒಪ್ಪಂದ ಮುರಿಯಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ರಿಟೇಲ್ ವ್ಯವಹಾರ ಕ್ಷೇತ್ರದಲ್ಲಿ ಬಹುದೊಡ್ಡ ಮೊತ್ತದ ಒಪ್ಪಂದ

ರಿಟೇಲ್ ವ್ಯವಹಾರ ಕ್ಷೇತ್ರದಲ್ಲಿ ಬಹುದೊಡ್ಡ ಮೊತ್ತದ ಒಪ್ಪಂದ

ಸರಾಸರಿ ಮೊತ್ತ 24,713 ಕೋಟಿ ರುಪಾಯಿಗೆ ಖರೀದಿ ಮಾತುಕತೆ ಆಗಿದೆ. ಇದರಲ್ಲಿ ಸಣ್ಣ- ಪುಟ್ಟ ಹೊಂದಾಣಿಕೆಗಳು ಆಗಬಹುದು ಎಂದು ಷೇರುಪೇಟೆಗೆ ರಿಲಯನ್ಸ್ ಸಂಸ್ಥೆ ಮಾಹಿತಿ ನೀಡಿದೆ. ಭಾರತದಲ್ಲಿ ಆಧುನಿಕ ರಿಟೇಲ್ ವ್ಯವಹಾರ ಕ್ಷೇತ್ರದಲ್ಲಿ ಬಹುದೊಡ್ಡ ಮೊತ್ತದ ಒಪ್ಪಂದ ಇದಾಗಲಿದೆ. ಈ ಮೂಲಕ ಬಿಗ್ ಬಜಾರ್, ಫ್ಯಾಶನ್ ಅಟ್ ಬಿಗ್ ಬಜಾರ್, ಈಸಿ ಡೇ ಮತ್ತು ಬ್ರಾಂಡ್ ಫ್ಯಾಕ್ಟರಿ ಸೇರಿದಂತೆ ಭಾರತದ ಕೆಲವು ಪ್ರಮುಖ ಚಿಲ್ಲರೆ ಸ್ವರೂಪಗಳನ್ನು ರಿಲಯನ್ಸ್ ಸ್ವಾಧೀನಪಡಿಸಿಕೊಳ್ಳಲಿದೆ.

ಮಾರಾಟ, ಒಪ್ಪಂದದ ಮುಖ್ಯಾಂಶಗಳು
 

ಮಾರಾಟ, ಒಪ್ಪಂದದ ಮುಖ್ಯಾಂಶಗಳು

* ರೀಟೇಲ್ ಮತ್ತು ಹೋಲ್ ಸೇಲ್ ಸಂಸ್ಥೆಗಳನ್ನು RRVL ಒಡೆತನದ ರಿಲಯನ್ಸ್ ರೀಟೇಲ್ ಅಂಡ್ ಫ್ಯಾಷನ್ ಲೈಫ್ ಸ್ಟೈಲ್ ಲಿಮಿಟೆಡ್ ಗೆ (RRFLL) ವರ್ಗಾವಣೆ ಮಾಡಲಾಗುವುದು. * ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸಂಸ್ಥೆಯನ್ನು RRVLಗೆ ವರ್ಗಾವಣೆ; ಮತ್ತು * RRFLLನಿಂದ ಹೂಡಿಕೆ ಪ್ರಸ್ತಾವ: * ವಿಲೀನದ ನಂತರ 6.09% ಈಕ್ವಿಟಿ ಸ್ವಾಧೀನಕ್ಕಾಗಿ 1200 ಕೋಟಿ ರುಪಾಯಿಯ FEL ಪ್ರಿಫರೆನ್ಷಿಯಲ್ ಈಕ್ವಿಟಿ ಷೇರುಗಳ ವಿತರಣೆ; ಮತ್ತು * 400 ಕೋಟಿ ರುಪಾಯಿಯ ಈಕ್ವಿಟಿ ವಾರಂಟ್ ಗಳ ಪ್ರಿಫರೆನ್ಷಿಯಲ್ ವಿತರಣೆ, ಅದರ ಬದಲಿಗೆ ಮತ್ತು ವಿತರಣೆ ಬೆಲೆಯ ಬಾಕಿ 75% ಪಾವತಿ, ಇದರ ಫಲಿತಾಂಶವಾಗಿ FELನಲ್ಲಿ 7.05%ನಷ್ಟನ್ನು RRFLL ಪಡೆಯುತ್ತದೆ.

ಸೂಪರ್ ಮಾರ್ಕೆಟ್ ನಿಯಂತ್ರಿಸುತ್ತಿರುವ ಬಿಗ್ ಬಜಾರ್

ಸೂಪರ್ ಮಾರ್ಕೆಟ್ ನಿಯಂತ್ರಿಸುತ್ತಿರುವ ಬಿಗ್ ಬಜಾರ್

ಫ್ಯೂಚರ್ ಕೂಪನ್ಸ್ ಲಿಮೆಟೆಡ್ ನಲ್ಲಿ ಅಮೆಜಾನ್ ಶೇ49ರಷ್ಟು ಪಾಲು ಹೊಂದಲಿದೆ ಎಂದು ಫ್ಯೂಚರ್ ರೀಟೈಲ್ ಘೋಷಿಸಿದೆ. ಆದರೆ, ಎರಡು ಸಂಸ್ಥೆಗಳು ಈ ಒಪ್ಪಂದ ಮೌಲ್ಯವನ್ನು ಬಹಿರಂಗಪಡಿಸಿರಲಿಲ್ಲ.

ಫ್ಯೂಚರ್ ರೀಟೈಲ್ ಮಾರುಕಟ್ಟೆ ಮೌಲ್ಯ ಸುಮಾರು 2.91 ಬಿಲಿಯನ್ ಡಾಲರ್ ನಷ್ಟಿದೆ. 900ಕ್ಕೂ ಅಧಿಕ ಮಳಿಗೆ, ಬಿಗ್ ಬಜಾರ್ ಸೇರಿ ಅನೇಕ ಸೂಪರ್ ಮಾರ್ಕೆಟ್ ಗಳನ್ನು ನಿಯಂತ್ರಿಸುತ್ತಿದೆ. ಈ ಒಪ್ಪಂದದ ನಂತರ ಫ್ಯೂಚರ್ ಕೂಪನ್ಸ್ ಮೇಲೆ ಶೇ49ರಷ್ಟು ಪಾಲು ಅಮೆಜಾನ್ ಹೊಂದಿದ್ದರೆ, ಫ್ಯೂಚರ್ ರೀಟೈಲ್ ಸ್ಥಾಪಕ ಕಿಶೋರ್ ಬಿಯಾನಿ ಹಾಗೂ ಕುಟುಂಬದ ಬಳಿ ಶೇ 47.02% ಪಾಲಿದೆ.

 

English summary

Amazon Wins Interim Relief, Future-Reliance Deal Put On Hold

Amazon.com Inc on Sunday won an interim award against its partner Future Group selling retail business to Reliance Industries Ltd for ₹ 24,713 crore after a Singapore-based single-judge arbitration panel put the deal on hold.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X