For Quick Alerts
ALLOW NOTIFICATIONS  
For Daily Alerts

ಫ್ಲಿಪ್‌ಕಾರ್ಟ್‌ನಲ್ಲಿ ಕ್ಯಾಷ್ ಆನ್ ಡೆಲಿವರಿಗೆ ಹೆಚ್ಚು ಹಣ ತೆರಬೇಕಾದೀತು..! ಇಲ್ಲಿದೆ ವಿವರ

|

ಬೆಂಗಳೂರು, ಅ. 31: ಭಾರತದಲ್ಲಿ ಎರಡನೇ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಎನಿಸಿರುವ ಫ್ಲಿಪ್‌ಕಾರ್ಟ್ ಇದೀಗ ಕ್ಯಾಷ್ ಆನ್ ಡೆಲಿವರಿ ಆರ್ಡರ್‌ಗಳಿಗೆ ಹೆಚ್ಚುವರಿ ಶುಲ್ಕ ವಿಧಿಸುವುದಾಗಿ ಹೇಳಿದೆ. ಅದು ಪ್ರಕಟಿಸಿರುವ ಪ್ರಕಾರ ಪಾರ್ಸಲ್ ಡೆಲಿವರಿ ವೇಳೆ ಕ್ಯಾಷ್ ವಹಿವಾಟು ಆದರೆ 5 ರೂಪಾಯಿ ಹೆಚ್ಚುವರಿ ಶುಲ್ಕ ನೀಡಬೇಕಾಗುತ್ತದೆ. ನಗದು ವಹಿವಾಟು ಬದಲು ಇ-ಪೇಮೆಂಟ್‌ಗೆ ಉತ್ತೇಜನ ನೀಡಲು ಫ್ಲಿಪ್‌ಕಾರ್ಟ್ ಈ ಕ್ರಮ ಕೈಗೊಂಡಿದೆ.

ಸದ್ಯ, ಫ್ಲಿಪ್‌ಕಾರ್ಟ್‌ನಲ್ಲಿ ನಿರ್ದಿಷ್ಟ ಬೆಲೆ ಶ್ರೇಣಿಗೆ ಪಾರ್ಸಲ್ ಅಥವಾ ಶಿಪಿಂಗ್ ಶುಲ್ಕವನ್ನು ವಿಧಿಸಲಾಗುತ್ತಿದೆ. 500 ರೂಗಿಂತ ಕಡಿಮೆ ಮೌಲ್ಯದ ವಸ್ತುವಿನ ಡೆಲಿವರಿಗೆ ಫ್ಲಿಪ್‌ಕಾರ್ಟ್ 40 ರೂ ಶುಲ್ಕ ವಿಧಿಸುತ್ತದೆ. ಕೆಲ ಸಂದರ್ಭಗಳಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಗಾರರು ಡೆಲಿವರಿ ಫೀ ಅನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯೂ ಇರುತ್ತದೆ. ಆದರೆ, 500 ರೂಗಿಂತ ಹೆಚ್ಚು ಮೌಲ್ಯದ ವಸ್ತುಗಳಾದರೆ ಡೆಲಿವರಿ ಫೀ ಇರುವುದಿಲ್ಲ.

ಗೃಹ ಸಾಲಕ್ಕೆ ಈ ಬ್ಯಾಂಕ್‌ಗಳಲ್ಲಿ ಬಡ್ಡಿದರ ಅಗ್ಗ!ಗೃಹ ಸಾಲಕ್ಕೆ ಈ ಬ್ಯಾಂಕ್‌ಗಳಲ್ಲಿ ಬಡ್ಡಿದರ ಅಗ್ಗ!

ನೀವು ಕೊಳ್ಳುವ ವಸ್ತುವಿನ ಮೌಲ್ಯ 500 ರೂಗಿಂತ ಹೆಚ್ಚೇ ಇದ್ದರೂ ಕ್ಯಾಷ್ ಆನ್ ಡೆಲವರಿಗೆ 5 ರೂ ಹೆಚ್ಚು ತೆರುವುದು ಕಡ್ಡಾಯ. ಕ್ಯಾಷ್ ಆನ್ ಡೆಲಿವರಿ ವೇಳೆ ನೀವು ಗಿಫ್ಟ್ ಕಾರ್ಡ್, ಕೂಪನ್, ಸ್ಟೋರ್ ಕ್ರೆಡಿಟ್ ಇತ್ಯಾದಿ ಟೋಕನ್ ರೂಪದಲ್ಲಿ ಹಣ ಪಾವತಿಸುವಂತಿಲ್ಲ. ನಗದು ಹಣವನ್ನೇ ನೀಡಬೇಕು. ಅಥವಾ ಪ್ರತಿನಿಧಿ ಒಪ್ಪಿಗೆ ಮೇರೆಗೆ ಆನ್‌ಲೈನ್ ಪೇಮೆಂಟ್ ಕೂಡ ಮಾಡಬಹುದು.

ಆದರೆ, 50 ಸಾವಿರ ರೂಗಿಂತ ಹೆಚ್ಚು ಮೌಲ್ಯದ ಆರ್ಡರ್‌ಗೆ ಕ್ಯಾಷ್ ಆನ್ ಡೆಲಿವರಿ ಸೌಲಭ್ಯ ಇರುವುದಿಲ್ಲ.

ಕೊಹ್ಲಿ, ಸಚಿನ್, ವೀರೂ, ಜಡ್ಡು, ಜ್ಯಾಕ್... ಹೋಟೆಲ್ ತೆರೆದ ಕ್ರಿಕೆಟಿಗರಲ್ಲಿ ಸೋತವರೇ ಹೆಚ್ಚಾ?ಕೊಹ್ಲಿ, ಸಚಿನ್, ವೀರೂ, ಜಡ್ಡು, ಜ್ಯಾಕ್... ಹೋಟೆಲ್ ತೆರೆದ ಕ್ರಿಕೆಟಿಗರಲ್ಲಿ ಸೋತವರೇ ಹೆಚ್ಚಾ?

ಫ್ಲಿಪ್‌ಕಾರ್ಟ್ ಪ್ರಕಟಣೆ

"ನಿಮ್ಮ ಆರ್ಡರ್‌ಗಳ ಪೇಮೆಂಟ್ ಆಯ್ಕೆಯಾಗಿ ಕ್ಯಾಷ್ ಆನ್ ಡೆಲಿವರಿ ಅನ್ನು ಆಯ್ದುಕೊಂಡರೆ ನಿರ್ವಹಣೆ ವೆಚ್ಚವಾಗಿ 5 ರೂಪಾಯಿ ಶುಲ್ಕ ತೆರಬೇಕಾಗುತ್ತದೆ. ಆನ್‌ಲೈನ್‌ನಲ್ಲೇ ಪಾವತಿ ಮಾಡಿದರೆ ಈ ಹೆಚ್ಚುವರಿ ಶುಲ್ಕ ಪಾವತಿಸುವುದನ್ನು ತಪ್ಪಿಸಬಹುದು" ಎಂದು ಫ್ಲಿಪ್‌ಕಾರ್ಟ್ ಹೇಳಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಕ್ಯಾಷ್ ಆನ್ ಡೆಲಿವರಿಗೆ ಶುಲ್ಕ..!

ಬಹಳ ಜನರು ಡಿಜಿಟಲ್ ಪೇಮೆಂಟ್ ಬದಲು ಕ್ಯಾಷ್ ಆನ್ ಡೆಲಿವರಿಯನ್ನು ಆಯ್ದುಕೊಳ್ಳುವುದಕ್ಕೆ ಕಾರಣಗಳಿವೆ. ಡಿಜಿಟಲ್ ಪೇಮೆಂಟ್ ಕೆಲವೊಮ್ಮೆ ಕೈಕೊಟ್ಟು ಹಣ ನಮ್ಮ ಖಾತೆಯಿಂದ ಕಡಿತಗೊಂಡು ಬಿಡಬಹುದು. ಕ್ಯಾಷ್ ಆನ್ ಡೆಲಿವರಿ ಆದರೆ ಪಾರ್ಸಲ್ ಬಂದ ವಸ್ತುವನ್ನು ಪರಿಶೀಲಿಸಿ ನಂತರ ಹಣ ನೀಡಬಹುದು. ನಗದು ರೂಪದಲ್ಲಿ ಕೊಡುವುದು ಸುರಕ್ಷಿತವೆನಿಸಬಹುದು. ಈ ಕಾರಣಕ್ಕೆ ಜನರು ಸಿಒಡಿ ಆಯ್ಕೆ ಮಾಡಿಕೊಳ್ಳಬಹುದು.

ಈಗ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಬಹಳ ಬಲವಾಗಿದೆ. ಟ್ರಾನ್ಸಾಕ್ಷನ್ ವಿಫಲವಾಗಿ ನಿಮ್ಮ ಅಕೌಂಟ್‌ನಿಂದ ಹಣ ಕಡಿತಗೊಂಡರೂ ಬಹುತೇಕ ಸಂದರ್ಭದಲ್ಲಿ ಆ ಹಣ ವಾಪಸ್ ಅಕೌಂಟ್‌ಗೆ ಬಂದು ಬೀಳುತ್ತದೆ. ಬಹಳ ಅಪರೂಪಕ್ಕೆ ಮಾತ್ರ ಇದು ಆಗದೇ ಹೋಗಬಹುದು. ಈ ಕಾರಣಕ್ಕೆ ಆನ್‌ಲೈನ್ ಪೇಮೆಂಟ್ ಮಾಡದೇ ಹೋಗುವುದು ಉಚಿತವಲ್ಲ.

ಟಾಪ್ ಇ-ಕಾಮರ್ಸ್ ಕಂಪನಿಗಳು

ಫ್ಲಿಪ್‌ಕಾರ್ಟ್ ಭಾರತದ ಎರಡನೇ ಅತಿ ದೊಡ್ಡ ಇ ಕಾಮರ್ಸ್ ಕಂಪನಿಯಾಗಿದೆ. ಅಮೆರಿಕದ ರೀಟೇಲ್ ಚೈನ್ ಕಂಪನಿ ವಾಲ್ಮಾರ್ಟ್ ಇತ್ತೀಚೆಗೆ ಫ್ಲಿಪ್‌ಕಾರ್ಟ್ ಅನ್ನು ಖರೀದಿಸಿದೆ. ಅಮೆರಿಕದ ಅಮೇಜಾನ್ ಸಂಸ್ಥೆ ಸದ್ಯ ಭಾರತದಲ್ಲಿ ನಂಬರ್ ಒನ್ ಇ ಮಾರುಕಟ್ಟೆ ಸ್ಥಳ ಎನಿಸಿದೆ. ಅಲೆಕ್ಸಾ ಶ್ರೇಯಾಂಕದ ಪ್ರಕಾರ ಭಾರತದ ಅಗ್ರ 10 ಇಕಾಮರ್ಸ್ ಕಂಪನಿಗಳ ಪಟ್ಟಿ ಈ ಕೆಳಕಂಡಂತಿದೆ.

1) ಅಮೇಜಾನ್
2) ಫ್ಲಿಪ್‌ಕಾರ್ಟ್
3) ಇಂಡಿಯಾ ಮಾರ್ಟ್
4) ಮಿನ್‌ತ್ರಾ
5) ಆಲಿ ಎಕ್ಸ್‌ಪ್ರೆಸ್
6) ಎಂಐ ಸ್ಟೋರ್ ಇಂಡಿಯಾ
7) ಸ್ಯಾಮ್ಸುಂಗ್ ಆನ್‌ಲೈನ್ ಶಾಪ್
8) ರಿಲಾಯನ್ಸ್ ಡಿಜಿಟಲ್
9) ಸ್ನ್ಯಾಪ್ ಡೀಲ್
10) ಜಿಯೋ ಮಾರ್ಟ್

English summary

Cash on Delivery To Be Costlier If Bought Online, Flipkart Announces

India's one of the biggest e commerce platforms Flipkart has announced fee for cash on delivery. This is to encourage online payment in the flatform.
Story first published: Monday, October 31, 2022, 16:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X