For Quick Alerts
ALLOW NOTIFICATIONS  
For Daily Alerts

ರಾಬೋಬ್ಯಾಂಕ್ ಟಾಪ್ 20ರಲ್ಲಿ ಸ್ಥಾನ ಪಡೆದ ಭಾರತದ ಮೊದಲ ಡೇರಿ ಫಾರ್ಮ್ ಅಮುಲ್

|

ಗುಜರಾತ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ (GCMMF)ಗೆ ಸೇರಿದ ಅಮುಲ್ ಹೊಸ ದಾಖಲೆ ಬರೆದಿದೆ. ಡಚ್ ಮಲ್ಟಿನ್ಯಾಷನಲ್ ಬ್ಯಾಂಕಿಂಗ್ ಮತ್ತು ಫೈನಾನ್ಷಿಯಲ್ ಕಂಪೆನಿ ರಾಬೋಬ್ಯಾಂಕ್ ಬಿಡುಗಡೆ ಮಾಡಿದ ಜಾಗತಿಕ ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಡೇರಿ ಫಾರ್ಮ್ ಎಂಬ ಅಗ್ಗಳಿಕೆಗೆ ಪಾತ್ರ ಆಗಿದೆ.

ಮೋದಿ ಅಚ್ಚುಮೆಚ್ಚಿನಾ 'ಒಂಟೆ ಹಾಲು' ಮಾರಾಟಕ್ಕೆ ಮುಂದಾದ ಅಮುಲ್ಮೋದಿ ಅಚ್ಚುಮೆಚ್ಚಿನಾ 'ಒಂಟೆ ಹಾಲು' ಮಾರಾಟಕ್ಕೆ ಮುಂದಾದ ಅಮುಲ್

ಈ ಪಟ್ಟಿಯ ಪ್ರಕಾರ, ಸ್ವಿಟ್ಜರ್ಲೆಂಡ್ ನ ನೆಸ್ಟ್ಲೆ ಮೊದಲ ಸ್ಥಾನದಲ್ಲಿದೆ. ಇದರ ವಹಿವಾಟು 2210 ಕೋಟಿ USD ಇದೆ. ಆ ನಂತರದ ಸ್ಥಾನದಲ್ಲಿ ಫ್ರಾನ್ಸ್ ನ ಲಾಕ್ ಟಲೀಸ್ ಇದೆ. ಅಮುಲ್ ವಾರ್ಷಿಕ ವಹಿವಾಟು 550 ಕೋಟಿ ಅಮೆರಿಕನ್ ಡಾಲರ್ ಇದೆ. ಇದೇ ಮೊದಲ ಬಾರಿಗೆ ಪಟ್ಟಿಯಲ್ಲಿ ಹದಿನಾರನೇ ಸ್ಥಾನದಲ್ಲಿ ಅಮುಲ್ ಕಾಣಿಸಿಕೊಂಡಿದೆ. ಈ ಸಾಧನೆಯು ಗುಜರಾತ್ ನ 36 ಲಕ್ಷ ಹಾಲು ಉತ್ಪಾದಕರಿಗೆ ಹೆಮ್ಮೆಯ ಸಂಗತಿ ಎಂದು ಅಮುಲ್ ಟ್ವೀಟ್ ಮಾಡಿದೆ.

ಮೊದಲ ಹತ್ತು ಸ್ಥಾನದಲ್ಲಿ ಇರುವ ಕಂಪೆನಿಗಳು

ಮೊದಲ ಹತ್ತು ಸ್ಥಾನದಲ್ಲಿ ಇರುವ ಕಂಪೆನಿಗಳು

2019ರಲ್ಲಿ ಆರನೇ ಸ್ಥಾನದಲ್ಲಿ ಇದ್ದ ಯು.ಎಸ್. ಡೇರಿ ಫಾರ್ಮರ್ಸ್ ಅಮೆರಿಕವು ಈ ವರ್ಷ ಮೂರನೇ ಸ್ಥಾನದಲ್ಲಿದೆ. ವಹಿವಾಟು 2010 ಕೋಟಿ USD ಇದೆ. ಫ್ರಾನ್ಸ್ ನ ಡನೋನ್ ನಾಲ್ಕನೇ ಸ್ಥಾನ, ಚೀನಾದ ಯೀ ಐದನೇ ಸ್ಥಾನದಲ್ಲಿ, ನ್ಯೂಜಿಲ್ಯಾಂಡ್ ಫಾಂಟೆರಾ ಆರನೇ, ನೆದರ್ಲೆಂಡ್ಸ್ ನ ಫ್ರೈಸ್ ಲ್ಯಾಂಡ್ ಕ್ಯಾಂಪಿನಾ ಏಳು, ಚೀನಾದ ಮೆಂಗ್ನಿಯು ಎಂಟು, ಡೆನ್ಮಾರ್ಕ್/ಸ್ವೀಡನ್ ನ ಅರಿಯಾ ಫುಡ್ಸ್ ಒಂಬತ್ತು ಹಾಗೂ ಕೆನಡಾದ ಸಪುಟೊ ಹತ್ತನೇ ಸ್ಥಾನದಲ್ಲಿದೆ.

ಮುಂದಿನ ಹತ್ತು ವರ್ಷದಲ್ಲಿ 1.2 ಕೋಟಿ ಹೊಸ ಉದ್ಯೋಗ ಸೃಷ್ಟಿ

ಮುಂದಿನ ಹತ್ತು ವರ್ಷದಲ್ಲಿ 1.2 ಕೋಟಿ ಹೊಸ ಉದ್ಯೋಗ ಸೃಷ್ಟಿ

ತಜ್ಞರು ಹೇಳುವ ಪ್ರಕಾರ, ಮುಂದಿನ ಹತ್ತು ವರ್ಷದಲ್ಲಿ ಡೇರಿ ಕ್ಷೇತ್ರದಲ್ಲಿ 1.2 ಕೋಟಿ ಹೊಸ ಉದ್ಯೋಗ ಸೃಷ್ಟಿ ಆಗಲಿದೆ. ವಿಶ್ವದ ಒಟ್ಟು ಹಾಲು ಉತ್ಪಾದನೆ ಪೈಕಿ ಭಾರತ ಶೇಕಡಾ 21ರಷ್ಟು ಉತ್ಪಾದಿಸುತ್ತದೆ. ಭಾರತದ ಹಾಲು ಮಾರುಕಟ್ಟೆ ಐದು ಪರ್ಸೆಂಟ್ ಬೆಳವಣಿಗೆ ದರ ಸಾಧಿಸುತ್ತಿದೆ. ಜಾಗತಿಕ ಹಾಲು ಮಾರುಕಟ್ಟೆ ವೇಗ 1.8 ಪರ್ಸೆಂಟ್ ಇದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉತ್ಪನ್ನಗಳು

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉತ್ಪನ್ನಗಳು

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಉತ್ಪನ್ನಗಳ ಕಡೆಗೆ ಅಮುಲ್ ಗಮನ ಕೇಂದ್ರೀಕರಿಸಿದೆ. ಅರಿಶಿನ, ಶುಂಠಿ-ತುಳಸಿ ಈ ಮೂರರ ಬಣ್ಣದಲ್ಲಿ 60 ಮಿ.ಲೀ. ಐಸ್ ಕ್ರೀಮ್ ಸ್ಟಿಕ್ ಉತ್ಪಾದಿಸುತ್ತಿದೆ. ಇನ್ನು ಜುಲೈನಲ್ಲಿ ಪಂಚಾಮೃತ ಎಂಬ ಹೊಸ ಉತ್ಪನ್ನವನ್ನು ಜುಲೈನಿಂದ ಆರಂಭಿಸಿದೆ. ಇದರ ಜತೆಗೆ ಇತರ ಉತ್ಪನ್ನಗಳನ್ನು ಸಹ ಮಾರಾಟ ಮಾಡುತ್ತದೆ.

English summary

Amul Is The First Indian Dairy Company To Be In Rabobank’s Global Top 20 List

Gujarat based Amul has become the first Indian dairy firm to make a place in the global top 20 list released by Rabobank.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X