For Quick Alerts
ALLOW NOTIFICATIONS  
For Daily Alerts

ತಜ್ಞರ ನಿರೀಕ್ಷೆಯನ್ನೂ ಮೀರಿಸಿದ ಇನ್ಫೋಸಿಸ್ ಲಾಭದ ಪ್ರಮಾಣ

By ಅನಿಲ್ ಆಚಾರ್
|

ಬೆಂಗಳೂರು ಮೂಲದ ಇನ್ಫೋಸಿಸ್ ಅಕ್ಟೋಬರ್ ನಿಂದ ಡಿಸೆಂಬರ್ ತ್ರೈಮಾಸಿಕದ ಅವಧಿಗೆ ನಿರೀಕ್ಷೆಗೂ ಮೀರಿದ ಫಲಿತಾಂಶ ನೀಡಿದೆ. ವರ್ಷದಿಂದ ವರ್ಷಕ್ಕೆ ಆದಾಯ 6.6% ಬೆಳವಣಿಗೆ ಕಂಡಿದೆ. ಡಿಜಿಟಲ್ ಆದಾಯದಲ್ಲಿ 31.3 ಪರ್ಸೆಂಟ್ ಮತ್ತು ಒಟ್ಟಾರೆಯಾಗಿ ಡಿಜಿಟಲ್ ಆದಾಯವು ಒಟ್ಟಾರೆ ಆದಾಯದ ಅರ್ಧಕ್ಕಿಂತ ಹೆಚ್ಚಾಗಿದೆ. ದೊಡ್ಡ ವ್ಯವಹಾರಗಳ ಒಪ್ಪಂದ ಮೌಲ್ಯ (TCV) ಸಾರ್ವಕಾಲಿಕ ಗರಿಷ್ಠ $ 7.13 ಬಿಲಿಯನ್ ಇದೆ ಎಂದು ಇನ್ಫೋಸಿಸ್ ಬಿಎಸ್ ಇ ಲಿಸ್ಟಿಂಗ್ ನಲ್ಲಿ ತಿಳಿಸಿದೆ.

ಒಟ್ಟಾರೆ ಲಾಭ ಪ್ರಮಾಣವು 7.3% ಹೆಚ್ಚಳವಾಗಿ ರು. 5,197 ಕೋಟಿ ಮುಟ್ಟಿದೆ. ಬಡ್ಡಿ ಮತ್ತು ತೆರಿಗೆ ಮುಂಚಿನ ಆದಾಯವು (EBIT) 5.8 ಪರ್ಸೆಂಟ್ ಹೆಚ್ಚಳವಾಗಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 6,589 ಕೋಟಿ ರುಪಾಯಿ ಆಗಿದೆ. ಮಾರ್ಜಿನ್ ವಿಸ್ತರಣೆ 25.4 ಪರ್ಸೆಂಟ್ ಮುಟ್ಟಿದೆ.

 

5 ಲಕ್ಷ ಕೋಟಿ ರುಪಾಯಿ ಮಾರುಕಟ್ಟೆ ಬಂಡವಾಳ ಮೌಲ್ಯ ದಾಟಿದ ಇನ್ಫೋಸಿಸ್

ವಿಶ್ಲೇಷಕರು ಅಂದಾಜು ಮಾಡಿದ ಲಾಭದ ಪ್ರಮಾಣ 5084 ಕೋಟಿ ಮತ್ತು ಆದಾಯ ರು. 25,379 ಕೋಟಿ ರುಪಾಯಿ. EBIT 6357 ಕೋಟಿ ರುಪಾಯಿ ಮತ್ತು ಮಾರ್ಜಿನ್ 25.05 ಪರ್ಸೆಂಟ್. $ 10 ಮಿಲಿಯನ್+ ಬ್ಯಾಂಡ್ ನಲ್ಲಿ ನಾಲ್ವರು ಗ್ರಾಹಕರನ್ನು ಕಂಪೆನಿ ಸೇರ್ಪಡೆ ಮಾಡಿಕೊಂಡಿದೆ. $ 1 ಮಿಲಿಯನ್+ ಬ್ಯಾಂಡ್ ನಲ್ಲಿ 16 ಗ್ರಾಹಕರು ಆಗಿ, ಒಟ್ಟಾರೆ ಸಕ್ರಿಯ ಗ್ರಾಹಕರ ಪಟ್ಟಿಯು 2020ರ ಡಿಸೆಂಬರ್ ಕೊನೆ ಹೊತ್ತಿಗೆ 1562 ಇದೆ.

ತಜ್ಞರ ನಿರೀಕ್ಷೆಯನ್ನೂ ಮೀರಿಸಿದ ಇನ್ಫೋಸಿಸ್ ಲಾಭದ ಪ್ರಮಾಣ

ಈ ಮಧ್ಯೆ $ 100+ ಮಿಲಿಯನ್ ಬ್ಯಾಂಡ್ ನ ಒಬ್ಬ ಗ್ರಾಹಕರನ್ನು ಇನ್ಫೋಸಿಸ್ ಕಳೆದುಕೊಂಡಿದೆ. ಇನ್ನು ಇನ್ಫೋಸಿಸ್ ಷೇರು ಡಿಸೆಂಬರ್ ತ್ರೈಮಾಸಿಕದಲ್ಲಿ 24.6 ಪರ್ಸೆಂಟ್ ಗಳಿಕೆ ಕಂಡಿದೆ. 2020ರ ಕ್ಯಾಲೆಂಡರ್ ವರ್ಷದಲ್ಲಿ 71.8 ಪರ್ಸೆಂತ್ ಹೆಚ್ಚಳವಾಗಿದೆ.

English summary

Bengaluru Based Infosys FY21 Q3 Beat Estimates

Bengaluru based IT company Infosys beat analysts estimates for FY21 Q3. Here is the details.
Story first published: Wednesday, January 13, 2021, 18:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X