For Quick Alerts
ALLOW NOTIFICATIONS  
For Daily Alerts

1 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಡಾಲರ್

|

ಸ್ಟಾಕ್ ಮಾರುಕಟ್ಟೆಗಳಲ್ಲಿ ವ್ಯಾಪಾರದಲ್ಲಿ ಹಿನ್ನೆಡೆ ಬಳಿಕ, ಯೂರೋ ಲಾಭಗಳನ್ನು ವಿಸ್ತರಿಸಿದ ಕಾರಣ ಡಾಲರ್ ಮಂಗಳವಾರ ಹೊಸ ಒಂದು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ. ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಡಾಲರ್ ಶೇಕಡಾ 0.3 ರಷ್ಟು ಕುಸಿದು 101.79 ಕ್ಕೆ ತಲುಪಿದೆ. ಇದು ಏಪ್ರಿಲ್ 26 ರಿಂದ ಕಡಿಮೆ ಮಟ್ಟವಾಗಿದೆ.

ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷ ಕ್ರಿಸ್ಟಿನ್ ಲಗಾರ್ಡೆ ಅವರು ಎಂಟು ವರ್ಷಗಳ ಕಾಲ ಯೂರೋ ವಲಯದ ನೂತನ ಬಡ್ಡಿದರ ಸೂಚಿಸಿದ ಬಳಿಕ ಸೋಮವಾರ ಯುರೋ ಲಾಭವನ್ನು ಗಳಿಸಿದೆ.

10 ದಿನದಲ್ಲಿ 5ನೇ ಬಾರಿ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ10 ದಿನದಲ್ಲಿ 5ನೇ ಬಾರಿ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

ಮೂರನೇ ತ್ರೈಮಾಸಿಕದ ಅಂತ್ಯದ ವೇಳೆಗೆ ಬಡ್ಡಿದರಗಳು ಉತ್ತಮ ಪರಿಣಾಮ ಬೀರಳಿದೆ ಎಂದು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷ ಕ್ರಿಸ್ಟಿನ್ ಲಗಾರ್ಡೆ ಹೇಳಿದರು. ಇದಾದ ನಂತರ ವ್ಯಾಪಾರಿಗಳು ವಹಿವಾಟಿಗೆ ಇಳಿದ ಕಾರಣ ಸಿಂಗಲ್ ಕರೆನ್ಸಿಯು ಆರಂಭಿಕ ಲಂಡನ್ ವ್ಯಾಪಾರದಲ್ಲಿ 1.0729 ಡಾಲರ್‌ನಲ್ಲಿ 0.4 ಶೇಕಡಾ ಹೆಚ್ಚಾಗಿದೆ.

 1 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಡಾಲರ್

ಯೂರೋ ಈ ತಿಂಗಳ ಆರಂಭದಲ್ಲಿ 1.0349 ಡಾಲರ್‌ನಲ್ಲಿ ಜನವರಿ 2017 ರ ಕನಿಷ್ಠಕ್ಕೆ ಕುಸಿಯಿತು. ಆದರೆ ಏಳು ವ್ಯಾಪಾರದ ಅವಧಿಗಳಲ್ಲಿ ಮತ್ತೆ ಚೇತರಿಕೆ ಕಂಡಿತು. ಜನವರಿ 2017 ರ ಕನಿಷ್ಠ ಪ್ರಮಾಣಕ್ಕೆ ಕುಸಿದಿದ್ದ ಯೂರೋ ಚೇತರಿಸಿಕೊಂಡು ಶೇಕಡ 3.6ರಷ್ಟು ಏರಿದೆ.

ಆಸ್ಟ್ರಲಿಯಾದ ಡಾಲರ್ ಶೇಕಡಾ 0.41 ರಷ್ಟು ಕುಸಿದು 0.70815 ಡಾಲರ್‌ಗೆ ತಲುಪಿದೆ. ಆದರೆ ನ್ಯೂಜಿಲೆಂಡ್‌ನ kiwi 0.46 ರಷ್ಟು ದುರ್ಬಲವಾಗಿ 0.6438 ಡಾಲರ್‌ಗೆ ತಲುಪಿದೆ. ನ್ಯೂಜಿಲೆಂಡ್‌ನ ರಿಸರ್ವ್ ಬ್ಯಾಂಕ್ ಪ್ರಮುಖ ದರವನ್ನು ಅರ್ಧದಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ ಈ ಬೆಳವಣಿಗೆ ಕಂಡು ಬಂದಿದೆ. ಯುಎಸ್‌ ಸ್ಟಾಕ್ ಫ್ಯೂಚರ್‌ಗಳು ಶೇಕಡಾ 2 ಕ್ಕಿಂತ ಹೆಚ್ಚು ಕುಸಿತ ಕಂಡಿದೆ.

English summary

Bruised Dollar Hits Fresh 1 Month Low

Against a basket of its rivals, the dollar fell 0.3 per cent to 101.79, its lowest level since April 26
Story first published: Tuesday, May 24, 2022, 20:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X