For Quick Alerts
ALLOW NOTIFICATIONS  
For Daily Alerts

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಗುಡ್‌ನ್ಯೂಸ್: 3% ಡಿಎ ಹೆಚ್ಚಳ

|

ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಶೇಕಡಾ 3ರಷ್ಟು ಡಿಎ ಭತ್ಯೆ (Dearness Allowance) ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.

ಕಳೆದ ಮೂರು ತಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ತುಟ್ಟಿ ಭತ್ಯೆ (ಡಿಎ) ಯನ್ನು ಶೇ 17 ರಿಂದ 28 ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಕಳೆದ ವರ್ಷ ತಡೆಹಿಡಿದ ನಂತರ ಡಿಎ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ನಿರ್ಧಾರ ಕೈಗೊಂಡಿತ್ತು. ಇದೀಗ ಮತ್ತೊಮ್ಮೆ ಕೇಂದ್ರ ಸರ್ಕಾರ ಡಿಎ ಹೆಚ್ಚಳಕ್ಕೆ ಆದೇಶಿಸಿದೆ. ಈ ಮೂಲಕ 47 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಗುಡ್‌ನ್ಯೂಸ್: 3% ಡಿಎ ಹೆಚ್ಚಳ

ಹೌದು ಈ ಹೆಚ್ಚಳವು ಅಸ್ತಿತ್ವದಲ್ಲಿರುವ ಉದ್ಯೋಗಿಗಳು ಮತ್ತು ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಅನ್ವಯಿಸುತ್ತದೆ. ಸುಮಾರು 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಲಾಭವಾಗಲಿದೆ. ಈ ಹೆಚ್ಚಳದಿಂದ ಕೇಂದ್ರ ಸರ್ಕಾರಕ್ಕೆ ರೂ. 9,488.70 ಕೋಟಿ ಹೆಚ್ಚು ವ್ಯಯವಾಗಲಿದೆ.

ಈ ವರ್ಷ ಜುಲೈನಲ್ಲಿ, ಕೇಂದ್ರ ಸರ್ಕಾರವು ತಮ್ಮ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ದೀರ್ಘಾವಧಿಯ ಬಾಕಿ ಇರುವ ಡಿಎ ಮತ್ತು ಡಿಆರ್ ಹೆಚ್ಚಳವನ್ನು ಅನುಮೋದಿಸಿತ್ತು. ಕಳೆದ ವರ್ಷದಲ್ಲಿ ಕಡಿಮೆ ಆದಾಯ ಸಂಗ್ರಹದಿಂದಾಗಿ, ಸಾಂಕ್ರಾಮಿಕ ರೋಗದಿಂದಾಗಿ, ಕೇಂದ್ರ ಸರ್ಕಾರವು ಡಿಎ ಮತ್ತು ಡಿಆರ್ ಹೆಚ್ಚಳ ಪ್ರಕ್ರಿಯೆಯನ್ನು ನಿಲ್ಲಿಸಬೇಕಾಯಿತು. ಆದ್ದರಿಂದ, ಅಕ್ಟೋಬರ್ 2021 ರಲ್ಲಿ ಈ 3% ಡಿಎ ಹೆಚ್ಚಳ ಘೋಷಣೆಯನ್ನು ಉದ್ಯೋಗಿಗಳು ಸ್ವಾಗತಿಸುತ್ತಾರೆ.

ಇನ್ನು ಜುಲೈ 1ರಿಂದ ಜಾರಿಗೆ ಬರುವ ಕೇಂದ್ರದ ಡಿಎ ಹೆಚ್ಚಳವು, ಹಿಂದಿನ ಅವಧಿಗೆ ಡಿಎ ಪರಿಷ್ಕರಣೆ ಮಾಡದಿದ್ದಲ್ಲಿ ನೌಕರರು ಯಾವುದೇ ಬಾಕಿ ಪಡೆಯುವುದಿಲ್ಲ ಎಂದು ಸೂಚಿಸಿದೆ.

English summary

Bumper Gift: Dearness Allowance Hiked 3% To Central Govt Employees

The Union Cabinet on Thursday approved an additional release of Dearness Allowance (DA) instalment to the Central government employees and Dearness Relief (DR) to the pensioners. The decision will be effective from July 1, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X