For Quick Alerts
ALLOW NOTIFICATIONS  
For Daily Alerts

ಕ್ರೋಸಿನ್, ಫ್ರೆಂಚ್ ಅಳಿಯ; ಆನಂದ್ ಮಹೀಂದ್ರ ಟ್ವೀಟ್ ವೈರಲ್

|

ಮಹೀಂದ್ರ ಅಂಡ್ ಮಹೀಂದ್ರ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹೀಂದ್ರ ತಮ್ಮ ವ್ಯಾವಹಾರಿಕ ಚಾಕಚಕ್ಯತೆ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮೊನಚಿನ ಪೋಸ್ಟ್‌ಗಳ ಮೂಲಕ ಬಹಳ ಜನಪ್ರಿಯರಾಗಿದ್ದಾರೆ. ಟ್ವಿಟ್ಟರ್‌ನಲ್ಲಿ ಅವರು ಬಹಳ ಗಮನ ಸೆಳೆಯುವಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಬಹಳ ಬಾರಿ ಅವರ ಟ್ವೀಟ್‌ಗಳು ಮಾರ್ಮಿಕವಾಗಿರುತ್ತವೆ. ಕೆಲವೊಮ್ಮೆ ತಮ್ಮ ಅನಿಸಿಕೆಗಳನ್ನು ಬಹಳ ನಿರ್ಭೀಡೆಯಿಂದ ಹಂಚಿಕೊಳ್ಳುತ್ತಾರೆ. ನೀವು ಒಮ್ಮೆ ಅವರ ಟ್ವಿಟ್ಟರ್ ಟೈಮ್‌ಲೈನ್ ಹೋಗಿ ನೋಡಿದರೆ ಬಹಳ ಖುಷಿ ಕೊಡುವ, ಗಮನ ಸೆಳೆಯುವ ಟ್ವೀಟ್‌ಗಳ ಭಂಡಾರವೇ ಅದರಲ್ಲಿರುತ್ತದೆ.

ಮೊನ್ನೆ ಅವರು ಬೇಕರಿಯೊಂದರಲ್ಲಿ ಕ್ರೋಸಿನ್ ಬೋರ್ಡ್ ಇರುವ ತಿಂಡಿಯ ಫೋಟೋವನ್ನು ಹಂಚಿಕೊಂಡು ವಿವರಣೆ ನೀಡಿದ್ದರು. ಅದರಲ್ಲಿ ಫ್ರಾನ್ಸ್‌ನ ಜನಪ್ರಿಯ ತಿಂಡಿ ಎನಿಸಿರುವ ಕ್ರೂಸ್ಸಾಂಟ್ ಅನ್ನು ಬೇಕರಿಯಲ್ಲಿ ಕ್ರೋಸಿನ್ ಎಂದು ಹೆಸರಿಸಲಾಗಿತ್ತು. ಈ ಸಂಗತಿಯನ್ನು ಆನಂದ್ ಮಹೀಂದ್ರ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಇಂತಹ ಹಲವಾರು ಸ್ಪೆಲಿಂಗ್ ಮಿಸ್ಟೇಕ್‌ಗಳು ತೀರಾ ಸಾಮಾನ್ಯವಾಗಿ ಆಗುತ್ತಿರುತ್ತವೆ. ಅದರಲ್ಲೇನು ವಿಶೇಷ ಇಲ್ಲ ಎನ್ನುವುದು ನಿಜ. ಇಲ್ಲಿ ಆನಂದ್ ಮಹೀಂದ್ರ ಅವರು ಕ್ರೋಸಿನ್ ಮತ್ತು ಕ್ರೂಸ್ಸಾಂಟ್‌ಗೂ ಸಾಮ್ಯತೆಯನ್ನು ಕಾಣುವ ಪ್ರಯತ್ನ ಮಾಡಿದ್ದರು. ಹಾಗೆಯೇ ಭಾರತದಲ್ಲಿ ಕ್ಲಿಷ್ಟ ಪದಗಳನ್ನು ಹೇಗೆಲ್ಲಾ ಸರಳಗೊಳಿಸಲಾಗುತ್ತದೆ ಎಂಬುದನ್ನೂ ವ್ಯಕ್ತಪಡಿಸಿದ್ದರು.

ಡಿಸೆಂಬರ್ ಕೊನೆಗೆ ಫುಡ್-ಡೆಲವರಿ ವಹಿವಾಟು ಸ್ಥಗಿತಗೊಳಿಸಲಿದೆ ಅಮೆಜಾನ್ ಇಂಡಿಯಾ!ಡಿಸೆಂಬರ್ ಕೊನೆಗೆ ಫುಡ್-ಡೆಲವರಿ ವಹಿವಾಟು ಸ್ಥಗಿತಗೊಳಿಸಲಿದೆ ಅಮೆಜಾನ್ ಇಂಡಿಯಾ!

ಕ್ರೂಸ್ಸಾಂಟ್‌ಗೆ ವಿವಿಧ ರೀತಿಯ ಉಚ್ಛರಣೆಗಳಿವೆ. ಆಸ್ಟ್ರಿಯಾ, ಫ್ರಾನ್ಸ್ ದೇಶಗಳಲ್ಲಿ ಅಲ್ಲಿನ ಜನ ಬಳಕೆಯಲ್ಲಿರುವ ಉಚ್ಚಾರಣೆ ಭಾರತೀಯರಿಗೆ ಕಷ್ಟ ಕಷ್ಟ. ಆದರೆ, ಭಾರತದಲ್ಲಿ ಈ ಹೆಸರನ್ನು ತೀರಾ ಸರಳಗೊಳಿಸಿ ಕ್ರೋಸಿನ್ ಎಂದಿಡಲಾಗಿದೆ.

ಕ್ರೋಸಿನ್, ಫ್ರೆಂಚ್ ಅಳಿಯ; ಆನಂದ್ ಮಹೀಂದ್ರ ಟ್ವೀಟ್ ವೈರಲ್

"ಎಲ್ಲಾ ರೀತಿಯ ನೋವು ಮತ್ತು ಬಾಧೆಗಳಿಗೆ ಕ್ರೂಸ್ಸಾಂಟ್ ಒಳ್ಳೆಯ ಪರಿಹಾರ ಎಂದು ನನ್ನ ಫ್ರೆಂಚ್ ಅಳಿಯ ಹೇಳುತ್ತಾರೆ. ನಾವು ಭಾರತೀಯರಿಗೆ ಸಾಫ್ಟ್‌ವೇರ್ ಪ್ರೋಗ್ರಾಮಿಂಗ್ ಭಾಷೆಯ ಅಬ್ರಿವಿಯೇಶನ್ ಚೆನ್ನಾಗಿಯೇ ಗೊತ್ತಿದೆ. ಹೀಗಿರುವಾದ ಇದು ಯಾಕಾಗಬಾರದು?" ಎಂದು ಟ್ವೀಟ್ ಮಾಡಿದ್ದರು.

ಫ್ರೆಂಚ್ ಅಳಿಯ ವಿಚಾರ

ಇದೇ ವೇಳೆ ತಮ್ಮ ಟ್ವೀಟ್‌ನಲ್ಲಿ ಆನಂದ್ ಮಹೀಂದ್ರ ತಮ್ಮ ಫ್ರೆಂಚ್ ಅಳಿಯನ ಬಗ್ಗೆ ಪ್ರಸ್ತಾಪ ಮಾಡಿದ್ದು ಕೆಲ ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದ್ದು ಹೌದು. ಒಬ್ಬ ವ್ಯಕ್ತಿಯಂತೂ ಟ್ವೀಟ್ ಮಾಡಿ, "ನನಗೆ ಸಂಬಂಧಿಸಿದ ವಿಷಯವಲ್ಲ, ಆದರೂ ಕೇಳುತ್ತೇನೆ, ನಿಮಗೆ ಭಾರತೀಯ ಅಳಿಯ ಯಾಕಾಗಲಿಲ್ಲ?" ಎನ್ನುತ್ತಾನೆ. ಇದಕ್ಕೆ ಆನಂದ್ ಮಹೀಂದ್ರ ಕೊಟ್ಟ ಉತ್ತರ ಬಹಳ ಅರ್ಥಗರ್ಭಿತ ಮತ್ತು ಜೀವನ ಸತ್ಯವನ್ನು ತೋರಿಸುವಂತಿದೆ: "ಯಾಕೆಂದರೆ ಅದು ನನಗೆ ಸಂಬಂಧಿಸಿದ ವಿಷಯವೂ ಅಲ್ಲ. ನನ್ನ ಹೆಣ್ಮಕ್ಕಳು ತಾವೇ ಖುದ್ದಾಗಿ ತಮ್ಮ ಜೀವನ ಸಂಗಾತಿಗಳನ್ನು ಆಯ್ದುಕೊಳ್ಳುತ್ತಾರೆ. ಅವರ ಬಗ್ಗೆ ನನಗೆ ಹೆಮ್ಮೆ ಇದೆ" ಎಂದಿದ್ದಾರೆ.

English summary

Anand Mahindra's Commentary From Croissant To Crocin To French Son-in-law

Industrialist Anand Mahindra know for witty comments on social media, has come up with another gem by sharing a bakery photo where crocin is written for french croissant.
Story first published: Sunday, November 27, 2022, 10:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X