ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ಬಯೋಕಾನ್ ಕಂಪೆನಿಯ Itolizumab ಇಂಜೆಕ್ಷನ್ 25mg/5mL ಸಲ್ಯೂಷನ್ ಅನ್ನು ಭಾರತದಲ್ಲಿ ತುರ್ತು ಬಳಕೆಗೆ ಮಾರ್ಕೆಟ್ ಮಾಡಲು ಅನುಮತಿ ದೊರೆತಿದೆ. ಈ ಬಗ್ಗೆ ಬಯೋಕಾನ್ ಶನಿವಾರ ಮಾಹಿತಿ ನೀಡಿದೆ. ಇದನ್ನು cytokine release syndrome (CRS) ಚಿಕಿತ್ಸೆಗೆ ಬಳಸಲಾಗುತ್ತದೆ.
ಕೊರೊನಾ ರೋಗಿಗಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಮಟ್ಟದಿಂದ ಗಂಭೀರವಾದ ARDS (ಅಕ್ಯುಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್) ಸಮಸ್ಯೆ ಇರುವವರಲ್ಲಿ ಸಿಆರ್ ಎಸ್ ಕಂಡುಬರುತ್ತದೆ. ಕೊರೊನಾದ ಸಾಮಾನ್ಯದಿಂದ ಗಂಭೀರವಾದ ಸಮಸ್ಯೆಗೆ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಜೈವಿಕ ಥೆರಪಿ Itolizumab.
2013ರಲ್ಲಿ ALZUMAb ಹೆಸರಿನಲ್ಲಿ ಔಷಧ ಬಿಡುಗಡೆ
2013ನೇ ಇಸವಿಯಲ್ಲಿ ಗಂಭೀರವಾದ ಪ್ಲೇಕ್ ಸೋರಿಯಾಸಿಸ್ ಗೆ ಚಿಕಿತ್ಸೆಯಾಗಿ ALZUMAb ಹೆಸರಿನಲ್ಲಿ ಬಯೋಕಾನ್ ಔಷಧ ಬಿಡುಗಡೆ ಮಾಡಿತ್ತು. ಇದೀಗ Itolizumab ಅನ್ನು ಕೊರೊನಾಗೆ ಔಷಧವಾಗಿ ಬಳಸಲಾಗುತ್ತಿದೆ ಎಂದು ಹೇಳಲಾಗಿದೆ. ಬೆಂಗಳೂರಿನ ಬಯೋಕಾನ್ ಪಾರ್ಕ್ ನಲ್ಲಿ ಇಂಟ್ರಾವೆನಸ್ ಇಂಜೆಕ್ಷನ್ ಆಗಿ Itolizumabಯನ್ನು ಉತ್ಪಾದಿಸಲಾಗುತ್ತದೆ. SARS- CoV-2 ವೈರಾಣು ರೋಗನಿರೋಧಕ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಸೈಟೋಕೈನ್ಸ್ ಉತ್ಪಾದನೆ ಆಗಿದೆ, ಶ್ವಾಸಕೋಶ ಮತ್ತಿತರ ಅಂಗಗಳಿಗೆ ಹಾನಿ ಆಗುತ್ತದೆ. ಇನ್ನೂ ಪರಿಸ್ಥಿತಿ ವಿಷಮ ಆದಲ್ಲಿ ಬಹು ಅಂಗ ವೈಫಲ್ಯವಾಗಿ ಸಾವಿಗೆ ಕಾರಣ ಆಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮುಂಬೈ ಮತ್ತು ನವದೆಹಲಿಯಲ್ಲಿ ಕ್ಲಿನಿಕಲ್ ಟ್ರಯಲ್
ಮುಂಬೈ ಮತ್ತು ನವದೆಹಲಿಯಲ್ಲಿ Itolizumab ಕ್ಲಿನಿಕಲ್ ಟ್ರಯಲ್ ಅನ್ನು ಹಲವು ಕಡೆ ಮಾಡಲಾಗಿದೆ. ಕೊರೊನಾ ರೋಗಿಗಳಿಗೆ ಸಂಭವಿಸುವ ಸಾಮಾನ್ಯ ಸ್ವರೂಪದಿಂದ ಗಂಭೀರ ಸ್ಥಿತಿಯ ತನಕ ಸಿಆರ್ ಎಸ್ ಅನ್ನು Itolizumab ತಡೆಗಟ್ಟುತ್ತದೆ. ಇವೆಲ್ಲವನ್ನೂ ಗಮನಿಸಿ ಡಿಸಿಜಿಐ ಒಪ್ಪಿಗೆ ಸೂಚಿಸಿದೆ. ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಜೈವಿಕದಿಂದ ನಮ್ಮ ದೇಶದಲ್ಲಿ ಜೀವ ಉಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂಬ ನಂಬಿಕೆ ಇದೆ. Itolizumab ಮೂಲಕ ಚಿಕಿತ್ಸೆ ನೀಡಿದ ರೋಗಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಚೇತರಿಸಿಕೊಂಡಿದ್ದಾರೆ. ಕೊರೊನಾದಿಂದ ಸಂಭವಿದುವ ಸಿಆರ್ ಎಸ್ ಸಮಸ್ಯೆಯ ರೋಗಿಗಳ ಚಿಕಿತ್ಸೆಗೆ ಇದೀಗ ಅನುಮತಿ ಸಿಕ್ಕಿದೆ. ಕೊರೊನಾದಿಂದ ಸಮಸ್ಯೆಯಾಗಿರುವ ಜಗತ್ತಿನ ಇತರ ಭಾಗಗಳಿಗೂ ಒಯ್ಯುತ್ತೇವೆ ಎಂದು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಹೇಳಿದ್ದಾರೆ.
ವಿಶ್ವದ ಬೇರೆ ಭಾಗಗಳಿಗೂ ಔಷಧ ಒಯ್ಯಲಾಗುವುದು
ಕೊರೊನಾ ರೋಗಿಗಳಲ್ಲಿ ಸಾವಿಗೆ ಕಾರಣವಾಗುವುದು ಸೈಟೋಕೈನ್. ಬಯೋಕಾನ್ ನ ಆರ್ ಅಂಡ್ ಡಿ ವಿಭಾಗದವರು ಅತ್ಯಲ್ಪ ಅವಧಿಯಲ್ಲೇ ಈ ಔಷಧ ಕಂಡು ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಈ ಚಿಕಿತ್ಸೆಯಿಂದ ಹೆಚ್ಚೆಚ್ಚು ಜನರು ಪ್ರಯೋಜನ ಪಡೆಯುವಂತಾಗಬೇಕು. ALZUMAbಗೆ ಏಳು ವರ್ಷಗಳ ಸುರಕ್ಷತೆಯ ಯಶಸ್ವಿ ದಾಖಲೆ ಇದೆ. ಅಕ್ಯುಟ್ ಸೋರಿಯಾಸಿಸ್ ಗೆ ಚಿಕಿತ್ಸೆಗಾಗಿ ವೈದ್ಯರು ಇದನ್ನು ಸೂಚಿಸುತ್ತಾ ಬಂದಿದ್ದಾರೆ . ಈಗ ಕೊರೊನಾದಿಂದ ಗಂಭೀರವಾದ ಸಮಸ್ಯೆ ಎದುರಿಸುತ್ತಿರುವ ಹಲವರ ಜೀವ ಉಳಿಸಬಹುದು ಎಂದು ಅವರು ತಿಳಿಸಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications