For Quick Alerts
ALLOW NOTIFICATIONS  
For Daily Alerts

ಅಂಬಾನಿ V/s ಮಿತ್ತಲ್ : ರಿಲಯನ್ಸ್ ಜಿಯೋವನ್ನು ಹಿಂದಿಕ್ಕಿದ ಭಾರ್ತಿ ಏರ್‌ಟೆಲ್‌

|

ದೇಶದ ಅಗ್ರಮಾನ್ಯ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ನಡುವೆ ಸ್ಪರ್ಧೆಯು ತೀವ್ರವಾಗಿ ಹೆಚ್ಚಿದ್ದು, ಇದೀಗ ಭಾರ್ತಿ ಏರ್‌ಟೆಲ್‌ ರಿಲಯನ್ಸ್ ಜಿಯೋವನ್ನು ಹಿಂದಿಕ್ಕುವ ಮೂಲಕ ದೇಶದ ಟಾಪ್ ಟೆಲಿಕಾಂ ಕಂಪನಿಯಾಗಿ ಹೊರಹೊಮ್ಮಿದೆ.

ಸುನಿಲ್ ಭಾರ್ತಿ ಮಿತ್ತಲ್ ಸಂಸ್ಥಾಪನೆಯ ಭಾರ್ತಿ ಏರ್‌ಟೆಲ್‌, ಹೊಸ ಗ್ರಾಹಕರನ್ನು ಸೆಳೆಯುವಲ್ಲಿ ಮತ್ತಷ್ಟು ಯಶಸ್ವಿಯಾಗಿದ್ದು, 2020ರ ಡಿಸೆಂಬರ್‌ನಲ್ಲಿ 55 ಲಕ್ಷ ಹೊಸ ಚಂದಾದಾರರನ್ನು ಪಡೆದಿದೆ. ಇದೇ ಅವಧಿಯಲ್ಲಿ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ 32 ಲಕ್ಷ ಹೊಸ ಚಂದಾದಾರರನ್ನು ಸೇರಿಸಿದೆ.

ಕಳೆದ 14 ತಿಂಗಳುಗಳಲ್ಲಿ ಇದು ಅತ್ಯಧಿಕ ಸಂಖ್ಯೆಯಾಗಿದ್ದು, ಇದರೊಂದಿಗೆ, ಸಕ್ರಿಯ ಚಂದಾದಾರರ ವಿಷಯದಲ್ಲಿ ಭಾರ್ತಿ ಏರ್‌ಟೆಲ್‌ ದೇಶದ ಅಗ್ರ ಟೆಲಿಕಾಂ ಕಂಪನಿಯಾಗಿ ಮಾರ್ಪಟ್ಟಿದೆ. ಜೊತೆಗೆ ಜಿಯೋವನ್ನು ಹೊಸ ಚಂದಾದಾರರ ಸಂಖ್ಯೆಯಲ್ಲಿ ಹಿಂದಿಕ್ಕಿದೆ.

ಏರುಮುಖವಾಗಿ ಸಾಗುತ್ತಿರುವ ಭಾರ್ತಿ ಏರ್‌ಟೆಲ್‌

ಏರುಮುಖವಾಗಿ ಸಾಗುತ್ತಿರುವ ಭಾರ್ತಿ ಏರ್‌ಟೆಲ್‌

2020ರ ಕ್ಯಾಲೆಂಡರ್ ವರ್ಷದ ದ್ವಿತೀಯಾರ್ಧದಿಂದ ಭಾರ್ತಿ ಏರ್‌ಟೆಲ್ ಮಾರುಕಟ್ಟೆಯಲ್ಲಿ ಬಲವಾದ ಪ್ರದರ್ಶನ ತೋರಿದ್ದು, ಮೇಲ್ಮುಖವಾಗಿ ಸಾಗುತ್ತಿದೆ. 2020 ರಿಂದ ಜುಲೈ ವರೆಗೆ ಏರ್‌ಟೆಲ್ 22 ಮಿಲಿಯನ್ ಷೇರುಗಳನ್ನು ಸೇರಿಸಿದರೆ, ಜಿಯೋ ಕೇವಲ 11 ಮಿಲಿಯನ್‌ಗಿಂತಲೂ ಹೆಚ್ಚಿನದನ್ನು ಸೇರಿಸಲು ಯಶಸ್ವಿಯಾಗಿದೆ.

ಸೆಪ್ಟೆಂಬರ್‌ನಿಂದ ಏರ್‌ಟೆಲ್ ಷೇರುಗಳು ಶೇಕಡಾ 40ರಷ್ಟು ಜಿಗಿತ

ಸೆಪ್ಟೆಂಬರ್‌ನಿಂದ ಏರ್‌ಟೆಲ್ ಷೇರುಗಳು ಶೇಕಡಾ 40ರಷ್ಟು ಜಿಗಿತ

ಸೆಪ್ಟೆಂಬರ್‌ ತಿಂಗಳಿನಲ್ಲಿ ಭಾರ್ತಿ ಏರ್‌ಟೆಲ್ ಅತಿಹೆಚ್ಚು ಚಂದಾದಾರರನ್ನು ಪಡೆದಿದೆ ಎಂಬ ಸುದ್ದಿ ಹೊರಬಿದ್ದ ಬಳಿಕ ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಭಾರ್ತಿ ಏರ್‌ಟೆಲ್ ಷೇರು ಜಿಗಿತ ಕಂಡಿದ್ದವು. ಸೆಪ್ಟೆಂಬರ್ ತಿಂಗಳಿನಿಂದ ಕಂಪನಿಯ ಷೇರುಗಳು ಶೇಕಡಾ 40ರಷ್ಟು ಏರಿಕೆ ಕಂಡಿವೆ. ಆದರೆ ಏರ್‌ಟೆಲ್ ಹೊಸ ಚಂದಾದರರ ಏರಿಕೆಯ ಅಂಕಿ-ಅಂಶಗಳು ಹೊರಬೀಳುವ ಮುನ್ನ ಶುಕ್ರವಾರ (ಫೆ. 19) ವಹಿವಾಟು ಅಂತ್ಯಕ್ಕೆ ಎನ್‌ಎಸ್‌ಇನಲ್ಲಿ ಭಾರ್ತಿ ಏರ್‌ಟೆಲ್ ಷೇರು ಬೆಲೆ ಶೇ. 1.28ರಷ್ಟು ಕುಸಿದು 581.50 ರೂಪಾಯಿಗೆ ತಲುಪಿದೆ.

ವೊಡಾಫೋನ್ ಐಡಿಯಾವನ್ನು ಹಿಂದಿಕ್ಕಿದೆ!

ವೊಡಾಫೋನ್ ಐಡಿಯಾವನ್ನು ಹಿಂದಿಕ್ಕಿದೆ!

2020ರ ಕ್ಯಾಲೆಂಡರ್ ವರ್ಷದ ದ್ವಿತೀಯಾರ್ಧ ಏರ್‌ಟೆಲ್ ಬಲವಾದ ಪ್ರದರ್ಶನವು ವೊಡಾಫೋನ್ ಐಡಿಯಾವನ್ನು ಸೋಲಿಸಿ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದೆ. ನಿವ್ವಳ ಚಂದಾದಾರರ ಸೇರ್ಪಡೆಗಳಲ್ಲಿನ ಅದರ ಬೆಳವಣಿಗೆ ಜಿಯೋಗಿಂತ ಎರಡು ಪಟ್ಟು ಹೆಚ್ಚಾಗಿದೆ. ಆದರೆ ವೊಡಾಫೋನ್ ಐಡಿಯಾ ಹೊಸ ಚಂದಾದರರ ವಿಷಯದಲ್ಲಿ ಹೆಚ್ಚಿನ ಬೆಳವಣಿಗೆ ಸಾಧಿಸಲು ವಿಫಲವಾಗಿದೆ.

ಅತಿ ಹೆಚ್ಚು ಸಕ್ರಿಯ ಚಂದಾದಾರರನ್ನು ಹೊಂದಿರುವ ಏರ್‌ಟೆಲ್‌

ಅತಿ ಹೆಚ್ಚು ಸಕ್ರಿಯ ಚಂದಾದಾರರನ್ನು ಹೊಂದಿರುವ ಏರ್‌ಟೆಲ್‌

ಸಕ್ರಿಯ ಚಂದಾದಾರರ ಮಾರುಕಟ್ಟೆ ಪಾಲಿನ ವಿಷಯದಲ್ಲಿ, ಏರ್‌ಟೆಲ್ ಈಗ ಶೇಕಡಾ 33.7ರಷ್ಟು ಪಾಲನ್ನು ಹೊಂದುವ ಮೂಲಕ ಅಗ್ರ ಟೆಲಿಕಾಂ ಕಂಪನಿ ಆಗಿದ್ದರೆ, ರಿಲಯನ್ಸ್ ಜಿಯೋ ಶೇಕಡಾ 33.6ರಷ್ಟು ಪಾಲನ್ನು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದೆ ಮತ್ತು ವೊಡಾಫೋನ್ ಐಡಿಯಾ ಶೇಕಡಾ 26.3ರಷ್ಟು ಪಾಲನ್ನು ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದೆ.

ಒಟ್ಟಾರೆಯಾಗಿ, 2020 ರಲ್ಲಿ ಏರ್‌ಟೆಲ್‌ 11.55 ಮಿಲಿಯನ್ ನಿವ್ವಳ ಚಂದಾದಾರರನ್ನು ಸೇರಿಸಿದರೆ, ಜಿಯೋ 39 ಮಿಲಿಯನ್ ಸೇರಿಸಿದೆ. ವೊಡಾಫೋನ್ ಐಡಿಯಾ ಇದೇ ಅವಧಿಯಲ್ಲಿ 48 ದಶಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಕಳೆದುಕೊಂಡಿದೆ. ವೊಡಾಫೋನ್ ಐಡಿಯಾ ಕಳೆದುಕೊಂಡ ಒಟ್ಟು ಚಂದಾದಾರರಲ್ಲಿ ಶೇಕಡಾ 80ರಷ್ಟು ಜಿಯೋ ಪಡೆದುಕೊಂಡಿದ್ದರೆ, ಏರ್‌ಟೆಲ್ ಶೇಕಡಾ 20ರಷ್ಟು ಗ್ರಾಹಕರನ್ನು ಸೆಳೆದಿದೆ.

 

English summary

Ambani Vs Mittal: Bharti Airtel Beats Reliance Jio To Become The Top Telco In The Country

Bharti Airtel now has the highest number of active subscribers in the Indian telecom industry, beating Mukesh Ambani’s Reliance Jio
Story first published: Saturday, February 20, 2021, 10:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X