For Quick Alerts
ALLOW NOTIFICATIONS  
For Daily Alerts

ಬಜೆಟ್ 2021: ಎಚ್ ಡಿಎಫ್ ಸಿ ಸೆಕ್ಯೂರಿಟೀಸ್ ನಿಂದ ಐದು ಖರೀದಿ ಆಯ್ಕೆ

By ಅನಿಲ್ ಆಚಾರ್
|

ಕೇಂದ್ರ ಬಜೆಟ್ 2021ಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಳಿತ ಕಂಡುಬರುತ್ತಿದೆ. ಭಾರತದ VIX ಸೂಚ್ಯಂಕವು ಹತ್ತಿರಹತ್ತಿರ 4% ಏರಿಕೆ ಕಂಡು, ಸೋಮವಾರ 23.25ರಲ್ಲಿ ಇತ್ತು. ಸೆನ್ಸೆಕ್ಸ್ 500 ಪಾಯಿಂಟ್ ಗೂ ಹೆಚ್ಚು ಕುಸಿಯಿತು. ಈ ನಷ್ಟಕ್ಕೆ ಅತಿ ಮುಖ್ಯ ಕಾರಣ ಆಗಿದ್ದು ಐ.ಟಿ. ಹಾಗೂ ಎಫ್ ಎಂಸಿಜಿ ವಲಯದ ಷೇರುಗಳು.

ಇನ್ನು ಎನ್ ಎಸ್ ಇ ನಿಫ್ಟಿ ಸೂಚ್ಯಂಕವು 133 ಪಾಯಿಂಟ್ ಇಳಿದು, 14,239 ಪಾಯಿಂಟ್ ನಲ್ಲಿತ್ತು. ಪ್ರಮುಖವಾಗಿ ಇಳಿಕೆ ಕಂಡಿದ್ದ ಷೇರುಗಳಲ್ಲೇ ಅತಿ ದೊಡ್ಡ ಕುಸಿತವಾಗಿದ್ದು ರಿಲಯನ್ಸ್ ಇಂಡಸ್ಟ್ರೀಸ್. ಬಿಎಸ್ ಇಯಲ್ಲಿ ರಿಲಯನ್ಸ್ ಷೇರು 4.96% ಇಳಿದು, ರು. 1948ರಲ್ಲಿ ವಹಿವಾಟು ನಡೆಸಿತು. ಅದಕ್ಕೂ ಸೋಮವಾರ ಆರಂಭದಲ್ಲಿ 5.34% ಇಳಿಕೆ ಕಂಡು, ರು. 1940.15ರಲ್ಲಿ ಇತ್ತು.

ಬಜೆಟ್‌ 2021: ಎಲೆಕ್ಟ್ರಾನಿಕ್ ಉಪಕರಣಗಳ ಮೇಲಿನ ಆಮದು ಸುಂಕ ಹೆಚ್ಚಳ?ಬಜೆಟ್‌ 2021: ಎಲೆಕ್ಟ್ರಾನಿಕ್ ಉಪಕರಣಗಳ ಮೇಲಿನ ಆಮದು ಸುಂಕ ಹೆಚ್ಚಳ?

ಗಣರಾಜ್ಯೋತ್ಸವ ದಿನದ ರಜಾ ಕಾರಣಕ್ಕೆ ಈ ವಾರ ಅತ್ಯಂತ ಕಡಿಮೆ ಅವಧಿಗೆ ಷೇರು ಮಾರುಕಟ್ಟೆ ಕಾರ್ಯ ನಿರ್ವಹಿಸುತ್ತದೆ. ಇದರ ಜತೆಗೆ ತಿಂಗಳ ಡೆರಿವೆಟಿವ್ಸ್ ಅವಧಿ ಮುಕ್ತಾಯ ಹಾಗೂ ಕೇಂದ್ರ ಬಜೆಟ್ ಮುಂದಿರುವ ಕಾರಣಕ್ಕೆ ಏರಿಳಿತ ಹೆಚ್ಚಿರುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಬಜೆಟ್ 2021: ಎಚ್ ಡಿಎಫ್ ಸಿ ಸೆಕ್ಯೂರಿಟೀಸ್ ನಿಂದ ಐದು ಖರೀದಿ ಆಯ್ಕೆ

ಫೆಬ್ರವರಿ 1ನೇ ತಾರೀಕಿನಂದು ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದು, ಎಚ್ ಡಿಎಫ್ ಸಿ ಸೆಕ್ಯೂರಿಟೀಸ್ ನಿಂದ ಬಜೆಟ್ ಪೂರ್ವವಾಗಿ ಐದು ಷೇರುಗಳನ್ನು ಖರೀದಿಗೆ ಆಯ್ಕೆ ಮಾಡಲಾಗಿದೆ. ಅವುಗಳ ವಿವರ ಹೀಗಿದೆ.

1. ಭಾರತ್ ಎಲೆಕ್ಟ್ರಾನಿಕ್ಸ್ ಲಿ.
ಈಗ ವಹಿವಾಟಾಗುತ್ತಿರುವ ದರಕ್ಕೆ ಷೇರು ಖರೀದಿಸಿ, 122- 124ರ ದರದಲ್ಲಿ ಇನ್ನಷ್ಟು ಷೇರುಗಳನ್ನು ಸೇರಿಸಿಕೊಳ್ಳಬಹುದು. ಇದು ರು. 148 ತಲುಪಬಹುದು ಎಂದು ಹೇಳಲಾಗಿದೆ. ಇದಕ್ಕಾಗಿ ಎರಡು ತ್ರೈಮಾಸಿಕದ ಗುರಿ ಕೂಡ ನೀಡಲಾಗಿದೆ.

2. ಎಸ್ಕಾರ್ಟ್ಸ್ ಲಿ.
ಈಗ ವಹಿವಾಟಾಗುತ್ತಿರುವ ದರದಲ್ಲಿ ಖರೀದಿಸಿ, 11800- 1190ರ ಹಂತದಲ್ಲಿ ಇನ್ನಷ್ಟು ಖರೀದಿ ಮಾಡಬಹುದು. ಗುರಿ ರು. 1457. ಎರಡು ತ್ರೈಮಾಸಿಕದ ಗುರಿ ನೀಡಲಾಗಿದೆ.

3. ಎಚ್ ಸಿಜಿ
ಕೊನೆಯದಾಗಿ ಎಷ್ಟರಲ್ಲಿ ವಹಿವಾಟಾಗುತ್ತಿರುತ್ತದೋ ಅಷ್ಟಕ್ಕೆ ಖರೀದಿ ಮಾಡಿ, 145- 147 ರುಪಾಯಿ ಹಂತದಲ್ಲಿ ಇನ್ನಷ್ಟು ಸೇರಿಸಿಕೊಳ್ಳಬಹುದು. ಗುರಿ 180 ರುಪಾಯಿ. ಸಮಯಾವಧಿ ಎರಡು ತ್ರೈಮಾಸಿಕ ಅಥವಾ ಆರು ತಿಂಗಳು.

4. ಎಚ್ ಪಿಸಿಎಲ್
ಮಾರುಕಟ್ಟೆಯಲ್ಲಿ ಎಷ್ಟರಲ್ಲಿ ವ್ಯವಹಾರ ನಡೆಸುತ್ತಿದೆಯೋ ಅಷ್ಟಕ್ಕೆ ಖರೀದಿಸಿ. ರು. 208- 210ರ ಸಮೀಪ ಇನ್ನಷ್ಟು ಖರೀದಿ ಮಾಡಿ. ಆರು ತಿಂಗಳಲ್ಲಿ ರು. 250 ತಲುಪಬಹುದು.

5. ಜೆ.ಕೆ. ಸಿಮೆಂಟ್ಸ್ ಲಿ.
ಕೊನೆಯದಾಗಿ ಎಷ್ಟರಲ್ಲಿ ವಹಿವಾಟು ನಡೆಸುತ್ತಿದೆಯೋ ಅಷ್ಟಕ್ಕೆ ಖರೀದಿಸಿ, ರು. 1940- 1975ರ ಹಂತದಲ್ಲಿ ಇನ್ನಷ್ಟು ಸೇರ್ಪಡೆ ಮಾಡಿ, ಗುರಿ ರು. 2400.

ಅಂದ ಹಾಗೆ, ಈ ಮೇಲ್ಕಂಡ ಮಾಹಿತಿಯು ಖರೀದಿ ಅಥವಾ ಮಾರಾಟಕ್ಕೆ ಶಿಫಾರಸಲ್ಲ. ಈ ಲೇಖನದ ಆಧಾರದಲ್ಲಿ ಆದ ನಷ್ಟ ಅಥವಾ ಹಾನಿಗೆ ಗ್ರೆನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಆಗಲೀ ಅಥವಾ ಸಹವರ್ತಿ ಸಂಸ್ಥೆಗಳಾಗಲೀ, ಲೇಖಕರಾಗಲೀ ಹೊಣೆಯಲ್ಲ.

English summary

Budget 2021: HDFC Securities 5 Stock Recommendation Ahead Of Budget

Budget 2021: Ahead of budget here is the 5 stock pick from HDFC securities.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X