For Quick Alerts
ALLOW NOTIFICATIONS  
For Daily Alerts

Budget 2023 for Middle Class ನಾನೂ ಮಧ್ಯಮ ವರ್ಗಕ್ಕೆ ಸೇರಿದವಳು, ಒತ್ತಡ ಅರ್ಥವಾಗುತ್ತೆ: ನಿರ್ಮಲಾ ಸೀತಾರಾಮನ್

|

ನಾನು ಕೂಡಾ ಮಧ್ಯಮ ವರ್ಗಕ್ಕೆ ಸೇರಿದವಳು, ನನಗೆ ಮಧ್ಯಮ ವರ್ಗದ ಜನರಲ್ಲಿ ಇರುವ ಒತ್ತಡ ಅರ್ಥವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆರ್‌ಆರ್‌ಎಸ್‌ನ ಪಂಚಜನ್ಯ ಮ್ಯಾಗಜೀನ್‌ನ ಕಾರ್ಯಕ್ರಮದಲ್ಲಿ ಮಾತನಾಡಿ ಕೇಂದ್ರ ವಿತ್ತ ಸಚಿವೆ ತಾನು ಮಧ್ಯಮ ವರ್ಗದವಳು ಎಂದು ಹೇಳಿಕೊಂಡಿದ್ದಾರೆ.

ಮಧ್ಯಮ ವರ್ಗದ ಮೇಲೆ ಬಿಜೆಪಿ ಸರ್ಕಾರ ಯಾವುದೇ ಹೆಚ್ಚುವರಿ ತೆರಿಗೆಯನ್ನು ವಿಧಿಸಿಲ್ಲ ಎಂದು ಕೂಡಾ ಈ ಸಂದರ್ಭದಲ್ಲಿ ಸೀತಾರಾಮನ್ ತಿಳಿಸಿದ್ದಾರೆ. ಫೆಬ್ರವರಿ ಒಂದರಂದು ಕೇಂದ್ರ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಮಧ್ಯಮ ವರ್ಗವು ತೆರಿಗೆ ವಿನಾಯಿತಿ ಹೆಚ್ಚಳ ಮೊದಲಾದ ತೆರಿಗೆ ಸಂಬಂಧಿತ ಬೇಡಿಕೆಯನ್ನು, ನಿರೀಕ್ಷೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸಚಿವೆ ನೀಡಿದ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

Union Budget 2023: ಕೇಂದ್ರ ಬಜೆಟ್‌ ಹಿಂದಿರುವ ಪ್ರಮುಖ ವ್ಯಕ್ತಿಗಳಿವರುUnion Budget 2023: ಕೇಂದ್ರ ಬಜೆಟ್‌ ಹಿಂದಿರುವ ಪ್ರಮುಖ ವ್ಯಕ್ತಿಗಳಿವರು

"ನಾನು ಕೂಡಾ ಮಧ್ಯಮ ವರ್ಗಕ್ಕೆ ಸೇರಿದವಳು. ಹಾಗಿರುವಾಗ ನಾನು ಮಧ್ಯಮ ವರ್ಗದ ಮೇಲೆ ಎಂತಹ ಒತ್ತಡ ಇದೆ ಎಂಬುವುದನ್ನು ತಿಳಿದಿದ್ದೇನೆ. ನಾನು ಮಧ್ಯಮ ವರ್ಗಕ್ಕೆ ಸೇರಿದವಳಾಗಿ ಗುರುತಿಸಿಕೊಳ್ಳುತ್ತೇನೆ, ಆದ್ದರಿಂದಾಗಿ ನನಗೆ ಕಷ್ಟ ತಿಳಿದಿದೆ," ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.

 ನಾನೂ ಮಧ್ಯಮ ವರ್ಗದವಳು, ಒತ್ತಡ ಅರ್ಥವಾಗುತ್ತೆ: ನಿರ್ಮಲಾ ಸೀತಾರಾಮನ್

"ಮಧ್ಯಮ ವರ್ಗದ ಮೇಲೆ ಅಧಿಕ ತೆರಿಗೆ ವಿಧಿಸಿಲ್ಲ"

5 ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯವನ್ನು ಹೊಂದಿರುವವರಿಗೆ ಯಾವುದೇ ಆದಾಯ ತೆರಿಗೆ ಇಲ್ಲ. ಅವರಿಗೆ ಆದಾಯ ತೆರಿಗೆ ವಿನಾಯಿತಿ ಲಭ್ಯವಾಗುತ್ತದೆ. ಮಧ್ಯಮ ವರ್ಗದ ಮೇಲೆ ಹೊಸದಾಗಿ ಯಾವುದೇ ತೆರಿಗೆಯನ್ನು ವಿಧಿಸಲಾಗಿಲ್ಲ ಎಂದು ಕೂಡಾ ಉಲ್ಲೇಖಿಸಿದ್ದಾರೆ. ಮೆಟ್ರೋ ರೈಲು ಸಂಪರ್ಕವನ್ನು 27 ನಗರಗಳಲ್ಲಿ ವಿಸ್ತರಿಸಲು, 100 ಸ್ಮಾರ್ಟ್‌ ಸಿಟಿಯನ್ನು ಆರಂಭಿಸಲು ಕ್ರಮವನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಈ ವೇಳೆಯೇ ವಿತ್ತ ಸಚಿವೆ ಹೇಳಿದ್ದಾರೆ.

Budget 2023 Date and Time: ಕೇಂದ್ರ ಬಜೆಟ್ ಸಮಯ, ದಿನಾಂಕ, ಇಲ್ಲಿದೆ ವಿವರBudget 2023 Date and Time: ಕೇಂದ್ರ ಬಜೆಟ್ ಸಮಯ, ದಿನಾಂಕ, ಇಲ್ಲಿದೆ ವಿವರ

"ಮಧ್ಯಮ ವರ್ಗದ ಜನಸಂಖ್ಯೆಯು ಪ್ರಸ್ತುತ ಹೆಚ್ಚಳವಾಗುತ್ತಿದೆ. ಈ ಕಾರಣದಿಂದಾಗಿ ಸರ್ಕಾರವು ಮಧ್ಯಮ ವರ್ಗಕ್ಕಾಗಿ ಹೆಚ್ಚಿನ ಸಹಾಯವನ್ನು ಮಾಡಲಿದೆ. ನಾನು ಸುಲಭವಾಗಿ ಮಧ್ಯಮ ವರ್ಗದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬಲ್ಲೆ. ಸರ್ಕಾರವು ಮಧ್ಯಮ ವರ್ಗಕ್ಕಾಗಿ ಹಲವಾರು ಕಾರ್ಯಗಳನ್ನು ಮಾಡಿದೆ, ಮುಂದೆಯೂ ಕೂಡಾ ಮಧ್ಯಮ ವರ್ಗದ ಪ್ರಯೋಜನಕ್ಕಾಗಿ ಸರ್ಕಾರ ಕ್ರಮಕೈಗೊಳ್ಳುತ್ತದೆ," ಎಂದು ತಿಳಿಸಿದ್ದಾರೆ.

ರೈತರು ಹಾಗೂ ಉಚಿತ ಯೋಜನೆಗಳ ಬಗ್ಗೆಯೂ ಕೇಂದ್ರ ಹಣಕಾಸು ಸಚಿವೆ ಉಲ್ಲೇಖಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರೈತರುಗಳ ಆದಾಯವನ್ನು ದುಪ್ಪಟ್ಟು ಮಾಡುವತ್ತ ಹೆಚ್ಚಿನ ಗಮನವನ್ನು ಹರಿಸಿದೆ. ಅದಕ್ಕಾಗಿ ಸರ್ಕಾರವು ಹಲವಾರು ಕ್ರಮಗಳನ್ನು ಕೂಡಾ ಸರ್ಕಾರ ಕೈಗೊಂಡಿದೆ.

ನಾಲ್ಕು R ಗಳನ್ನು ಉಲ್ಲೇಖಿಸಿದ ಸಚಿವೆ

ಕೇಂದ್ರ ಸರ್ಕಾರವು ನಾಲ್ಕು Rಗಳ ಆದಾರದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. Reduce (ಕಡಿತ ಮಾಡು), resolve (ಪರಿಹಾರ), recapitalise (ಮತ್ತೆ ಬಂಡವಾಳ ಪರಿವರ್ತನೆ), reform (ಕ್ರಾಂತಿ, ಬದಲಾವಣೆ) ಕನ್ನೋಟವನ್ನು ಇಟ್ಟುಕೊಂಡು ಸರ್ಕಾರವು ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

English summary

Budget 2023: I belong to middle class, understand their pressures says Nirmala Sitharaman

Budget 2023: Finance Minister Nirmala Sitharaman said she understood the pressures of the middle class as she too belongs to the same strata.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X