For Quick Alerts
ALLOW NOTIFICATIONS  
For Daily Alerts

ಬಿಟ್ ಕಾಯಿನ್ ಅಲ್ಪಾವಧಿಯಲ್ಲಿ 1 ಕೋಟಿ ರು. ತಲುಪಬಹುದು ಎನ್ನುತ್ತಿದ್ದಾರೆ ವಿಶ್ಲೇಷಕರು

|

ಒಂದು ಟೋಕನ್ ಬಿಟ್ ಕಾಯಿನ್ ಗುರುವಾರದಂದು $ 23,000 ಮುಟ್ಟಿದೆ. ಬುಧವಾರವಷ್ಟೇ $ 20,000ದ ಮೈಲುಗಲ್ಲನ್ನು ಮೊದಲ ಬಾರಿಗೆ ದಾಟಿತ್ತು. ಜಾಗತಿಕ ಮಟ್ಟದಲ್ಲಿ ಹೆಸರಾದ ಹೂಡಿಕೆದಾರರು, ಸಂಸ್ಥೆಗಳು ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿರುವುದರಿಂದ ಈ ಬೆಳವಣಿಗೆ ಆಗಿದೆ ಎಂದು ತಜ್ಞರು ಹೇಳಿದ್ದಾರೆ.

 

ರುಪಾಯಿ ಲೆಕ್ಕದಲ್ಲಿ ಹೇಳುವುದಾದರೆ, ಬಿಟ್ ಕಾಯಿನ್ ದರವು ಅಲ್ಪಾವಧಿಯಲ್ಲಿ 1 ಕೋಟಿ ರುಪಾಯಿ ತನಕ ತಲುಪಬಹುದು. "ಅಲ್ಪಾವಧಿಯಲ್ಲಿ, 2021ನೇ ಇಸವಿಗೆ ದರವು 50 ಲಕ್ಷದಿಂದ 1 ಕೋಟಿ ರುಪಾಯಿಯಲ್ಲಿ ಇರಲಿದೆ. ಜಾಗತಿಕ ಸಂಸ್ಥೆಗಳ ಬೇಡಿಕೆ ಹಿನ್ನೆಲೆಯಲ್ಲಿ ಬಿಟ್ ಕಾಯಿನ್ ಗಳ ದರ ಹೆಚ್ಚಾಗಬಹುದು," ಎಂದು ಕಾಯಿನ್ ಡಿಸಿಎಕ್ಸ್ ಸಹ ಸಂಸ್ಥಾಪಕ ಹಾಗೂ ಸಿಇಒ ಸುಮಿತ್ ಗುಪ್ತಾ ಹೇಳಿದ್ದಾರೆ.

ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ..

ಮುಂದಿನ ವರ್ಷ ರೀಟೇಲ್ ಮತ್ತು ಸಂಸ್ಥೆಗಳಿಂದ ಭಾರೀ ಬೇಡಿಕೆ ಬಂದು, ಬಿಟ್ ಕಾಯಿನ್ ಪ್ರಾಥಮಿಕ ಹೂಡಿಕೆ ಆಸ್ತಿ ಆಗಲಿದೆ ಎಂದು ಗುಪ್ತಾ ಹೇಳುತ್ತಾರೆ. ಮುಖ್ಯ ವಾಹಿನಿಯಲ್ಲಿ ಬಿಟ್ ಕಾಯಿನ್ ಅನ್ನು ಗುರುತಿಸುತ್ತಿರುವುದು ಹಾಗೂ ಅದರ ಸ್ವೀಕಾರಾರ್ಹತೆ ಕಾರಣಕ್ಕೆ ಮುಂದಿನ ಐದರಿಂದ ಹತ್ತು ವರ್ಷಗಳಲ್ಲಿ ಅದರ ಬೆಲೆ ಒಂದಂಕಿಯ ಕೋಟಿಗಳಲ್ಲಿ ಇರಬಹುದು ಎಂದಿದ್ದಾರೆ.

ಈ ವರ್ಷ ಇಲ್ಲಿಯ ತನಕ ಬಿಟ್ ಕಾಯಿನ್ ಮೌಲ್ಯ 205% ಹೆಚ್ಚಳವಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಬಿಟ್ ಕಾಯಿನ್ ಟಂಕಿಸುವ ಪ್ರಮಾಣ ಅರ್ಧಕ್ಕೆ ಇಳಿದಿತ್ತು. ಅದರ ಕಾರಣಕ್ಕೆ ಪೂರೈಕೆ ಕೂಡ ಕಡಿಮೆ ಆಯಿತು. ಬಿಟ್ ಕಾಯಿನ್ ಮತ್ತು ಒಟ್ಟಾರೆ ಕ್ರಿಪ್ಟೋ ಮಾರ್ಕೆಟ್ ಬಂಡವಾಳ ಭಾರೀ ಏರಿಕೆ ಆಗಿದೆ. ಅದರಲ್ಲೂ ಗೂಳಿ ಓಟ ಆರಂಭ ಆಗುವುದಕ್ಕೆ ಸಾಕ್ಷಿ ಆಗುತ್ತೇವೆ ಎಂದು ಗುಪ್ತಾ ಅಭಿಪ್ರಾಯ ಪಟ್ಟಿದ್ದಾರೆ.

ಕ್ರಿಪ್ಟೋ ಕರೆನ್ಸಿ ಅಂದರೆ, ಡಿಜಿಟಲ್ ಅಥವಾ ವರ್ಚುವಲ್ ಕರೆನ್ಸಿ. ಕ್ರಿಪ್ಟೋಗ್ರಫಿಯಿಂದ ಅದು ಸುರಕ್ಷಿತವಾಗಿರುತ್ತದೆ. ಅದನ್ನು ನಕಲು ಮಾಡುವುದಕ್ಕೆ ಆಗಲ್ಲ ಹಾಗೀ ದುಪ್ಪಟ್ಟು ಖರ್ಚು ಮಾಡಲು ಸಾಧ್ಯವಿಲ್ಲ. ಹಲವು ಕ್ರಿಪ್ಟೋ ಕರೆನ್ಸಿಗಳು ವಿಕೇಂದ್ರೀಕೃತ ನೆಟ್ ವರ್ಕ್ ವ್ಯವಸ್ಥೆ ಹೊಂದಿದ್ದು, ಬ್ಲಾಕ್ ಚೈನ್ ತಂತ್ರಜ್ಞಾನದ ಮೇಲೆ ಆಧಾರವಾಗಿದೆ.

 

ಅಂದಹಾಗೆ ಇವತ್ತಿನ ಲೆಕ್ಕದಲ್ಲಿ (ಡಿಸೆಂಬರ್ 18, 2020) ಒಂದು ಬಿಟ್ ಕಾಯಿನ್ ಮೌಲ್ಯ ಭಾರತದ ರುಪಾಯಿಗಳಲ್ಲಿ 16,82,332.87. ಹೌದು ಸರಿಯಾಗಿಯೇ ಓದಿದ್ದೀರಿ. 16.82 ಲಕ್ಷ ರುಪಾಯಿ.

English summary

Bitcoin May Surge Between Rs 50 Lakh To 1 Crore In Near Terms According To Analysts

Crypto currency may surge between Rs 50 lakh to 1 crore in near terms according experts. Here is an analysis.
Story first published: Friday, December 18, 2020, 9:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X