For Quick Alerts
ALLOW NOTIFICATIONS  
For Daily Alerts

ಕಾಫೀ ಡೇ ಸಿದ್ಧಾರ್ಥ್ ಸಾವಿನಲ್ಲಿ ಐ.ಟಿ. ಇಲಾಖೆಗೆ ಕ್ಲೀನ್ ಚಿಟ್

|

ಕಾಫೀ ಡೇ ಗ್ರೂಪ್ ಮಾಲೀಕರಾಗಿದ್ದ ವಿ.ಜಿ. ಸಿದ್ಧಾರ್ಥ ಆತ್ಮಹತ್ಯೆಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ನಡೆಯುತ್ತಿದ್ದ ತನಿಖೆ ಮುಖ್ಯವಾದ ಅಂಶವನ್ನು ಬಯಲಿಗೆ ಇಟ್ಟಿದೆ. ಮಾಲೀಕರ ಸ್ವಂತ ಸಂಸ್ಥೆಯು ಕೆಫೆ ಕಾಫೀ ಡೇಯಿಂದ 3,535 ಕೋಟಿ ರುಪಾಯಿಯನ್ನು ವಂಚಿಸಿದೆ. ಆದಾಯ ತೆರಿಗೆ ಇಲಾಖೆಯಿಂದ ಸಿದ್ಧಾರ್ಥರನ್ನು ಹಿಂಸಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಐ.ಟಿ. ಇಲಾಖೆಗೆ ಕ್ಲೀನ್ ಚಿಟ್ ನೀಡಲಾಗಿದೆ.

ಈ ತನಿಖೆಯ ನೇತೃತ್ವವನ್ನು ಸಿಬಿಐ ಮಾಜಿ ಡೆಪ್ಯುಟಿ ಇನ್ ಸ್ಪೆಕ್ಟರ್ ಜನರಲ್ ಅಶೋಕ್ ಕುಮಾರ್ ಮಲ್ಹೋತ್ರ ವಹಿಸಿದ್ದರು. "ಸಿದ್ಧಾರ್ಥಗೆ ಸೇರಿದ ಮೈಸೂರು ಅಮಾಲ್ಗಮೇಟೆಡ್ ಕಾಫೀ ಎಸ್ಟೇಟ್ಸ್ ಲಿಮಿಟೆಡ್ (MACEL)ನಿಂದ ಕಾಫೀ ಡೇ ಎಂಟರ್ ಪ್ರೈಸಸ್ (CDEL) ಅಂಗಸಂಸ್ಥೆಗಳಿಗೆ 3,535 ಕೋಟಿ ಸಾಲ ಬಾಕಿ ಇತ್ತು".

ಕಾಫೀ ಡೇ: ಲೆಕ್ಕ ಸಿಗದ 2000 ಕೋಟಿ ಏನಾಯಿತು? ಸ್ಫೋಟಕ ವರದಿ ಮುಖ್ಯಾಂಶಕಾಫೀ ಡೇ: ಲೆಕ್ಕ ಸಿಗದ 2000 ಕೋಟಿ ಏನಾಯಿತು? ಸ್ಫೋಟಕ ವರದಿ ಮುಖ್ಯಾಂಶ

ಆ ಪೈಕಿ 842 ಕೋಟಿ ರುಪಾಯಿ MACEL ಅಂಗಸಂಸ್ಥೆಗಳಿಂದ ಬಾಕಿ ಇತ್ತು ಎಂದು ಮಾರ್ಚ್ 31, 2019ರ ಆಡಿಟ್ ಆದ ಹಣಕಾಸು ಸಮಗ್ರ ವರದಿಯಲ್ಲಿ ಇದೆ. ಆದ್ದರಿಂದ 2,693 ಕೋಟಿ ರುಪಾಯಿ ಬರಬೇಕಾಗಿದ್ದು, ಅದರ ವಸೂಲಿ ಬಗ್ಗೆ ಈಗ ಆಲೋಚಿಸಬೇಕಾಗಿದೆ.

ಕಾಫೀ ಡೇ ಸಿದ್ಧಾರ್ಥ್ ಸಾವಿನಲ್ಲಿ ಐ.ಟಿ. ಇಲಾಖೆಗೆ ಕ್ಲೀನ್ ಚಿಟ್

ಈಗ ಕಾಫೀ ಡೇ ಅಂಗಸಂಸ್ಥೆಗಳಿಂದ MACEL ನೀಡಬೇಕಾಗಿರುವ ಸಾಲ ವಸೂಲಿ ಮಾಡಬೇಕಾಗಿದೆ. ಈ ಸಾಲ ವಸೂಲಿ ಮಾಡುವ ಕಾರಣಕ್ಕೆ ಕಂಪೆನಿಯಿಂದ ಅಧ್ಯಕ್ಷರಿಗೆ ಅಧಿಕಾರ ನೀಡಿ, ಸುಪ್ರೀಂ ಕೋರ್ಟ್ ಅಥವಾ ಹೈ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸುವಂತೆ ಕೇಳಿಕೊಳ್ಳಲಾಗಿದೆ.

English summary

Cafe Coffee Day Investigation: Clean Chit To Income Tax Department

Cafe Coffee Day investigation revealed that, there was no harassment of Income Tax department to V.G. Siddharth.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X