For Quick Alerts
ALLOW NOTIFICATIONS  
For Daily Alerts

ದೇಶದಲ್ಲಿ ಭಾನುವಾರವೂ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ

By ರಾಜಶೇಖರ್ ಮ್ಯಾಗೇರಿ
|

ನವದೆಹಲಿ, ಫೆಬ್ರವರಿ.21: ಬಡ ಮತ್ತು ಮಧ್ಯಮ ವರ್ಗದ ಜನ ಸಾಮಾನ್ಯರಿಗೆ ಇಂಧನವು ಗಗನಕುಸುಮವಾಗುತ್ತಿದೆ. ದೇಶದಲ್ಲಿ 13ನೇ ದಿನವೂ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗುತ್ತಿದೆ.

 

ಒಡಿಶಾದಲ್ಲಿ ಭಾನುವಾರವೂ ಇಂಧನ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಗೆ 44 ಪೈಸೆ ಮತ್ತು ಡೀಸೆಲ್ ಗೆ 43 ಪೈಸೆ ಏರಿಕೆಯಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 91.64 ರೂಪಾಯಿ ಮತ್ತು ಡೀಸೆಲ್ ದರ ಪ್ರತಿ ಲೀಟರ್ ಗೆ 88.57 ರೂಪಾಯಿ ಆಗಿದೆ.

ಪೆಟ್ರೋಲ್, ಡೀಸೆಲ್ ದರ ಸತತ 12ನೇ ದಿನ ಏರಿಕೆ: ಮುಂಬೈನಲ್ಲಿ ಲೀಟರ್‌ಗೆ 97 ರೂ.

ರಾಜ್ಯದಲ್ಲಿ ಶನಿವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 91.20 ರೂಪಾಯಿ ಇದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 88.14 ರೂಪಾಯಿ ಆಗಿತ್ತು. ಇನ್ನು ದೇಶದ ಪ್ರಮುಖ ನಗರಗಳಲ್ಲಿ ಇಂಧನ ಬೆಲೆ ಎಷ್ಟಿದೆ ಎನ್ನುವುದರ ಕುರಿತು ಪಟ್ಟಿ ಇಲ್ಲಿದೆ.

ದೇಶದಲ್ಲಿ ಭಾನುವಾರವೂ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ(ಪ್ರತಿ ಲೀಟರ್):

ವಾರ: ಭಾನುವಾರ - ಶನಿವಾರ

ದೆಹಲಿ - 90.58 - 90.15

ಕೋಲ್ಕತ್ತಾ - 91.78 - 91.41

ಮುಂಬೈ - 97.00 - 96.62

ಚೆನ್ನೈ - 92.59 - 92.25

ಬೆಂಗಳೂರು - 93.61 - 93.21

ದೇಶದ ಪ್ರಮುಖ ನಗರಗಳಲ್ಲಿ ಡೀಸೆಲ್ ಬೆಲೆ(ಪ್ರತಿ ಲೀಟರ್):

ವಾರ: ಭಾನುವಾರ - ಶನಿವಾರ

ದೆಹಲಿ - 80.97 - 80.60

ಕೋಲ್ಕತ್ತಾ - 84.86 - 84.19

ಮುಂಬೈ - 88.06 - 87.67

ಚೆನ್ನೈ - 85.98 - 85.63

ಬೆಂಗಳೂರು - 85.84 - 85.44

English summary

Bhubaneswar: Price Continues To Rise In On Sunday, Check Rates of Diesel And Petrol

Bhubaneswar: Price Continues To Rise In On Sunday, Check Ratesof Diesel And Petrol
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X