For Quick Alerts
ALLOW NOTIFICATIONS  
For Daily Alerts

ರಕ್ಷಾ ಬಂಧನ ವೇಳೆ ಚೀನಾಕ್ಕೆ ಶಾಕ್ ಕೊಡಲಿರುವ ಭಾರತದ ವ್ಯಾಪಾರಿಗಳು

|

ನವದೆಹಲಿ, ಜುಲೈ 14: ಚೀನಾ ಭಾರತ ಗಡಿ ಉದ್ವಿಗ್ನತೆಯ ನಂತರ ಭಾರತದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸುವ ದೊಡ್ಡ ಕೂಗು ಎದ್ದಿದೆ. ಈಗಾಗಲೇ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿದೆ.

ಇದಕ್ಕೆ ಪೂರಕವಾಗಿ ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಟಿಐ) ಕೂಡ ಕರೆ ಕೊಟ್ಟಿತ್ತು.

ಇದರ ಬೆನ್ನಲ್ಲೇ ಸಿಎಟಿಎ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರಕ್ಷಾ ಬಂಧನ ಹಬ್ಬಕ್ಕೆ ಚೀನಾದಿಂದ ಆಮದಾಗುತ್ತಿದ್ದು ಸುಮಾರು 4000 ಕೋಟಿ ರುಪಾಯಿ ಮೌಲ್ಯದ ರಾಖಿಗಳ ಆಮದನ್ನು ಬಹಿಷ್ಕರಿಸಲು ತೀರ್ಮಾನಿಸಿದೆ. ಈ ಮೂಲಕ ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಬಹುದೊಡ್ಡ ಯಶಸ್ಸು ಸಿಕ್ಕಿದೆ.

ರಕ್ಷಾ ಬಂಧನ ವೇಳೆ ಚೀನಾಕ್ಕೆ ಶಾಕ್ ಕೊಡಲಿರುವ ಭಾರತದ ವ್ಯಾಪಾರಿಗಳು

4000 ಕೋಟಿ ರುಪಾಯಿ ಮೊತ್ತದ ರಾಖಿ ವ್ಯಾಪಾರಕ್ಕೆ ತಡೆಯೊಡ್ಡುವ ಉದ್ದೇಶವನ್ನು ಸಿಎಟಿಐ ಹೊಂದಿದ್ದು, ಯೋಧರಿಗಾಗಿ 5000 ರಾಖಿಗಳನ್ನು ನೀಡಲು ಸಿಎಟಿಐ ಮುಂದಾಗಿದ್ದು, ಅವುಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ತಲುಪಿಸಲಿದೆ ಎಂದು ವರದಿಗಳು ತಿಳಿಸಿವೆ.

English summary

CAIT Wants Hindustani Rakhi; Calls for Boycott of Chinese Products on Raksha Bandhan

All India Traders Union Boycott The China Made Rakhis For Raksha Bandhan Festival
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X