For Quick Alerts
ALLOW NOTIFICATIONS  
For Daily Alerts

ಮಧ್ಯ ಪ್ರಾಚ್ಯದ ಮೇಲಿನ ಎಲ್ ಪಿಜಿ ಅವಲಂಬನೆ ತಪ್ಪಿಸಲು ಭಾರತದ ಮಹತ್ತರ ಹೆಜ್ಜೆ

By ಅನಿಲ್ ಆಚಾರ್
|

ಮಧ್ಯಪ್ರಾಚ್ಯದ ಮೇಲಿನ ಎಲ್ ಪಿಜಿ ಅವಲಂಬನೆ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಭಾರತದ ಖರೀದಿದಾರ ಕಂಪೆನಿಯೊಂದು ಮತ್ತೆ ಪ್ರಯತ್ನ ಆರಂಭಿಸಿದೆ. ಕಳೆದ ವರ್ಷ ಡ್ರೋನ್ ದಾಳಿ ನಡೆದಾಗ ಹಾಗೂ ವ್ಯಾಪಾರ ಸಮರದ ವೇಳೆಯಲ್ಲೂ ಪೂರೈಕೆ ವ್ಯತ್ಯಯ ಆದಾಗ ಇಂಥ ಪ್ರಯತ್ನ ಆಗಿತ್ತು.

ಎಲ್ ಪಿಜಿ ಸಿಲಿಂಡರ್ ವಿತರಣೆಯಲ್ಲಿ ನವೆಂಬರ್ 1ರಿಂದ ಮಹತ್ತರ ಬದಲಾವಣೆಎಲ್ ಪಿಜಿ ಸಿಲಿಂಡರ್ ವಿತರಣೆಯಲ್ಲಿ ನವೆಂಬರ್ 1ರಿಂದ ಮಹತ್ತರ ಬದಲಾವಣೆ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಜಾಗತಿಕ ಪೂರೈಕೆದಾರರಿಂದ ಬಿಡ್ ಕರೆದಿದೆ. 2021ನೇ ಇಸವಿಗೆ ಅಗತ್ಯ ಇರುವ ಶೇಕಡಾ 20ರಷ್ಟು ಎಲ್ ಪಿಜಿ ಪೂರೈಕೆಗೆ ಬಿಡ್ ಆಹ್ವಾನಿಸಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ ಈಗಲೂ ಮಧ್ಯಪ್ರಾಚ್ಯ ಉತ್ಪಾದಕರಿಗೆ ಬಿಡ್ಡಿಂಗ್ ಮುಕ್ತವಾಗಿಯೇ ಇದೆ. ಈಗಾಗಲೇ ಒಪ್ಪಂದ ಆಗಿರುವಂತೆ ಬಹುಪಾಲು ಅಗತ್ಯವನ್ನು ಬಿಪಿಸಿಎಲ್ ಗೆ ಪೂರೈಸುತ್ತಿದ್ದಾರೆ ಮಧ್ಯಪ್ರಾಚ್ಯದ ಸರಬರಾಜುದಾರರು.

ವಿವಿಧ ಮೂಲಗಳಿಂದ ಎಲ್ ಪಿಜಿ

ವಿವಿಧ ಮೂಲಗಳಿಂದ ಎಲ್ ಪಿಜಿ

ಭಾರತದ ಎರಡನೇ ಅತಿದೊಡ್ಡ ತೈಲ ರೀಟೇಲರ್ ಆದ ಬಿಪಿಸಿಎಲ್ ಈ ವರ್ಷದ ಆರಂಭದಲ್ಲಿ ತನ್ನ ಪೂರೈಕೆ ಮೂಲವನ್ನು ವಿಸ್ತರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿತು. ಆದರೆ ಅಂಥ ಆಕರ್ಷಕ ಟೆಂಡರ್ ಗಳು ಬಾರದಿದ್ದರಿಂದ ಯಾರಿಗೂ ನೀಡಲಿಲ್ಲ ಎಂದು ವರ್ತಕರು ಹೇಳುತ್ತಾರೆ. ಮಧ್ಯಪ್ರಾಚ್ಯದಿಂದ ನೀಡುತ್ತಿದ್ದ ಮೊತ್ತಕ್ಕಿಂತ ಉತ್ತಮ ದರಕ್ಕೆ ಪಡೆಯುವುದು ಹಾಗೂ ಎಲ್ ಪಿಜಿಯನ್ನು ವಿವಿಧ ಮೂಲಗಳಿಂದ ಪಡೆಯುವುದು ಈ ಟೆಂಡರ್ ಉದ್ದೇಶವಾಗಿದೆ ಎಂದು ದಾಖಲೆಯಲ್ಲಿ ಪ್ರಸ್ತಾವ ಮಾಡಲಾಗಿದೆ. ಸೌದಿ ಅರೇಬಿಯಾ, ಕತಾರ್, ಯುಎಇ ಮತ್ತು ಕುವೈತ್ ನಿಂದ ಭಾರತದ ರೀಟೇಲರ್ ಗಳು ಪಡೆಯುವ ಎಲ್ ಪಿಜಿಯಲ್ಲಿ ಬಹುಪಾಲು ಬಳಸುವುದು ಅಡುಗೆ ಉದ್ದೇಶಕ್ಕಾಗಿ.

ಭಾರತದ ನಡೆ ತಾರ್ಕಿಕವಾಗಿದೆ

ಭಾರತದ ನಡೆ ತಾರ್ಕಿಕವಾಗಿದೆ

ಆದರೆ, ದರ ಏರಿಳಿತಗಳು ಮತ್ತು ಪೂರೈಕೆ ವ್ಯತ್ಯಯಕ್ಕೆ ಗುರಿಯಾಗಿವೆ. ಸೌದಿ ಅರೇಬಿಯಾದ ಸಂಸ್ಕರಣಾ ಘಟಕ ಹಾಗೂ ಕ್ಷೇತ್ರಗಳ ಮೇಲೆ ಡ್ರೋಣ್ ದಾಳಿ ನಡೆದಾಗ ಸಮಸ್ಯೆ ಹೆಚ್ಚು ಗಮನಕ್ಕೆ ಬಂತು. ಅದು ಕೂಡ ಆಗ ಭಾರತದಲ್ಲಿ ಹಬ್ಬದ ಸೀಸನ್ ಆಗಿತ್ತು. ಅದರ ಬೆನ್ನಿಗೆ ಕೊರೊನಾ ಕಾರಣಕ್ಕೆ OPECನಿಂದ ಪೂರೈಕೆ ನಿರ್ವಹಣೆಗೆ ಮುಂದಾಗಲಾಯಿತು. ಆಗ ಮಧ್ಯಪ್ರಾಚ್ಯದಲ್ಲಿ ಉತ್ಪಾದನೆ ಕಡಿಮೆ ಆಯಿತು. ಈ ವೇಳೆ, ಪರ್ಷಿಯನ್ ಗಲ್ಫ್ ನಲ್ಲಿ ಭಾರತಕ್ಕೆ ಸ್ಪರ್ಧೆ ಎದುರಾಯಿತು. ಅದು ಕೂಡ ಯುಎಸ್ ಜತೆಗೆ ಚೀನಾದ ವಾಣಿಜ್ಯ ಸಮರದಲ್ಲಿ ಆಮದನ್ನು ನಿಲ್ಲಿಸಿದ ಪರಿಣಾಮ ಆಗಿತ್ತು. "ಭಾರತದ ನಡೆ ತಾರ್ಕಿಕವಾಗಿದೆ" ಎನ್ನುತ್ತಾರೆ ವಿಶ್ಲೇಷಕರು.

ಯುರೋಪ್, ಯುಎಸ್ ನಿಂದ ಆಮದು ಮಾಡಿಕೊಂಡರೆ ವೆಚ್ಚ ಹೆಚ್ಚು
 

ಯುರೋಪ್, ಯುಎಸ್ ನಿಂದ ಆಮದು ಮಾಡಿಕೊಂಡರೆ ವೆಚ್ಚ ಹೆಚ್ಚು

ಆಗಸ್ಟ್, ಸೆಪ್ಟೆಂಬರ್ ನಲ್ಲಿ ಭಾರತದ ಎಲ್ಲ ಎಲ್ ಪಿಜಿ ಆಮದು ಆಗಿದ್ದು ಮಧ್ಯಪ್ರಾಚ್ಯದಿಂದ. ಒಂದು ವೇಳೆ ಯುಎಸ್ ಮತ್ತು ಚೀನಾ ಮಧ್ಯೆ ಮತ್ತೊಂದು ವಾಣಿಜ್ಯ ಸಮರ ಉದ್ಭವಿಸಿದರೆ ವಿವಿಧ ಮೂಲದ ಪೂರೈಕೆಯಿಂದ ಅನುಕೂಲ ಆಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಮಧ್ಯಪ್ರಾಚ್ಯಕ್ಕೆ ಈಗಲೂ ಅನುಕೂಲ ಇದೆ. ಏಕೆಂದರೆ ಭಾರತದ ಪಾಲಿಗೆ ಪ್ರಮುಖ ಪೂರೈಕೆದಾರ ಅದು. ಈಗ ಬಿಪಿಸಿಎಲ್ ಗೆ ಬೇರೆ ಆಯ್ಕೆಗಳೂ ಇವೆ. ಅದರಲ್ಲಿ ಯುರೋಪ್, ಯುಎಸ್ ನಿಂದಲೂ ಆಮದು ಮಾಡಿಕೊಳ್ಳಬಹುದು. ಆದರೆ ವೆಚ್ಚ ಹೆಚ್ಚಾಗುತ್ತದೆ ಹಾಗೂ ರವಾನೆ ಸಮಯ ಹೆಚ್ಚಾಗುತ್ತದೆ.

2020ರಲ್ಲಿ 16 ಮಿಲಿಯನ್ ತೈಲ ಆಮದು

2020ರಲ್ಲಿ 16 ಮಿಲಿಯನ್ ತೈಲ ಆಮದು

ಬಿಪಿಸಿಎಲ್ ನಿಂದ 2021ನೇ ಇಸವಿಗೆ 8,00,000 ಟನ್ ಗೆ ಬಿಡ್ ಆಹ್ವಾನಿಸಲಾಗಿದೆ. ಅಂದರೆ ಅದರ ವಾರ್ಷಿಕ ಆಮದು ಅಗತ್ಯವಾದ 4 ಮಿಲಿಯನ್ ಟನ್ ಗೂ ಸ್ವಲ್ಪ ಹೆಚ್ಚು. ಸಾಗಣೆ ವೆಚ್ಚ ತಗ್ಗಿಸುವ ಉದ್ದೇಶದಿಂದ ರವಾನೆ ಜವಾಬ್ದಾರಿಯನ್ನು ಗಣನೆಗೆ ತೆಗೆದುಕೊಳ್ಳಬಹುದು. ಅರಬ್ ಗಲ್ಫ್ ನಿಂದ ಉಚಿತವಾಗಿ ರವಾನಿಸುವುದನ್ನು ಲೆಕ್ಕಕ್ಕೆ ಹಾಕಿಕೊಳ್ಳಬಹುದು. ಈ ಹಿಂದಿನ ವರ್ಷ ಮಾರಾಟಗಾರರೇ ಭಾರತಕ್ಕೆ ಡೆಲಿವರಿ ಮಾಡಬೇಕಿತ್ತು. ಈ ಆಫರ್ ಗಳು ಪ್ರೀಮಿಯಂ ಅಥವಾ ರಿಯಾಯಿತಿ ಮೇಲೆ ಆಧಾರ ಪಡಬಹುದು. ಒಪ್ಪಂದದ ದರವನ್ನು ಪ್ರತಿ ತಿಂಗಳು ತಿಳಿಸಲಾಗುತ್ತದೆ. ಅಂದ ಹಾಗೆ ಭಾರತದಲ್ಲಿ ತೈಲಕ್ಕೆ ಬೇಡಿಕೆ ಕಡಿಮೆ ಆಗಿ, ಎಲ್ ಪಿಜಿ ಬೇಡಿಕೆ ಹೆಚ್ಚಾಗಿದೆ. ಅಧಿಕಾರಿಗಳು ತೈಲವನ್ನು ಶೇಖರಣೆ ಮಾಡಿಕೊಂಡಿದ್ದಾರೆ. ಕೊರೊನಾ ಲಾಕ್ ಡೌನ್ ಮಧ್ಯೆ ಅಡುಗೆ ಅನಿಲ ಬಳಕೆ ಹೆಚ್ಚಾಗಿದೆ. 2020ರಲ್ಲಿ 16 ಮಿಲಿಯನ್ ತೈಲ ಆಮದು ಮಾಡಿಕೊಂಡಿದ್ದು, ಅದು ಮುಂದಿನ ವರ್ಷ 16.6 ಮಿಲಿಯನ್ ಗೆ ಹೆಚ್ಚಳ ಆಗಬಹುದು ಎಂಬ ನಿರೀಕ್ಷೆ ಇದೆ.

English summary

Bharath Petroleum Tries To Reduce Dependence On Middle East In LPG

Bharath Petroleum Corporation Limited (BPCL) tries to reduce dependence on Middle East in LPG. Here is the details.
Story first published: Sunday, October 18, 2020, 16:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X