For Quick Alerts
ALLOW NOTIFICATIONS  
For Daily Alerts

ಮಾರ್ಚ್‌ ತಿಂಗಳಲ್ಲಿ 3 ದಿನ ಬ್ಯಾಂಕ್ ಮುಷ್ಕರ, 5 ದಿನ ಬ್ಯಾಂಕ್ ಸೇವೆ ಬಂದ್?

|

ಜನವರಿ 31 ಮತ್ತು ಫೆಬ್ರವರಿ 1 ರಂದು ಎರಡು ದಿನಗಳ ಬ್ಯಾಂಕ್ ಮುಷ್ಕರದ ನಂತರ, ಹಲವಾರು ಪಿಎಸ್‌ಯು ಬ್ಯಾಂಕುಗಳ ಲಕ್ಷಾಂತರ ಉದ್ಯೋಗಿಗಳು ಮುಂದಿನ ವಾರ ಮತ್ತೊಂದು ಬ್ಯಾಂಕ್ ಮುಷ್ಕರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

 

ಬ್ಯಾಂಕ್ ಸಿಬ್ಬಂದಿ ಒಕ್ಕೂಟದ 2 ದಿನದ ಬಂದ್; ಏನೆಲ್ಲಾ ಆಯಿತು?ಬ್ಯಾಂಕ್ ಸಿಬ್ಬಂದಿ ಒಕ್ಕೂಟದ 2 ದಿನದ ಬಂದ್; ಏನೆಲ್ಲಾ ಆಯಿತು?

ವೇತನ ಪರಿಷ್ಕರಣೆ ಕುರಿತು ಭಾರತೀಯ ಬ್ಯಾಂಕುಗಳ ಸಂಘ(ಐಬಿಎ)ಯೊಂದಿಗೆ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರ ಮಾಡಲಾಗಿದ್ದು. ಇದೀಗ ವೇತನ ಹೆಚ್ಚಳದ ಜೊತೆಗೆ ವಾರಕ್ಕೆ ಐದು ದಿನ ಮಾತ್ರ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ಬೇಡಿಕೆಯಿಟ್ಟು ಮೂರು ದಿನಗಳ ಮುಷ್ಕರ ನಡೆಸುವುದಾಗಿ ಉದ್ಯೋಗಿಗಳ ಸಂಘಟನೆ ಎಚ್ಚರಿಸಿದೆ.

 
ಮಾರ್ಚ್‌ ತಿಂಗಳಲ್ಲಿ ಮತ್ತೆ 3 ದಿನ ಬ್ಯಾಂಕ್ ಮುಷ್ಕರ

ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ (ಬಿಇಎಫ್‌ಐ) ಮತ್ತು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಪ್ರಕಾರ, ಭಾರತೀಯ ಬ್ಯಾಂಕುಗಳ ಸಂಘದೊಂದಿಗೆ ವೇತನ ಪರಿಷ್ಕರಣೆ ಮಾತುಕತೆಯ ನಂತರ ಮಾರ್ಚ್ 11 ರಿಂದ 13 ರವರೆಗೆ 3 ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರವನ್ನು ನಡೆಸಲಾಗುವುದು. ಭಾರತೀಯ ಬ್ಯಾಂಕುಗಳ ಸಂಘ(ಐಬಿಎ)ಯೊಂದಿಗೆ ಮಾತುಕತೆ ವಿಫಲವಾಗಿದ್ದು ಮುಷ್ಕರವು ಮಾರ್ಚ್ ತಿಂಗಳ ಎರಡನೇ ಶನಿವಾರಕ್ಕಿಂತ ಮುಂಚಿತವಾಗಿರುವುದರಿಂದ, ಭಾನುವಾರ ಸೇರಿದಂತೆ ಸತತ ಐದು ದಿನಗಳವರೆಗೆ ಕೆಲಸದ ಮೇಲೆ ಪರಿಣಾಮ ಬೀರಬಹುದು.

ಬ್ಯಾಂಕ್ ನೌಕರರ ಸಂಘಗಳ ಈ ಮುಷ್ಟಕರವು ಯಶಸ್ವಿಯಾದರೆ ಮಾರ್ಚ್ ಎರಡನೇ ವಾರದಲ್ಲಿ ಹಲವಾರು ಬ್ಯಾಂಕುಗಳು ಮತ್ತು ಎಟಿಎಂಗಳನ್ನು ಸತತ ಐದು ದಿನಗಳವರೆಗೆ ಮುಚ್ಚಬಹುದು. ಈ ವರ್ಷ ಇದುವರೆಗೆ ಮೂರನೇ ಬ್ಯಾಂಕ್ ಮುಷ್ಕರ ಇದಾಗಲಿದ್ದು ಜನವರಿ 8ರಂದು ಭಾರತ್ ಬಂದ್ ಸಂದರ್ಭದಲ್ಲೂ ಬ್ಯಾಂಕ್‌ಗಳ ಸೇವೆ ಮೇಲೆ ಪರಿಣಾಮ ಬೀರಿತು.

ಖಾಸಗಿ ಬ್ಯಾಂಕುಗಳಾದ ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಮುಷ್ಕರದಿಂದಾಗಿ ಯಾವುದೇ ಪರಿಣಾಮ ಬೀರುವುದಿಲ್ಲ.

English summary

Bank strike 3 days Again In March

Bank employees unions have called for a three-day bank strike in March
Story first published: Saturday, February 8, 2020, 11:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X