Budget 2023: ಅಮೃತ ಕಾಲದ ಬಜೆಟ್, ಆಯವ್ಯಯ ಪಟ್ಟಿ ಮಂಡನೆ ಆರಂಭಿಸಿದ ವಿತ್ತ ಸಚಿವೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯನ್ನು ಫೆಬ್ರವರಿ 1ರಂದು ಬೆಳ್ಳಿಗ್ಗೆ 11 ಗಂಟೆಗೆ ಆರಂಭ ಮಾಡಿದ್ದಾರೆ. ಬಜೆಟ್ ಭಾಷಣದ ಆರಂಭದಲ್ಲಿಯೇ ವಿತ್ತ ಸಚಿವೆ ಇದು ಅಮೃತ ಕಾಲದ ಮೊದಲ ಬಜೆಟ್ ಎಂದು ಹೇಳಿದ್ದಾರೆ.

ಭಾರತದ ಆರ್ಥಿಕತೆಯು ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ಉತ್ತಮ ಭವಿಷ್ಯದತ್ತ ನಮ್ಮ ದೇಶದ ಆರ್ಥಿಕತೆಯು ಸಾಗುತ್ತಿದೆ. ಭಾರತವನ್ನು ವಿಶ್ವವು ನೋಡುತ್ತಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಬೆಳವಣಿಗೆನ್ನು ಶೇಕಡ 7 ಎಂದು ಅಂದಾಜು ಮಾಡಲಾಗಿದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.

ಎಲ್ಲ ಪ್ರಮುಖ ಆರ್ಥಿಕತೆಯಲ್ಲಿ ನಮ್ಮ ದೇಶದ ಆರ್ಥಿಕತೆಯು ಕೂಡ ಪ್ರಮುಖ ಆರ್ಥಿಕತೆಯಾಗಿದೆ. ನಮ್ಮ ಬೆಳವಣಿಗೆ ದರವು ಪ್ರಸ್ತುತ ಅಧಿಕವಾಗಿದೆ. ಕೋವಿಡ್‌ನಿಂದಾಗಿ ಜಾಗತಿಕವಾಗಿ ಹಿಂಜರಿತ ಮತ್ತು ಯುದ್ಧಗಳ ನಡುವೆಯೂ ನಮ್ಮ ಆರ್ಥಿಕತೆಯು ಪ್ರಮುಖ ಆರ್ಥಿಕತೆಯಾಗಿ ಮುಂದುವರಿದಿದೆ ಎಂದು ಕೂಡಾ ವಿತ್ತ ಸಚಿವೆ ವಿವರಿಸಿದ್ದಾರೆ.

ಕಳೆದ 9 ವರ್ಷದಲ್ಲಿ ನಮ್ಮ ಆರ್ಥಿಕತೆಯು ಏರಿಕೆಯಾಗಿದೆ. ವಿಶ್ವದಲ್ಲೇ 5ನೇ ಅತೀ ದೊಡ್ಡ ಆರ್ಥಿಕತೆ ಭಾರತದ್ದಾಗಿದೆ. ನಾವು ಎಸ್‌ಡಿಜಿ ವಿಚಾರದಲ್ಲಿ ಪ್ರಮುಖವಾದ ಬೆಳವಣಿಗೆಯನ್ನು ಕಂಡಿದ್ದೇವೆ. ಎಲ್ಲ ಅಭಿವೃದ್ಧಿ ಯೋಜನೆಗಳನ್ನು ನಾವು ಸರಿಯಾದ ರೀತಿಯಲ್ಲಿ ಜಾರಿ ಮಾಡುತ್ತಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+