For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಆಪಲ್ ಕಂಪೆನಿಯ ಮೊದಲ ಆನ್ ಲೈನ್ ಸ್ಟೋರ್ ಸೆ. 23ಕ್ಕೆ ಆರಂಭ

|

ಆಪಲ್ ಕಂಪೆನಿಯು ಭಾರತದಲ್ಲಿ ಮೊದಲ ಬಾರಿಗೆ ತನ್ನದೇ ಆನ್ ಲೈನ್ ಮಳಿಗೆಯನ್ನು ಮುಂದಿನ ವಾರದಿಂದ ಆರಂಭಿಸಲಿದೆ. 2019ರಲ್ಲಿ ಮಾಡಿದ್ದ ಕಾನೂನಿನ ಪ್ರಯೋಜನ ಪಡೆಯಲಿದೆ. ಒಂದೇ ಬ್ರ್ಯಾಂಡ್ ವಸ್ತುಗಳನ್ನು ಫಿಸಿಕಲ್ ಹಾಗೂ ಆನ್ ಲೈನ್ ಚಾನೆಲ್ ಗಳ ಮೂಲಕ ಮಾರಾಟ ಮಾಡಲು ಸರ್ಕಾರವು ಕೆಲವು ಅನುಕೂಲ ಮಾಡಿಕೊಟ್ಟಿತ್ತು.

ಈ ಮೂಲಕ ಭಾರತದಲ್ಲಿ ವೆಬ್ ಸ್ಟೋರ್ ಆರಂಭಿಸುವ ಮೊದಲ ಕಂಪೆನಿ ಆಪಲ್ ಎನ್ನುವಂತಾಗುತ್ತದೆ. ಕಳೆದ ವರ್ಷ ಆಗಸ್ಟ್ ನಲ್ಲಿ ಸಡಿಲಿಕೆ ಮಾಡಿದ ನಿಯಮಗಳ ಪ್ರಕಾರ, ಯಾವುದೇ ಕಂಪೆನಿಯು ಫಿಸಿಕಲ್ ಆದ ಮಳಿಗೆಗಳನ್ನು ತೆರೆಯುವ ಮುನ್ನ ಮೊದಲಿಗೆ ವೆಬ್ ಸ್ಟೋರ್ ಶುರು ಮಾಡಬೇಕಾಗುತ್ತದೆ. ಆಪಲ್ ಕಂಪೆನಿ ಅದೇ ನಿಯಮ ಅನುಸರಿಸುತ್ತಿದೆ.

37ನೇ ದೇಶ ಆಗಲಿದೆ ಭಾರತ

37ನೇ ದೇಶ ಆಗಲಿದೆ ಭಾರತ

ಆಪಲ್ ಕಂಪೆನಿಯು ತನ್ನದೇ ಇ ಕಾಮರ್ಸ್ ಸೈಟ್ ಹೊಂದಲಿರುವ 37ನೇ ದೇಶ ಆಗಲಿದೆ ಭಾರತ. "ಕಳೆದ ಇಪ್ಪತ್ತು ವರ್ಷಗಳಿಂದ ಭಾರತದಲ್ಲಿ ರೀಸೆಲ್ಲರ್ ಗಳ ಮೂಲಕ ಇರುವ ಅದ್ಭುತವಾದ ನೆಟ್ ವರ್ಕ್ ಜತೆಗೆ ಗ್ರಾಹಕರ ಜತೆಗೆ ನೇರವಾಗಿ ಸಂಪರ್ಕ ಬೆಸೆಯುವ ಈ ಅವಕಾಶದ ಬಗ್ಗೆ ಬಹಳ ಸಂತೋಷವಾಗಿದ್ದೇವೆ", ಎಂದು ಆಪಲ್ ರೀಟೇಲ್ ನಲ್ಲಿ ಹಿರಿಯ ಉಪಾಧ್ಯಕ್ಷರಾಗಿರುವ ಡಿರ್ ಡ್ರೇ ಓ ಬ್ರಯಾನ್ ಹೇಳಿದ್ದಾರೆ. "ಹೊಸ ಗ್ರಾಹಕರನ್ನು ಸೃಷ್ಟಿಸಿಕೊಳ್ಳಲು, ಗ್ರಾಹಕರ ಜತೆಗಿನ ಬಾಂಧವ್ಯ ಬೆಸೆಯಲು ಸಹ ಅತ್ಯುತ್ತಮ ಅವಕಾಶ", ಎಂದಿದ್ದಾರೆ.

ಕ್ಯಾಶ್ ಬ್ಯಾಕ್, ಇಎಂಐ ಮತ್ತಿತರ ಆಫರ್

ಕ್ಯಾಶ್ ಬ್ಯಾಕ್, ಇಎಂಐ ಮತ್ತಿತರ ಆಫರ್

ಆನ್ ಲೈನ್ ಸ್ಟೋರ್ ಗೆ ಉಜ್ವಲವಾದ ಭವಿಷ್ಯವನ್ನು ನಿರೀಕ್ಷೆ ಮಾಡುವುದಾಗಿ ಅವರು ಹೇಳಿದ್ದು, ವೆಬ್ ಸ್ಟೋರ್ ಮೂಲಕ ಎಷ್ಟು ಪರ್ಸೆಂಟ್ ಮಾರಾಟವನ್ನು ನಿರೀಕ್ಷೆ ಮಾಡಲಾಗುತ್ತಿದೆ ಎಂಬ ವಿಚಾರವನ್ನು ತಿಳಿಸಿಲ್ಲ. ಅಂದಹಾಗೆ, ಆನ್ ಲೈನ್ ಸ್ಟೋರ್ ಗಳ ಆರಂಭಿಕ ಕೊಡುಗೆ ಎಂದು ಯಾವುದೇ ರಿಯಾಯಿತಿಯನ್ನು ಆಪಲ್ ನಿಂದ ನೀಡುತ್ತಿಲ್ಲ. ಆದರೆ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ಖರೀದಿಗೆ ಕ್ಯಾಶ್ ಬ್ಯಾಕ್, ವಿಶೇಷ ಗಿಫ್ಟ್ ಪ್ಯಾಕೇಜಿಂಗ್ ಆಯ್ಕೆ ಮತ್ತು ಇಎಂಐ ಪಾವತಿ ಆಯ್ಕೆಗಳು ಇರುತ್ತವೆ. ಕೊರೊನಾ ಇರುವ ಕಾರಣಕ್ಕೆ ಕೆಲ ಸಮಯ ಕ್ಯಾಶ್ ಆನ್ ಡೆಲಿವರಿ ಇರುವುದಿಲ್ಲ. ಆದರೆ ಭವಿಷ್ಯದಲ್ಲಿ ಯಾವಾಗ ಸಾಧ್ಯವೋ ಆಗ ಆ ಸೇವೆ ನೀಡಲಾಗುತ್ತದೆ ಎಂದು ಓ ಬ್ರಯಾನ್ ತಿಳಿಸಿದ್ದಾರೆ.

ಆಪಲ್ ಆನ್ ಲೈನ್ ಸ್ಟೋರ್ ಸೆ. 23ಕ್ಕೆ ಶುರು

ಆಪಲ್ ಆನ್ ಲೈನ್ ಸ್ಟೋರ್ ಸೆ. 23ಕ್ಕೆ ಶುರು

ಸದ್ಯಕ್ಕೆ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಿಂದ ಭಾರತದಲ್ಲಿನ ಒಟ್ಟು ಐಫೋನ್ ಮಾರಾಟದಲ್ಲಿ ಶೇಕಡಾ 30ರಷ್ಟು ಸೇಲ್ ಆಗುತ್ತಿದೆ ಎನ್ನುತ್ತಾರೆ ಇದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು. ಇನ್ನು ಮುಂದೆ ಕೂಡ ಈ ಎರಡು ಇ ಕಾಮರ್ಸ್ ಕಂಪೆನಿಗಳು ಹಾಗೂ ಇತರ ಅಧಿಕೃತ ಪ್ಲಾಟ್ ಫಾರ್ಮ್ ಮೂಲಕ ಆಪಲ್ ಉತ್ಪನ್ನಗಳ ಮಾರಾಟ ಮುಂದುವರಿಯಲಿದೆ. ಇನ್ನು ಆಪಲ್ ಕಂಪೆನಿ ಹೇಳಿರುವ ಪ್ರಕಾರ, ಬ್ಲ್ಯೂ ಡಾರ್ಟ್ ಎಕ್ಸ್ ಪ್ರೆಸ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಮೆಟ್ರೋ ನಗರಗಳಲ್ಲಿ ಮರು ದಿನವೇ ಡೆಲಿವರಿ ಆಗುತ್ತದೆ. 12 ಸಾವಿರಕ್ಕೂ ಹೆಚ್ಚು ಪಿನ್ ಕೋಡ್ ಗಳ ಪಟ್ಟಿ ಮಾಡಿಕೊಂಡಿದ್ದು, ಅವುಗಳಿಗೆ ಎರಡರಿಂದ ಮೂರು ದಿನದೊಳಗೆ ಡೆಲಿವರಿ ತಲುಪುತ್ತದೆ. ಮುಂದಿನ ವಾರ, ಅಂದರೆ ಬುಧವಾರ (ಸೆಪ್ಟೆಂಬರ್ 23, 2020) ಭಾರತದಲ್ಲಿ ಆಪಲ್ ಆನ್ ಲೈನ್ ಸ್ಟೋರ್ ಆರಂಭಿಸಲಿದೆ.

English summary

Apple Company First Online Store Will Start In India From September 23, 2020

Apple company first online store in India will launch on September 23, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X