For Quick Alerts
ALLOW NOTIFICATIONS  
For Daily Alerts

ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ

ಈಗ ಆಧಾರ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ಸಹ ನೀವು ಪರಿಶೀಲಿಸಬಹುದು. ಆಧಾರ್ ಸಂಖ್ಯೆಯ ಬಳಕೆ ಕುರಿತು ಇಲ್ಲಿ ತಿಳಿಯಿರಿ.

|

ಬೆಂಗಳೂರು, ಫೆಬ್ರುವರಿ 05: ದೇಶದ ಎಲ್ಲ ಕ್ಷೇತ್ರಗಳಲ್ಲಿ ಡಿಜಿಟಲ್ ವ್ಯವಸ್ಥೆ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್ ಎಲ್ಲಿರಿಗೂ ಅತ್ಯಗತ್ಯ ಗುರುತಿನ ದಾಖಲೆ ಆಗಿದೆ. ಈಗ ಆಧಾರ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ಸಹ ನೀವು ಪರಿಶೀಲಿಸಬಹುದು.

 

ಅಚ್ಚರಿ ಎನಿಸಿದರೂ ಇದು ಸತ್ಯ. ಬ್ಯಾಂಕಿಂಗ್ ಮತ್ತು ಸರ್ಕಾರಿ ಕಾರ್ಯಕ್ರಮಗಳಿಗೆ ಪ್ರವೇಶ ಸೇರಿದಂತೆ ಎಲ್ಲಾ ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಆಧಾರ್‌ ಕಾರ್ಡ್ ಸಂಖ್ಯೆಯನ್ನು ಎಲ್ಲೆಲ್ಲಿ ಕಾನೂನುಬದ್ಧವಾಗಿ ಕಡ್ಡಾಯಗೊಳಿಸಲಾಗಿದೆಯೋ ಅಲ್ಲಿ ನಿರಾತಂಕವಾಗಿ ಬಳಬಹುದು. ಆಧಾರ್ ಜೊತೆ ಪ್ಯಾನ್ ಕಾರ್ಡ್‌, ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲಾಗಿದೆ. ಇದು ಬ್ಯಾಂಕ್ ಖಾತೆಯಲ್ಲಿನ ಹಣ ತಿಳಿಯಲು ಸಹಾಯ ಮಾಡುತ್ತದೆ.

 

Union Budget 2023: ಕೃಷಿಯಲ್ಲಿ ಡಿಜಿಟಲ್ ಕ್ರಾಂತಿ, ಪಿಎಂ ಕಿಸಾನ್ ಯೋಜನೆಯಡಿ 2.2 ಲಕ್ಷ ಕೋಟಿ ಹಣ ವರ್ಗಾವಣೆUnion Budget 2023: ಕೃಷಿಯಲ್ಲಿ ಡಿಜಿಟಲ್ ಕ್ರಾಂತಿ, ಪಿಎಂ ಕಿಸಾನ್ ಯೋಜನೆಯಡಿ 2.2 ಲಕ್ಷ ಕೋಟಿ ಹಣ ವರ್ಗಾವಣೆ

ಅಷ್ಟೇ ಅಲ್ಲದೇ ವಾಹನಗಳು, ಎಲ್‌ಐಸಿ ಸೇರಿದಂತೆ ಮುಂತಾದ ವಿಮಾ ಯೋಜನೆ, ಪ್ರತಿ ಬ್ಯಾಂಕ್ ಖಾತೆಗಳಗೂ ಸಂಪರ್ಕ ಮಾಡಲಾಗಿದೆ. ಇದರಿಂದ ಆಧಾರ್ ಸಂಖ್ಯೆ ನಮೂದಿಸಿದರೆ ಆ ವ್ಯಕ್ತಿಯ ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಹಾಗೂ ಫೋಟೊ ಸಹ ಕಾಣಿಸುತ್ತದೆ.

ಆಧಾರ್ ನಂಬರ್‌ನಿಂದ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲನೆ ಹೇಗೆ ತಿಳಿಯಿರಿ

ನೀವು ಆಧಾರ್ ಸಂಖ್ಯೆ ಒಂದದ್ದರೆ ಸಾಕು, ಹತ್ತಿರ ಎಟಿಎಂ, ಬ್ಯಾಂಕ್ ಶಾಖೆಗೆ ಹೋಗದೇ ಬ್ಯಾಂಕ್ ಬ್ಯಾಲೇನ್ಸ ತಿಳಿಯಬಹುದು. ನಿಮ್ಮ ನಿಮ್ಮ ಮೊಬೈಲ್‌ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ *99*99*1# ಅನ್ನು ಡಯಲ್ ಮಾಡಿ ನಂತರ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ ಖಾತೆಯಲ್ಲಿನ ಹಣದ ಮಾಹಿತಿ ತಿಳಿದುಕೊಳ್ಳಬಹುದು. ಇಲ್ಲಿ ಒಂದೇ ನಂಬರ್ ಬ್ಯಾಂಕ್ ಖಾತೆಗೂ ಹಾಗೂ ಆಧಾರ್ ಕಾರ್ಡ್‌ಗು ಲಿಂಕ್ ಆಗಿರಬೇಕು.

ಬ್ಯಾಂಕ್ ಖಾತೆಯಲ್ಲಿನ ಬಾಕಿ ಹಣ ಪರಿಶೀಲಿಸುವುದರ ಜೊತೆಗೆ, ಆಧಾರ್ ಕಾರ್ಡ್‌ನ ಬಳಕೆದಾರರು ಹಣ ಸಹ ವರ್ಗಾಯಿಸಲು ಅವಕಾಶ ಇದೆ. ಜೊತೆಗೆ ಪ್ಯಾನ್ ಕಾರ್ಡ್ ಪಡೆಯಲುಬಹುದು.

ಆಧಾರ್ ನಂಬರ್‌ನಿಂದ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲನೆ ಹೇಗೆ ತಿಳಿಯಿರಿ

ಮೊದಲು ಆಧಾರ್ ಸಂಖ್ಯೆ ನಮೂದಿಸಬೇಕು. ನಂತರ ಅಲ್ಲಿ ಪರದೆಯ ಮೇಲೆ ಬ್ಯಾಂಕ್ ಬ್ಯಾಲೆನ್ಸ್‌ನೊಂದಿಗೆ UIDAI ನಿಂದ ನೀವು ಫ್ಲಾಶ್ SMS ಅನ್ನು ಸ್ವೀಕರಿಸುತ್ತೀರಿ. ಬಳಿಕ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ), ನಿಮ್ಮ ಫೋನ್ ಸಂಖ್ಯೆಯನ್ನು ನಿಮ್ಮ ಆಧಾರ್‌ಗೆ ಲಿಂಕ್ ಮಾಡುವುದು, ಮಾಹಿತಿ ನವೀಕರಣ, ಮನೆ ಬಾಗಿಲಿಗೆ ಸೇವೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಮೂಲಗಳು ತಿಳಿಸಿವೆ.

English summary

Check Your Bank Balance Through The Aadhar Card Number, how, Details inside

Check your Bank balance through the Aadhar Card number, how, details inside.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X