For Quick Alerts
ALLOW NOTIFICATIONS  
For Daily Alerts

ಸ್ಮಾರ್ಟ್‌ಟಿವಿಯಲ್ಲಿ ಪ್ರಾಬಲ್ಯದ ದುರ್ಬಳಕೆ ತನಿಖೆ, ಗೂಗಲ್ ಮೇಲೆ ಮತ್ತೆ ದಂಡ?

|

ಕಳೆದ ತಿಂಗಳು ಎರಡು ಬಾರಿ ಸಿಸಿಐ ಟೆಕ್ ದೈತ್ಯ ಗೂಗಲ್ ಮೇಲೆ ದಂಡವನ್ನು ಹೇರಿದೆ. ಈಗ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಗೂಗಲ್ ತನ್ನ ಪ್ರಾಬಲ್ಯದ ದುರುಪಯೋಗದ ಆರೋಪದ ಮೇಲಿನ ತನಿಖೆಯ ನಿರ್ಧಾರ ಹೊರಬಿದ್ದ ಬಳಿಕ ಮತ್ತೆ ಗೂಗಲ್ ಮೇಲೆ ದಂಡ ಬೀಳುವ ಸಾಧ್ಯತೆ ಇದೆ.

ಈಗಾಗಲೇ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಗೂಗಲ್ ತನ್ನ ಪ್ರಾಬಲ್ಯದ ದುರುಪಯೋಗ ಮಾಡುತ್ತಿರುವ ಆರೋಪದ ಬಗ್ಗೆ ತನಿಖೆ ನಡೆದಿದೆ. ಇದರ ತೀರ್ಪು ಶೀಘ್ರವೇ ಹೊರ ಬೀಳಲಿದ್ದು, ಗೂಗಲ್ ಮೇಲೆ ಮತ್ತೆ ಸಿಸಿಐ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಬಹುದು ಎಂಬ ಮಾಹಿತಿ ಲಭ್ಯವಾಗಿದೆ.

ಗೂಗಲ್‌ಗೆ ಮತ್ತೊಮ್ಮೆ ಭಾರೀ ಮೊತ್ತದ ದಂಡ ವಿಧಿಸಿದ ಸಿಸಿಐಗೂಗಲ್‌ಗೆ ಮತ್ತೊಮ್ಮೆ ಭಾರೀ ಮೊತ್ತದ ದಂಡ ವಿಧಿಸಿದ ಸಿಸಿಐ

ಅಕ್ಟೋಬರ್ ಅಂತ್ಯದಲ್ಲಿ, ಸಿಸಿಐ ಗೂಗಲ್ ವಿರುದ್ಧ ಎರಡು ಆದೇಶಗಳನ್ನು ಹೊರಡಿಸಿದ್ದು ಎರಡು ಬಾರಿ ದಂಡವನ್ನು ವಿಧಿಸಿದೆ. ಒಟ್ಟು 2,000 ಕೋಟಿ ರೂಪಾಯಿ ದಂಡವನ್ನು ಗೂಗಲ್‌ ಗೆ ಸಿಸಿಐ ವಿಧಿಸಿದೆ. ಗೂಗಲ್‌ನ ಸ್ಮಾರ್ಟ್ ಟೆಲಿವಿಷನ್ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ ಟಿವಿಯಲ್ಲಿ ಮಾರುಕಟ್ಟೆ ಪ್ರಾಬಲ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಕಳೆದ ವರ್ಷ ಜೂನ್‌ನಲ್ಲಿ ಸಿಸಿಐ ತನಿಖೆಗೆ ಆದೇಶ ನೀಡಿತ್ತು. ಎರಡು ಟ್ರಸ್ಟ್‌ಗಳ ವಕೀಲರು ಸಲ್ಲಿಸಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಐಗೆ ಸಾಕ್ಷ್ಯಗಳು ದೊರೆತ ಬಳಿಕ ದಂಡವನ್ನು ಹಾಕಲಾಗಿದೆ.

ಸ್ಮಾರ್ಟ್‌ಟಿವಿ ಪ್ರಾಬಲ್ಯದ ದುರ್ಬಳಕೆ, ಗೂಗಲ್ ಮೇಲೆ ಮತ್ತೆ ದಂಡ?

"ಗೂಗಲ್‌ನೊಂದಿಗೆ ಪರವಾನಗಿ ಒಪ್ಪಂದವನ್ನು ನಮೂದಿಸದ ಯಾವುದೇ ತಯಾರಕರಿಗೆ ಮಾರುಕಟ್ಟೆ ಪ್ರವೇಶವನ್ನು ನಿರಾಕರಿಸುವ ಬಗ್ಗೆ ಮಾಹಿತಿದಾರರು ಮಾಡಿದ ವಿವಿಧ ಆರೋಪಗಳ ಬಗ್ಗೆ ತನಿಖೆಯು ನಡೆಸಲಾಗಿದೆ," ಎಂಬ ಮಾಹಿತಿ ಲಭಿಸಿದೆ. ಆಯೋಗವು ತೀರ್ಪಿನ ಪ್ರಕ್ರಿಯೆಗಾಗಿ ಶೀಘ್ರದಲ್ಲೇ ವರದಿಯನ್ನು ಪ್ರಕಟಿಸಲಿದೆ. ಅಲ್ಲಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಗೂಗಲ್‌ಗೆ ಅವಕಾಶವನ್ನು ನೀಡಲಾಗುತ್ತದೆ.

ಗೂಗಲ್ ಸ್ಮಾರ್ಟ್ ಟಿವಿ ಓಎಸ್ ಪ್ರಾಬಲ್ಯ

ಟೆಕ್ ದೈತ್ಯ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು, ಟೆಲಿವಿಷನ್ ತಯಾರಕರು ಗೂಗಲ್‌ನೊಂದಿಗೆ ಪರವಾನಗಿ ಒಪ್ಪಂದವನ್ನು ಮಾಡಿಕೊಳ್ಳುವ ಅಗತ್ಯವಿದೆ. ಆದರೆ ಅಂತಹ ಪರವಾನಗಿ ಒಪ್ಪಂದ ನಿಯಮ ಉಪಕರಣ ತಯಾರಕರಿಗೆ ನಿಷೇಧಿತವಾಗಿವೆ ಎಂದು ಆರೋಪಿಸಲಾಗಿದೆ. ಗೂಗಲ್‌ನೊಂದಿಗೆ ಪರವಾನಗಿ ಒಪ್ಪಂದಗಳಿಗೆ ಸಹಿ ಮಾಡಿದ ಕಂಪನಿಗಳು ತಯಾರಿಸಿದ ಟಿವಿಗಳಲ್ಲಿ ಪ್ಲೇ ಸ್ಟೋರ್‌ ಮೊದಲೇ ಇನ್‌ಸ್ಟಾಲ್ ಮಾಡಲಾಗಿರುತ್ತದೆ ಎಂದು ಮಾಹಿತಿದಾರರು ಆರೋಪ ಮಾಡಿದ್ದಾರೆ.

ಗೂಗಲ್‌ಗೆ ಭಾರತದ ಪ್ರಾಧಿಕಾರ 1337 ಕೋಟಿ ದಂಡ ಹಾಕಿದ್ದು ಯಾಕೆ?ಗೂಗಲ್‌ಗೆ ಭಾರತದ ಪ್ರಾಧಿಕಾರ 1337 ಕೋಟಿ ದಂಡ ಹಾಕಿದ್ದು ಯಾಕೆ?

ಗೂಗಲ್‌ನೊಂದಿಗೆ ಯಾವುದೇ ಒಪ್ಪಂದಗಳನ್ನು ಮಾಡಿಕೊಳ್ಳದ ಕಂಪನಿಗಳು ತಯಾರಿಸಿದ ಟಿವಿಗಳಿಗೆ ಪ್ಲೇಸ್ಟೋರ್ ಸೇವೆ ಲಭ್ಯವಿರುವುದಿಲ್ಲ. ಇದಲ್ಲದೆ ಸಿಸಿಐ ತನಿಖೆಯು ಆಂಡ್ರಾಯ್ಡ್ ಹೊಂದಾಣಿಕೆ ಬದ್ಧತೆಗಳು (ಎಸಿಸಿ) ಎಂದು ಕರೆಯಲ್ಪಡುವ ಬಗ್ಗೆಯೂ ಸಹ ತನಿಖೆ ನಡೆಸಿದೆ. ಈ ಒಪ್ಪಂದಗಳ ಅಡಿಯಲ್ಲಿ, ಆಂಡ್ರಾಯ್ಡ್ ಆಧಾರಿತವಲ್ಲದ ಯಾವುದೇ ಸ್ಮಾರ್ಟ್ ಟೆಲಿವಿಷನ್ ಅನ್ನು ಉತ್ಪಾದಿಸಲು, ವಿತರಿಸಲು ಅಥವಾ ಮಾರಾಟ ಮಾಡಲು ಟಿವಿ ತಯಾರಕರಿಗೆ ನಿರ್ಬಂಧ ಹೇರಲಾಗಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೂಗಲ್ ವಕ್ತಾರರು, "ಗೂಗಲ್‌ನ ಉಚಿತ ಪರವಾನಗಿ ಮಾದರಿಯಿಂದಾಗಿ ಭಾರತದಲ್ಲಿ ಸ್ಮಾರ್ಟ್ ಟಿವಿ ವಲಯವು ಅಭಿವೃದ್ಧಿ ಹೊಂದುತ್ತಿದೆ. ಕಾನೂನುಗಳ ಪ್ರಕಾರ ನಮ್ಮ ಸ್ಮಾರ್ಟ್ ಟಿವಿ ಪರವಾನಗಿ ವಿಧಾನ ಇವೆ ಎಂದು ನಮಗೆ ವಿಶ್ವಾಸವಿದೆ," ಎಂದು ಹೇಳಿಕೊಂಡಿದ್ದಾರೆ.

ಈ ಹಿಂದೆ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಪ್ರತಿಸ್ಪರ್ಧೆಯನ್ನು ಹತ್ತಿಕ್ಕುತ್ತಿರುವ ಆರೋಪದಲ್ಲಿ 1,337.76 ರೂ ದಂಡ ವಿಧಿಸಲಾಗಿತ್ತು. ಆ ಬಳಿಕ ತನ್ನ ಪ್ಲೇ ಸ್ಟೋರ್ ನೀತಿಯನ್ನು ಗೂಗಲ್ ದುರುಪಯೋಗಿಸಿಕೊಂಡು ಸ್ಪರ್ಧಾತ್ಮಕತೆಯನ್ನು ಹತ್ತಿಕ್ಕುತ್ತಿದೆ ಎಂಬ ಆರೋಪದಲ್ಲಿ 936.44 ಕೋಟಿ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಒಟ್ಟು ಎರಡು ಪ್ರಕರಣದಲ್ಲಿ ಗೂಗಲ್‌ಗೆ ಸಿಸಿಐ 2,000 ಕೋಟಿ ರೂಪಾಯಿ ದಂಡವನ್ನುವಿಧಿಸಿದೆ.

English summary

CCI Decision on Alleged Market Dominance Abuse by Google in Smart TV Soon, Google may Fined Again

CCI probe in market dominance abuse by Google in smart TV complete, decision soon. Google may fined again.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X