For Quick Alerts
ALLOW NOTIFICATIONS  
For Daily Alerts

ನಾಳೆಯಿಂದ ಈ ನಗರಗಳಲ್ಲಿ ನಾಲ್ಕು ದಿನಗಳು ಬ್ಯಾಂಕ್‌ಗಳಿಗೆ ರಜೆ!

|

ಏಪ್ರಿಲ್‌ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ವಿವಿಧ ಹಬ್ಬಗಳ ಕಾರಣದಿಂದಾಗಿ ಸಾಕಷ್ಟು ರಜೆ ಇರಲಿದೆ. ಅದರಲ್ಲೂ ನಾಳೆಯಿಂದ (ಏಪ್ರಿಲ್ 13) , ಏಪ್ರಿಲ್ 16ರವರೆಗೆ ದೇಶದ ಹೆಚ್ಚಿನ ನಗರಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡಲಿವೆ.

 

ಭಾರತೀಯ ರಿಸರ್ವ್‌ ಬ್ಯಾಂಕ್(ಆರ್‌ಬಿಐ) ರಜಾ ಕ್ಯಾಲೆಂಡರ್‌ ಪ್ರಕಾರ ಬ್ಯಾಂಕಿಂಗ್ ರಜಾದಿನಗಳು ನಿರ್ದಿಷ್ಟ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಒಂದು ರಾಜ್ಯದಿಂದ ಇನ್ನೊಂದಕ್ಕೆ ಭಿನ್ನವಾಗಿದೆ. ಹಾಗಿದ್ದರೆ ನಾಳೆಯಿಂದ ಏನೆಲ್ಲಾ ಕಾರಣಗಳಿಗೆ, ಯಾವೆಲ್ಲಾ ನಗರಗಳಲ್ಲಿ ಬ್ಯಾಂಕ್ ರಜೆ ಇರಲಿದೆ ಎಂಬ ಮಾಹಿತಿ ಈ ಕೆಳಗಿದೆ.

ಏಪ್ರಿಲ್ 13

ಏಪ್ರಿಲ್ 13

ಹಬ್ಬ ಅಥವಾ ದಿನಾಚರಣೆ: ಗುಡಿ ಪಾಡ್ವಾ / ತೆಲುಗು ಹೊಸ ವರ್ಷದ ದಿನ / ಯುಗಾದಿ ಹಬ್ಬ / ಸಜಿಬು ನೊಂಗ್‌ಮಪನ್ಬಾ (ಚೆರೌಬಾ) / 1 ನೇ ನವರಾತ್ರಿ

ನಗರಗಳು: ಬೇಲಾಪುರ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು, ಮುಂಬೈ, ನಾಗ್ಪುರ, ಪಣಜಿ, ಶ್ರೀನಗರದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಏಪ್ರಿಲ್ 14

ಏಪ್ರಿಲ್ 14

ಹಬ್ಬ ಅಥವಾ ದಿನಾಚರಣೆ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ/ ತಮಿಳು ಹೊಸ ವರ್ಷದ ದಿನ/ವಿಶು/ಬಿಜು ಉತ್ಸವ/ಚೀರಾಬಾ/ಬೋಹಾಗ್ ಬಿಹು

ನಗರಗಳು: ಅಗರ್ತಲಾ, ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭುವನೇಶ್ವರ, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್ಟಾಕ್, ಗುವಾಹಟಿ, ಹೈದ್ರಾಬಾದ್, ಇಂಫಾಲ್, ಜೈಪುರ, ಜಮ್ಮು, ಕಾನ್ಪುರ್, ಕೊಚ್ಚಿ, ಕೋಲ್ಕತಾ, ಲಕ್ನೋ, ದೆಹಲಿ, ಮುಂಬೈ ಪಾಟ್ನಾ, ರಾಂಚಿ, ಶ್ರೀನಗರ, ತಿರುವನಂತಪುರಂದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

ಏಪ್ರಿಲ್ 15
 

ಏಪ್ರಿಲ್ 15

ಹಬ್ಬ ಅಥವಾ ದಿನಾಚರಣೆ: ಹಿಮಾಚಲ್ ದಿನ / ಬೆಂಗಾಳಿ ಹೊಸ ವರ್ಷದ ದಿನ / ಬೋಹಾಗ್ ಬಿಹು / ಸರ್ಹುಲ್

ನಗರಗಳು: ಅಗರ್ತಲಾ, ಗುವಾಹಟಿ, ಕೋಲ್ಕತಾ, ರಾಂಚಿ ಮತ್ತು ಶಿಮ್ಲಾದಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.

ಏಪ್ರಿಲ್ 16

ಏಪ್ರಿಲ್ 16

ಹಬ್ಬ: ಬೋಹಾಗ್ ಬಿಹು

ನಗರ: ಗುವಾಹಟಿಯಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ

ಉಳಿದಂತೆ ಏಪ್ರಿಲ್ 21 ಮತ್ತು ಏಪ್ರಿಲ್ 24ರಂದು ಬ್ಯಾಂಕ್‌ಗಳು ರಾಮನವಮಿ ಮತ್ತು ಎರಡನೇ ಶನಿವಾರದ ಪ್ರಯುಕ್ತ ರಜೆ ಇರಲಿದೆ. ಹೀಗಾಗಿ ನಗದು ಠೇವಣಿ, ವಿತ್‌ಡ್ರಾ, ಚೆಕ್‌ ಕ್ಲಿಯರೆನ್ಸ್‌, ಸಾಲ ಸೇರಿದಂತೆ ತಮ್ಮ ಯಾವುದೇ ಬ್ಯಾಂಕ್ ವ್ಯವಹಾರಗಳ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು.

English summary

Banks To Remain Closed From Tomorrow: 4 Days Holiday Details Here

Banks will remain closed in most parts of the country from tomorrow (13 April) till 16 April due to various festivals, according RBI Holiday Calendar.
Story first published: Monday, April 12, 2021, 15:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X