For Quick Alerts
ALLOW NOTIFICATIONS  
For Daily Alerts

Bank holidays : ಈ ವಾರ ಬ್ಯಾಂಕುಗಳು 4 ದಿನ ಬಂದ್; ವರ್ಕಿಂಗ್ ಡೇ ಯಾವತ್ತು ತಿಳಿಯಿರಿ

|

ಹಬ್ಬದ ಋತು ಶುರುವಾದ ಬಳಿಕ ಬ್ಯಾಂಕ್‌ಗಳಿಗೆ ಭರ್ಜರಿ ರಜಾ ದಿನಗಳಿವೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಹಲವು ರಜೆಗಳನ್ನು ಕಂಡಿದ್ದ ಬ್ಯಾಂಕ್‌ಗಳು ನವೆಂಬರ್ ತಿಂಗಳಲ್ಲಿ 10 ದಿನ ಬಂದ್ ಆಗಿರಲಿವೆ. ಅದರಲ್ಲೂ ಈ ವಾರ, ಅಂದರೆ ನವೆಂಬರ್ 7ರಿಂದ 13ರವರೆಗೂ ಬ್ಯಾಂಕುಗಳು 4 ದಿನ ಬಾಗಿಲು ಮುಚ್ಚಿರುತ್ತವೆ. ಹೀಗಾಗಿ ಈ ವಾರ ತುರ್ತಾಗಿ ಬ್ಯಾಂಕ್ ಕೆಲಸ ಮಾಡಿಸಿಕೊಳ್ಳಬೇಕೆನ್ನುವವರು ರಜಾ ದಿನಗಳ್ಯಾವುವು ಎಂಬುದನ್ನು ಸ್ಪಷ್ಟಪಡಿಸಿಕೊಂಡು ಮುಂದುವರಿಯಿರಿ.

ನವೆಂಬರ್ 7ರಿಂದ 13ರವರೆಗಿನ ರಜಾ ದಿನಗಳು

ನವೆಂಬರ್ 8: ಗುರುನಾನಕ್ ಜಯಂತಿ, ಕಾರ್ತಿಕ ಪೂರ್ಣಿಮಾ, ರಾಹಸ್ ಪೂರ್ಣಿಮಾ ಇದೆ. ಏಜ್ವಾಲ್, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಡ, ಡೆಹ್ರಾಡೂನ್, ಹೈದರಾಬಾದ್, ಜೈಪುರ್, ಜಮ್ಮು, ಕಾನಪುರ್, ಕೋಲ್ಕತಾ, ಲಕ್ನೋ, ಮುಂಬೈ, ನಾಗಪುರ್, ನವದೆಹಲಿ, ರಾಯಪುರ್, ರಾಂಚಿ, ಶಿಮ್ಲಾ ಮತ್ತು ಶ್ರೀನಗರ್ ಪ್ರದೇಶಗಳಲ್ಲಿ ಬ್ಯಾಂಕುಗಳು ಈ ದಿನ ಮುಚ್ಚಿರುತ್ತವೆ.

ಈ ರಾಜ್ಯದಲ್ಲಿ ಮಕ್ಕಳಿಗೆ ಆಧಾರ್ ಕಾರ್ಡ್ ಸೇವೆ ಮನೆ ಬಾಗಿಲಿಗೆ!ಈ ರಾಜ್ಯದಲ್ಲಿ ಮಕ್ಕಳಿಗೆ ಆಧಾರ್ ಕಾರ್ಡ್ ಸೇವೆ ಮನೆ ಬಾಗಿಲಿಗೆ!

ನವೆಂಬರ್ 11: ಕನಕದಾಸ ಜಯಂತಿ ಮತ್ತು ವಂಗಲ ಉತ್ಸವ ಇದೆ. ಕರ್ನಾಟಕ ಮತ್ತು ಸಿಕ್ಕಿಂನಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತವೆ.
ನವೆಂಬರ್ 12: ಸೆಕೆಂಡ್ ಸ್ಯಾಟರ್ಡೇ
ನವೆಂಬರ್ 13: ವಾರದ ರಜೆ (ಭಾನುವಾರ)

ಈ ವಾರ ಬ್ಯಾಂಕುಗಳು 4 ದಿನ ಬಂದ್; ವರ್ಕಿಂಗ್ ಡೇ ಯಾವತ್ತು ತಿಳಿಯಿರಿ

ಕರ್ನಾಟಕದಲ್ಲಿ ಈ ವಾರ ನವೆಂಬರ್ 11, 12 ಮತ್ತು 13 ಈ ಮೂರು ದಿನ ಬ್ಯಾಂಕುಗಳು ಬಂದ್ ಇರುತ್ತವೆ. ಶುಕ್ರವಾರದಿಂದ ಭಾನುವಾರದವರೆಗೂ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ನಿಮ್ಮ ಕೆಲಸವೇನಾದರೂ ಇದ್ದರೆ ಸೋಮವಾರದಿಂದ ಗುರುವಾರದವರೆಗೂ ಮುಗಿಸಿ.

ನವೆಂಬರ್‌ನಲ್ಲಿ ಇತರ ದಿನಗಳ ರಜೆ

ನವೆಂಬರ್ 23ರಂದು ಸೆಂಗ್ ಕುತ್ ಸ್ನೆಮ್ ಎಂಬ ಉತ್ಸವ ಇದೆ. ಇದು ಮೇಘಾಲಯದಲ್ಲಿ ಆಚರಿಸಲಾಗುವ ಹಬ್ಬ. ಈ ಹಿನ್ನೆಲೆಯಲ್ಲಿ ಮೇಘಾಲಯದಲ್ಲಿ ಬ್ಯಾಂಕುಗಳು ಬಂದ್ ಇರಲಿವೆ. ಅದೂ ಸೇರಿ ನವೆಂಬರ್ 13ರ ನಂತರ 4 ರಜೆಗಳಿವೆ. ಇದರಲ್ಲಿ ಎರಡು ವಾರದ ರಜೆ ಮತ್ತು ಒಂದು ಫೋರ್ತ್ ಸ್ಯಾಟರ್ಡೇ ರಜೆ ಒಳಗೊಂಡಿದೆ.

English summary

Banks Open For Just 3-4 Days This Week, Know Holiday Dates

From 2022 November 7 to 13, banks will remain closed for 4 days. This include holidays of Gurunanak Jayanti, Kartika Purnima, Kankadasa Jayanti festivals.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X