For Quick Alerts
ALLOW NOTIFICATIONS  
For Daily Alerts

ಬಿಎಸ್ ಎನ್ ಎಲ್ ನಿಂದ ಉಚಿತ ಬ್ರಾಡ್ ಬ್ಯಾಂಡ್ ಸೇವೆ; ಏನಿದು ಹೊಸ ಸ್ಕೀಮು?

|

ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಅದರ ಲ್ಯಾಂಡ್ ಲೈನ್ ಗ್ರಾಹಕರಿಗೆ ಮತ್ತು ಹೊಸ ಗ್ರಾಹಕರಿಗೆ 'ವರ್ಕ್ ಫ್ರಮ್ ಹೋಮ್'ಗೆ ಬೆಂಬಲ ನೀಡಲು ಉಚಿತ ಬ್ರಾಡ್ ಬ್ಯಾಂಡ್ ಸೇವೆಯನ್ನು ಶುಕ್ರವಾರ ಘೋಷಣೆ ಮಾಡಿದೆ. ಕೊರೊನಾ ವೈರಾಣು ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ ಬಹುತೇಕ ಕಂಪೆನಿಗಳು ಸಿಬ್ಬಂದಿಗೆ 'ವರ್ಕ್ ಫ್ರಮ್ ಹೋಮ್'ಗೆ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಬಿಎಸ್ ಎನ್ ಎಲ್ ಘೋಷಣೆ ಮಹತ್ವದ್ದಾಗಿದೆ.

ಹೊಸ ಗ್ರಾಹಕರು ಕಾಪರ್ ಕೇಬಲ್ ಆಧಾರಿತ ಸಂಪರ್ಕವನ್ನು ಪಡೆದುಕೊಂಡಲ್ಲಿ ಅದಕ್ಕೆ ಇನ್ ಸ್ಟಲೇಷನ್ ಶುಲ್ಕ ಕೂಡ ಪಾವತಿಸುವ ಅಗತ್ಯ ಇಲ್ಲ. ಆದರೆ ಈ ಸೇವೆ ಪಡೆಯಲು ಮೋಡೆಮ್ ಖರೀದಿಸಬೇಕಾಗುತ್ತದೆ ಎಂದು ಬಿಎಸ್ ಎನ್ ಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

"ದೇಶದಾದ್ಯಂತ ಇರುವ ಎಲ್ಲ ನಾಗರಿಕರಿಗೂ ಒಂದು ತಿಂಗಳ ಕಾಲ ಉಚಿತ ಬ್ರಾಡ್ ಬ್ಯಾಂಡ್ ಸೇವೆ ಒದಗಿಸಲಾಗುವುದು. ಯಾರು ಲ್ಯಾಂಡ್ ಲೈನ್ ಹೊಂದಿರುತ್ತಾರೋ ಅಂಥವರು ಈ ಸೇವೆ ಪಡೆಯಬಹುದು. ಆ ಮೂಲಕ ವರ್ಕ್ ಫ್ರಮ್ ಹೋಮ್ ಗೆ ಈ ಸೇವೆ ಬಳಸಬಹುದು ಅಥವಾ ಮನೆಯಿಂದ ಹೊರಹೋಗುವ ಅಗತ್ಯ ಕಡಿಮೆ ಮಾಡಿಕೊಂಡು, ಇತರರಿಗೆ ಮಾಹಿತಿ ದೊರೆಯುವಂತೆ ಮಾಡಲು ಸಹ ಬಳಸಬಹುದು" ಎಂದು ಬಿಎಸ್ ಎನ್ ಎಲ್ ನಿರ್ದೇಶಕ (ಸಿಎಫ್ ಎ) ವಿವೇಕ್ ಬನ್ಜಲ್ ತಿಳಿಸಿದ್ದಾರೆ.

ಬಿಎಸ್ ಎನ್ ಎಲ್ ನಿಂದ ಉಚಿತ ಬ್ರಾಡ್ ಬ್ಯಾಂಡ್ ಸೇವೆ; ಏನಿದು ಸ್ಕೀಮು?

ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿ, ಹೊಸ ಗ್ರಾಹಕರಿಗೂ ಈ ಅನುಕೂಲ ದೊರೆಯಲಿದೆ. ಒಂದು ತಿಂಗಳ ನಂತರ ಹಣ ಪಾವತಿಸಬೇಕಾಗುತ್ತದೆ. ಆಪ್ಟಿಕಲ್ ಫೈಬರ್ ಕನೆಕ್ಟಿವಿಟಿಯನ್ನು ಆರಿಸಿಕೊಂಡರೆ ಇನ್ ಸ್ಟಲೇಷನ್ ಶುಲ್ಕ ತಗುಲುತ್ತದೆ. ಎಂದಿದ್ದಾರೆ.

ಬಿಎಸ್ ಎನ್ ಎಲ್ ಗ್ರಾಹಕರು ಫೋನ್ ಮೂಲಕ ಕೂಡ ಸಂಪರ್ಕಕ್ಕೆ ಅರ್ಜಿ ಹಾಕಬಹುದು. "ಇಡೀ ಪ್ರಕ್ರಿಯೆಯನ್ನು ಕಾಗದರಹಿತವಾಗಿ ಮಾಡಿದ್ದೇವೆ. ಕಾಗದರಹಿತ ಮತ್ತು ಗ್ರಾಹಕ ಸೇವಾ ಕೇಂದ್ರಕ್ಕೂ ಬರುವ ಅಗತ್ಯ ಇಲ್ಲದೆ ಬ್ರಾಡ್ ಬ್ಯಾಂಡ್ ಸೇವೆ ಪಡೆಯಬಹುದು" ಎಂದು ಬನ್ಜಲ್ ತಿಳಿಸಿದ್ದಾರೆ.

English summary

BSNL Announced One Month Free Broadband Service

BSNL announced one month free broadband service on Friday. Here is the complete details of the scheme.
Story first published: Friday, March 20, 2020, 21:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X