For Quick Alerts
ALLOW NOTIFICATIONS  
For Daily Alerts

ಆಂಟ್ ಐಪಿಒ ಎಫೆಕ್ಟ್: ಯುಎಸ್ ನಲ್ಲಿ ಚೀನಾದ ಅಲಿಬಾಬ ಷೇರುಗಳು ತತ್ತರ

By ಅನಿಲ್ ಆಚಾರ್
|

ಯುಎಸ್ ನಲ್ಲಿ ವ್ಯವಹರಿಸುತ್ತಿದ್ದ ಅಲಿಬಾಬ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ನ ಷೇರುಗಳು ಮಂಗಳವಾರ 9.6% ಕುಸಿತ ಕಂಡಿವೆ. ಶಾಂಘೈ, ಹಾಂಕಾಂಗ್ ನಲ್ಲಿ ಲಿಸ್ಟಿಂಗ್ ಅಮಾನತು ಮಾಡಲಾಗಿದೆ ಎಂದು ಆಂಟ್ ಗ್ರೂಪ್ ತಿಳಿಸಿದ ಮೇಲೆ ಈ ಬೆಳವಣಿಗೆ ನಡೆದಿದೆ. ನಿಯಂತ್ರಕ ವ್ಯವಸ್ಥೆಯಲ್ಲಿನ ಬದಲಾವಣೆಯ ಕಾರಣಕ್ಕೆ ಶಾಂಘೈನಲ್ಲಿ ಆಂಟ್ ಲಿಸ್ಟಿಂಗ್ ನಿಲ್ಲಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅದಕ್ಕಿಂತ ಹೆಚ್ಚಿನ ಮಾಹಿತಿ ನೀಡಿಲ್ಲ.

ಅಲಿಬಾಬ ಕಂಪೆನಿ, ಜಾಕ್ ಮಾಗೆ ಭಾರತದ ಕೋರ್ಟ್ ಸಮನ್ಸ್ಅಲಿಬಾಬ ಕಂಪೆನಿ, ಜಾಕ್ ಮಾಗೆ ಭಾರತದ ಕೋರ್ಟ್ ಸಮನ್ಸ್

ಇನ್ನು ಹಾಂಕಾಂಗ್ ಐಪಿಒ ಕೂಡ ಅಮಾನತು ಆಗಿದ್ದು, ಮೂವತ್ತೈದು ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಷೇರು ಮಾರಾಟಕ್ಕೆ ತಡೆ ಹಾಕಲಾಗಿದೆ. ಈ ಕಂಪೆನಿಯಲ್ಲಿ ಅಲಿಬಾಬ ಪಾಲ ಶೇಕಡಾ ಮೂವತ್ಮೂರರಷ್ಟಿದೆ. ನವೆಂಬರ್ ಐದನೇ ತಾರೀಕಿನಂದು ಎರಡೂ ಎಕ್ಸ್ ಚೇಂಜ್ ನಲ್ಲಿ ವ್ಯವಹಾರ ಆರಂಭಿಸುವ ನಿರೀಕ್ಷೆ ಇತ್ತು.

ಆಂಟ್ ಐಪಿಒ ಎಫೆಕ್ಟ್: ಯುಎಸ್ ನಲ್ಲಿ ಚೀನಾದ ಅಲಿಬಾಬ ಷೇರುಗಳು ತತ್ತರ

ಮಾರ್ಚ್ ಹದಿನಾರರ ನಂತರ ಅಮೆರಿಕನ್ ಡೆಪಾಸಿಟರಿ ರಸೀಟ್ಸ್ (ಎಡಿಆರ್) ಒಂದೇ ದಿನದಲ್ಲಿ ದಾಖಲಿಸಿದ ಅತಿ ದೊಡ್ಡ ಕುಸಿತ ಇದಾಗಿದೆ. ಇನ್ನು ಯುಎಸ್ ನಲ್ಲಿ ಟ್ರೇಡಿಂಗ್ ನಡೆಸುವ ಚೀನಾದ ಇತರ ಕಂಪೆನಿಗಳು ಕೂಡ ಕುಸಿತ ಕಂಡಿವೆ. ಜೆಡಿ.ಕಾಮ್ ಇಂಕ್, ಲುಫಾಕ್ಸ್ ಹೋಲ್ಡಿಂಗ್, ಐಕ್ಯೂಐವೈಐ ಇಂಕ್ ಮತ್ತು ಲೆಕ್ಸಿನ್ ಫಿನ್ ಟೆಕ್ ಹೋಲ್ಡಿಂಗ್ಸ್ ಲಿಮಿಟೆಡ್ 1.5ರಿಂದ 13 ಪರ್ಸೆಂಟ್ ಕುಸಿದಿವೆ.

English summary

Ant Group IPO Suspended Effect: Alibaba Holdings In US Plunged More Than 9 Percent In US

After Ant group IPO suspended in Shanghai and Hong Kong, Alibaba Holdings share plunged more than 9% in US.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X