For Quick Alerts
ALLOW NOTIFICATIONS  
For Daily Alerts

ಡಿಜಿಟಲ್ ವಹಿವಾಟಿಗಾಗಿ 1300 ಕೋಟಿ ರೂ. ಯೋಜನೆಗೆ ಕೇಂದ್ರ ಅನುಮೋದನೆ

|

ರುಪೇ ಡೆಬಿಟ್ ಕಾರ್ಡ್ ಮತ್ತು ಭೀಮ್ ಯುಪಿಐ ಮೂಲಕ ಸಣ್ಣ ಮೊತ್ತದ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು, ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ರುಪೇ ಡೆಬಿಟ್ ಕಾರ್ಡ್ ಮತ್ತು ಭೀಮ್ ಯುಪಿಐಗಾಗಿ ಹೊಸ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ ಹೇಳಿದ್ದಾರೆ.

ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, "ಯೋಜನೆಗೆ ಸುಮಾರು 1,300 ಕೋಟಿ ರೂಪಾಯಿ ಖರ್ಚು ಮಾಡಲಾಗುವುದು," ಎಂದು ತಿಳಿಸಿದ್ದಾರೆ. "ಸಂಪೂರ್ಣ ಪರಿಸರ ವ್ಯವಸ್ಥೆಯ್ನು ಸ್ಥಾಪನೆ ಮಾಡುವ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ಮಂಜೂರು ಮಾಡಲಾಗಿದೆ. ಈ ಯೋಜನೆಗೆ 6 ವರ್ಷಗಳಲ್ಲಿ 76,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು," ಎಂದು ಅವರು ಹೇಳಿದರು.

 ಯುಪಿಐನಲ್ಲಿ ದಾಖಲೆಯ 7.7 1 ಟ್ರಿಲಿಯನ್ ಮೌಲ್ಯದ 4.21 ಬಿಲಿಯನ್ ವಹಿವಾಟು ಯುಪಿಐನಲ್ಲಿ ದಾಖಲೆಯ 7.7 1 ಟ್ರಿಲಿಯನ್ ಮೌಲ್ಯದ 4.21 ಬಿಲಿಯನ್ ವಹಿವಾಟು

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, "2021-26ನೇ ಸಾಲಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯು 2.5 ಲಕ್ಷ ಎಸ್‌ಸಿ ಮತ್ತು 2 ಲಕ್ಷ ಎಸ್‌ಟಿ ರೈತರು ಸೇರಿದಂತೆ ಸುಮಾರು 22 ಲಕ್ಷ ರೈತರಿಗೆ ಪ್ರಯೋಜನವನ್ನು ನೀಡುತ್ತದೆ," ಎಂದು ತಿಳಿಸಿದರು.

ಡಿಜಿಟಲ್ ವಹಿವಾಟಿಗಾಗಿ 1300 ಕೋಟಿ ರೂ. ಯೋಜನೆಗೆ ಕೇಂದ್ರ ಅನುಮೋದನೆ

ಮತ್ತೊಂದೆಡೆ, ಭಾರತದಲ್ಲಿ ಸೆಮಿಕಂಡಕ್ಟರ್‌ಗಳು ಮತ್ತು ಡಿಸ್‌ಪ್ಲೇ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಮ್‌ನ ಅಭಿವೃದ್ಧಿ ಕಾರ್ಯಕ್ರಮಕ್ಕೆ ಸಂಸತ್‌ ಅನುಮೋದನೆ ನೀಡಿದೆ ಎಂದು ಅನುರಾಗ್ ಠಾಕೂರ್ ಹೇಳಿದರು. ಈ ಬಗ್ಗೆ ವಿವರ ನೀಡಿದ ಅವರು, "ಮೈಕ್ರೋಚಿಪ್‌ಗಳ ಕೊರತೆಯು ಕೈಗಾರಿಕಾ ಉತ್ಪಾದನೆಗೆ ಹಾನಿಯಾಗುವುದರಿಂದ ದೇಶವನ್ನು ಎಲೆಕ್ಟ್ರಾನಿಕ್ಸ್ ಹಬ್ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಸೆಮಿಕಂಡಕ್ಟರ್‌ಗಳಿಗೆ ಉತ್ಪಾದನಾ ಸಂಬಂಧಿತ ಪ್ರೋತ್ಸಾಹ ಯೋಜನೆ (ಪಿಎಲ್‌ಐ) ಅನ್ನು ಸಂಸತ್‌ ಅನುಮೋದನೆ ಮಾಡಿದೆ," ಎಂದರು.

ಫೀಚರ್‌ ಪೋನ್‌ಗಾಗಿ ಡಿಜಿಟಲ್‌ ಪಾವತಿ ವ್ಯವಸ್ಥೆ ಶೀಘ್ರ ಪ್ರಾರಂಭ: RBIಫೀಚರ್‌ ಪೋನ್‌ಗಾಗಿ ಡಿಜಿಟಲ್‌ ಪಾವತಿ ವ್ಯವಸ್ಥೆ ಶೀಘ್ರ ಪ್ರಾರಂಭ: RBI

"ಸೆಮಿಕಂಡಕ್ಟರ್‌ಗಳ ಸಂಪೂರ್ಣ ಪರಿಸರ ವ್ಯವಸ್ಥೆ ಮತ್ತು ಪ್ರದರ್ಶನ ತಯಾರಿಕೆಯನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಮಂಜೂರು ಮಾಡಲಾಗಿದೆ. ಈ ಯೋಜನೆಗಾಗಿ 6 ವರ್ಷಗಳಲ್ಲಿ 76,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು," ಎಂದು ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ದೇಶದಲ್ಲಿ ಅಧಿಕಗೊಳ್ಳುತ್ತಿದೆ ಯುಪಿಐ ವಹಿವಾಟು

ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ ಅಥವಾ ಯುಪಿಐ ಮೂಲಕ ಅಕ್ಟೋಬರ್‌ನಲ್ಲಿ ಸುಮಾರು 4 ಬಿಲಿಯನ್‌ ವಹಿವಾಟುಗಳು ನಡೆದಿದೆ. ಈ ವಹಿವಾಟು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಪ್ರಾರಂಭದಿಂದಲೂ ಈ ಪ್ಲಾಟ್‌ಫಾರ್ಮ್‌ನಲ್ಲಿ ನಡೆದ ವಹಿವಾಟುಗಳ ಪೈಕಿ ಇದು ಗರಿಷ್ಠ ವಹಿವಾಟು ಆಗಿದೆ. ಈ ಹಬ್ಬಗಳ ನಡುವೆ ಈ ವಹಿವಾಟು ದಾಖಲೆಯ ಮಟ್ಟಕ್ಕೆ ಏರಿದೆ. ಅಕ್ಟೋಬರ್‌ನಲ್ಲಿ ಯುಪಿಐನಲ್ಲಿ 7.71 ಟ್ರಿಲಿಯನ್ ಮೌಲ್ಯದ ದಾಖಲೆಯ 4.21 ಬಿಲಿಯನ್ ವಹಿವಾಟು ಮಾಡಲಾಗಿದೆ. ಸೆಪ್ಟೆಂಬರ್‌ನಲ್ಲಿ ಯುಪಿಐನಲ್ಲಿ 650 ಕೋಟಿ ರೂಪಾಯಿ ಮೌಲ್ಯದ 3.65 ಬಿಲಿಯನ್‌ ವಹಿವಾಟು ನಡೆದಿತ್ತು. ಒಂದು ತಿಂಗಳಿನಲ್ಲೇ ಯುಪಿಐ ವಹಿವಾಟಿನಲ್ಲಿ ಶೇಕಡ 15 ರಷ್ಟು ಏರಿಕೆ ಕಂಡು ಬಂದಿದೆ. ಹಾಗೆಯೇ ಯುಪಿಐ ವಹಿವಾಟಿನ ಮೌಲ್ಯವನ್ನು ನೋಡುವುದಾದರೆ ಸೆಪ್ಟೆಂಬರ್‌ಗಿಂತ ಅಕ್ಟೋಬರ್‌ನಲ್ಲಿ ಶೇಕಡ 18.5 ರಷ್ಟು ಏರಿಕೆ ಆಗಿದೆ. ವರ್ಷದಿಂದ ವರ್ಷಕ್ಕೆ ಲೆಕ್ಕ ಹಾಕಲಾಗುವ ಯುಪಿಐನ ವಹಿವಾಟು ಲೆಕ್ಕಾಚಾರದ ಸಂದರ್ಭದಲ್ಲಿ ವಹಿವಾಟು ದ್ವಿಗುಣಗೊಂಡಿರುವುದು ಕಂಡು ಬಂದಿದೆ. ವಹಿವಾಟಿನ ಮೌಲ್ಯವು ಶೇಕಡ ನೂರರಷ್ಟು ಜಿಗಿದಿದೆ.

ಯುಪಿಐ ವಹಿವಾಟು ಹೆಚ್ಚಳಕ್ಕೆ ಅವಕಾಶ ನೀಡಲು ಮುಂದಾದ ಆರ್‌ಬಿಐ

ಇನ್ನು ಆರ್‌ಬಿಐ ಕೂಡಾ ಯುಪಿಐ ವಹಿವಾಟು ಅಧಿಕ ಮಾಡುವ ನಿಟ್ಟಿನಲ್ಲಿ ಗಮನ ಹರಿಸಿದೆ. ಇತ್ತೀಚೆಗೆ ಕೇಂದ್ರ ಬ್ಯಾಂಕ್ ಆರ್‌ಬಿಐ ಫೀಚರ್ ಫೋನ್‌ಗಳಿಗಾಗಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸುತ್ತದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಘೋಷಣೆ ಮಾಡಿದ್ದಾರೆ. ಆರ್‌ಬಿಐ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಆಧಾರಿತ ಪಾವತಿ ವೈಶಿಷ್ಟ್ಯವು ಫೀಚರ್‌ ಫೋನ್‌ಗಳಲ್ಲಿ ಕೂಡಾ ಲಭ್ಯವಾಗುವಂತೆ ಮಾಡಲು ಆರ್‌ಬಿಐ ಸಿದ್ಧವಾಗಿದೆ. ಆರ್‌ಬಿಐ ಈ ಕ್ರಮವು ಮುಂದಿನ ದಿನಗಳಲ್ಲಿ ಇಂಟರ್‌ನೆಟ್‌ ಮುಕ್ತ ಯುಪಿಐ ಪಾವತಿ ವ್ಯವಸ್ಥೆಗೆ ನಾಂದಿ ಹಾಡುವ ಸಾಧ್ಯತೆಯನ್ನು ಹೆಚ್ಚಿಸಿದೆ.

English summary

Centre Approves Scheme Of Rs 1300 Crore For Digital Transactions Through RuPay Debit Card, BHIM UPI

Centre Approves Scheme Of Rs 1300 Crore For Digital Transactions Through RuPay Debit Card, BHIM UPI.
Story first published: Wednesday, December 15, 2021, 20:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X