For Quick Alerts
ALLOW NOTIFICATIONS  
For Daily Alerts

ರೈಲ್ವೇ ಉದ್ಯೋಗಿಗಳಿಗೆ ಶುಭಸುದ್ದಿ: ಬೋನಸ್ ರೂಪದಲ್ಲಿ 78 ದಿನಗಳ ಸಂಬಳ

|

ಹಬ್ಬದ ಸೀಸನ್‌ಗೂ ಮೊದಲೇ ರೈಲ್ವೇ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಕಳೆದ ವರ್ಷದಂತೆ ರೈಲ್ವೆ ಉದ್ಯೋಗಿಗಳಿಗೆ ದೊಡ್ಡ ಮೊತ್ತದ ಬೋನಸ್ ಸಿಗಲಿದ್ದು, ಈ ವರ್ಷ ಉದ್ಯೋಗಿಗಳು ಪಡೆಯುವ 78 ದಿನದ ಸಂಬಳ ಬೋನಸ್ ರೂಪದಲ್ಲಿ ದೊರಕಲಿದೆ.

ನಿಮ್ಮ ಆಧಾರ್‌ಕಾರ್ಡ್ ಮೊಬೈಲ್ ನಂಬರ್, ವಿಳಾಸ ಅಪ್‌ಡೇಟ್ ಮಾಡುವುದು ಹೇಗೆ?ನಿಮ್ಮ ಆಧಾರ್‌ಕಾರ್ಡ್ ಮೊಬೈಲ್ ನಂಬರ್, ವಿಳಾಸ ಅಪ್‌ಡೇಟ್ ಮಾಡುವುದು ಹೇಗೆ?

2020-21ರ ಆರ್ಥಿಕ ವರ್ಷದಲ್ಲಿ ಆರ್‌ಪಿಎಫ್/ಆರ್‌ಪಿಎಸ್‌ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ ಭಾರತೀಯ ರೈಲ್ವೆಯ ಅರ್ಹ ನಾನ್-ಗೆಜೆಟೆಡ್ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮನಾದ ಪ್ರೊಡಕ್ಟಿವಿಟಿ ಆಧಾರಿತ ಬೋನಸ್ (PLB) ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

"2020-21ನೇ ಹಣಕಾಸು ವರ್ಷಕ್ಕೆ ಅರ್ಹವಾದ ನಾನ್-ಗೆಜೆಟೆಡ್ ರೈಲ್ವೇ ಉದ್ಯೋಗಿಗಳಿಗೆ (RPF/RPSF ಸಿಬ್ಬಂದಿ ಹೊರತುಪಡಿಸಿ) 78 ದಿನಗಳ ವೇತನಕ್ಕೆ ಸಮನಾದ ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ ಅನ್ನು ಸಂಪುಟ ಅನುಮೋದಿಸಿದೆ. ಸುಮಾರು 11.56 ಲಕ್ಷ ನಾನ್-ಗೆಜೆಟೆಡ್ ರೈಲ್ವೇ ಉದ್ಯೋಗಿಗಳು ಈ ನಿರ್ಧಾರದಿಂದ ಪ್ರಯೋಜನ ಪಡೆಯುವ ಸಾಧ್ಯತೆಯಿದೆ'' ಎಂದು ಕೇಂದ್ರ ಸರ್ಕಾರ ಸಂಪುಟ ಸಭೆಯ ನಂತರ ಹೇಳಿದೆ.

ರೈಲ್ವೇ ಉದ್ಯೋಗಿಗಳಿಗೆ ಶುಭಸುದ್ದಿ: ಬೋನಸ್ ರೂಪದಲ್ಲಿ 78 ದಿನಗಳ ಸಂಬಳ

ಸಚಿವ ಸಂಪುಟ ಸಭೆಯ ನಿರ್ಣಯಗಳನ್ನು ಸುದ್ದಿಗೋಷ್ಟಿ ಮೂಲಕ ತಿಳಿಸಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರತಿವರ್ಷದಂತೆ ಈ ಬಾರಿಯೂ ರೈಲ್ವೇಯ ನಾನ್ ಗೆಜೆಟೆಡ್ ಉದ್ಯೋಗಿಗಳಿಗೆ 78 ದಿನದ ಸಂಬಳಕ್ಕೆ ಸಮವಾದ ಬೋನಸ್ ಸಿಗಲಿದೆ ಎಂದು ಮಾಹಿತಿ ನೀಡಿದರು. 2019-20ರಲ್ಲಿ ನೀಡಲಾದ ಬೋನಸ್ 11.58 ಲಕ್ಷ ಜನ ಪಡೆದುಕೊಂಡಿದ್ದರು. ಸರ್ಕಾರ ಬೋನಸ್ ರೂಪದಲ್ಲಿ ಒಟ್ಟು 2,081.68 ಕೋಟಿ ರೂಪಾಯಿ ಮೀಸಲಿರಿತ್ತು. ಈ ವರ್ಷ 1984.73 ಕೋಟಿ ರೂ. ಖರ್ಚು ಮಾಡಲಿದೆ.

ವೇತನ ಲೆಕ್ಕಾಚಾರದ ಪ್ರಕಾರ ತಿಂಗಳಿಗೆ 7,000 ರೂ. ಅರ್ಹ ರೈಲ್ವೆ ಉದ್ಯೋಗಿಗೆ ಪಾವತಿಸಬಹುದಾದ ಗರಿಷ್ಠ ಮೊತ್ತವು 78 ದಿನಗಳವರೆಗೆ 17,951 ರೂ. ಆಗಿದೆ. ಪಿಎಲ್‌ಬಿ ಮೊತ್ತದ 78 ದಿನಗಳ ವೇತನವನ್ನು 2010-11 ರಿಂದ 2019-20ರ ಹಣಕಾಸು ವರ್ಷಗಳಿಗೆ ಪಾವತಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಶೀಘ್ರದಲ್ಲಿಯೇ ಪ್ರಧಾನಿ ಮಂತ್ರಿ ಮಿತ್ರಾ ಯೋಜನೆ
ಶೀಘ್ರದಲ್ಲಿಯೇ ಪಿಎಂ ಮಿತ್ರ (MITRA- Mega Investment Textiles Region and Apparel Park) ಯೋಜನೆಯನ್ನು ಆರಂಭಿಸಲಾಗುವುದು. ಇದರಿಂದ ಟೆಕ್ಸಟೈಲ್ ಮತ್ತು ಗಾರ್ಮೆಂಟ್ ಕ್ಷೇತ್ರಗಳಿಗೆ ದೊಡ್ಡ ಯೋಗದಾನ ಸಿಗಲಿದೆ. ಈ ಯೋಜನೆಯಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸಿಗಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಐದು ವರ್ಷದಲ್ಲಿ 445 ಕೋಟಿ ರೂಪಾಯಿ ಖರ್ಚು ಮಾಡಲಿದೆ.

English summary

Cabinet To Approves Diwali Bonus Equal To 78 Days Wages For Railway Employees

The Union Cabinet on October 6 is likely to announce a bonus for non-gazetted employees of the Indian Railways for the fiscal year 2020-21 which will be equivalent to 78 days
Story first published: Wednesday, October 6, 2021, 21:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X