For Quick Alerts
ALLOW NOTIFICATIONS  
For Daily Alerts

ಆರೋಗ್ಯ ವಿಮೆ ಮಹತ್ವದ ಸುದ್ದಿ: ಬಡವರಲ್ಲದವರಿಗೂ ಆಯುಷ್ಮಾನ್ ಭಾರತ್

|

ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ್ ಆರೋಗ್ಯ ವಿಮಾ ಯೋಜನೆಯನ್ನು (AB PM- JAY) ದೇಶದಲ್ಲಿನ ಬಡವರಲ್ಲದವರಿಗೂ ವಿಸ್ತರಣೆ ಮಾಡಲಿದೆ. ಇತರ ಎಲ್ಲ ಆರೋಗ್ಯ ವಿಮೆಗಳನ್ನು AB PM- JAY ಅಡಿಯಲ್ಲಿ ಒಗ್ಗೂಡಿಸಲಾಗುವುದು. ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯು ಒಂದು ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರುಪಾಯಿ ತನಕ ನಗದುರಹಿತವಾಗಿ (ಕ್ಯಾಶ್ ಲೆಸ್) ಕವರ್ ಆಗುತ್ತದೆ.

10.74 ಕೋಟಿ ಬಡ ಹಾಗೂ ಆರ್ಥಿಕ ದುರ್ಬಲ ಕುಟುಂಬಗಳಿಗೆ (53 ಕೋಟಿಗೂ ಹೆಚ್ಚು ಫಲಾನುಭವಿಗಳು) ಎರಡು ಮತ್ತು ಮೂರನೇ ಹಂತದ ಆಸ್ಪತ್ರೆ ದಾಖಲಾದ ವೆಚ್ಚಗಳು ಕವರ್ ಆಗುವ ಯೋಜನೆ ಇದು. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA) ಈ ಯೋಜನೆಯ ನಿರ್ವಹಣೆ ಹಾಗೂ ಅನುಷ್ಠಾನದ ಹೊಣೆಯನ್ನು ಹೊತ್ತುಕೊಂಡಿದೆ.

ಬಡವರಲ್ಲದವರಿಗೂ ಅನ್ವಯ

ಬಡವರಲ್ಲದವರಿಗೂ ಅನ್ವಯ

AB PM- JAYಗೆ ಸಂಬಂಧಿಸಿದಂತೆ ಗುರುವಾರದಂದು ಮಹತ್ವದ ಆದೇಶ ಹೊರಡಿಸಲಾಗಿದೆ. ಈ ಯೋಜನೆಯಿಂದ ತಪ್ಪಿಸಿಕೊಂಡಿದ್ದ ಮಧ್ಯಮ ವರ್ಗ ಅಥವಾ ಬಡವರಲ್ಲದವರಿಗೂ ಇದನ್ನು ತಲುಪಿಸಲು ಪ್ರಾಯೋಗಿಕವಾಗಿ ಅನುಷ್ಠಾನ ಆರಂಭಿಸಲಿದೆ. ಅಸಂಘಟಿತ ವಲಯದ ನೌಕರರು, ಸ್ವ ಉದ್ಯೋಗಿಗಳು, ವೃತ್ತಿಪರರು, ಎಂಎಸ್ ಎಂಇಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಇದು ಅನ್ವಯ ಆಗಲಿದೆ.

ಕೇಂದ್ರ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ

ಕೇಂದ್ರ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ

ಆರೋಗ್ಯ ಹಾಗೂ ಕುಟುಂಬ ಅಭಿವೃದ್ಧಿ ಇಲಾಖೆ ಕೇಂದ್ರ ಸಚಿವ ಹರ್ಷ ವರ್ಧನ್ ಅಧ್ಯಕ್ಷತೆಯಲ್ಲಿ AB PM- JAY ಅನುಷ್ಠಾನದ ಬಗ್ಗೆ ಪರಿಶೀಲನಾ ಸಭೆ ನಡೆಸಲಾಗಿದೆ. ಸರ್ಕಾರದಿಂದ ಹೊಸ ಆಲೋಚನೆ ಬಗ್ಗೆ ಮಾಹಿತಿ ನೀಡಿದ್ದು, ಮಧ್ಯಮ ವರ್ಗ ಹಾಗೂ ಬಡವರಲ್ಲವರಿಗೂ ಈ ಇನ್ಷೂರೆನ್ಸ್ ಯೋಜನೆಯನ್ನು ಪ್ರಾಯೋಗಿಕವಾಗಿ ತರುವುದರಿಂದ ಸಾಧಕ- ಬಾಧಕಗಳ ಬಗ್ಗೆ ಗೊತ್ತಾಗುತ್ತದೆ ಎಂದು ತಿಳಿಸಲಾಗಿದೆ.

ಕೊರೊನಾದ ಪರಿಣಾಮ ಯೋಜನೆ ಮೇಲೆ ಏನಾಗಬಹುದು

ಕೊರೊನಾದ ಪರಿಣಾಮ ಯೋಜನೆ ಮೇಲೆ ಏನಾಗಬಹುದು

ಇನ್ನು ಸಭೆಯಲ್ಲಿ AB PM- JAY ಮೇಲೆ ಕೊರೊನಾದ ಪರಿಣಾಮ ಏನಾಗಬಹುದು ಮತ್ತು ಅದನ್ನು ನಿವಾರಿಸುವುದು ಹೇಗೆ ಎಂದು ಕೂಡ ಚರ್ಚೆ ಆಗಿದೆ. ಕೇಂದ್ರ ಸಚಿವಾಲಯಗಳಲ್ಲಿ ಸದ್ಯಕ್ಕೆ ಇರುವ ಇತರ ಯೋಜನೆಗಳನ್ನು AB PM- JAY ಅಡಿಯಲ್ಲಿ ತರಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಅನುಮತಿಸಿದೆ. ಆ ಮೂಲಕ ಸರ್ಕಾರಿ ನೌಕರರು, ಗುತ್ತಿಗೆ ನೌಕರರು, ಕಟ್ಟಡ ನಿರ್ಮಾಣ ಕಾರ್ಮಿಕರು, ರಸ್ತೆ ಅಪಘಾತ ಸಂತ್ರಸ್ತರು, ಕೇಂದ್ರೀಯ ಸಶಸ್ತ್ರ ಮೀಸಲು ಪಡೆ ಇತರರು ಕೂಡ ಇದರಲ್ಲಿ ಒಳಗೊಳ್ಳಲಿದ್ದಾರೆ.

ಮನವಿ ಬಂದಲ್ಲಿ ಪರಿಗಣನೆ

ಮನವಿ ಬಂದಲ್ಲಿ ಪರಿಗಣನೆ

ಕೇಂದ್ರ ಸಚಿವಾಲಯ/ ಇಲಾಖೆಗಳು/ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು/ ಸ್ವಾಯತ್ತ ಸಂಸ್ಥೆಗಳ ಮನವಿಗಳು ಬಂದಲ್ಲಿ ಅವುಗಳನ್ನು ಪರಿಗಣಿಸಿ, ಆಯುಷ್ಮಾನ್ ಭಾರತ್ ಅಡಿಯಲ್ಲೇ ಆರೋಗ್ಯ ವಿಮೆ ಸೌಲಭ್ಯ ಒದಗಿಸಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ತಾತ್ವಿಕ ಒಪ್ಪಿಗೆ ನೀಡಿದ.

English summary

Ayushman Bharat To Cover Non Poor Too: All Schemes To Be Merged

The Centre will extend Ayushman Bharat Pradhan Mantri Jan Arogya Yojana to cover the non-poor population of the country.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X