For Quick Alerts
ALLOW NOTIFICATIONS  
For Daily Alerts

ಕೊರೊನಾಯಿಂದ ವಿಶ್ವವೇ ಲಾಕ್‌ಡೌನ್ ಆಗಿರುವಾಗ ಕೆಲಸ ಶುರು ಮಾಡಿದ ಚೀನಾ, ಕೈಗಾರಿಕೆಗಳು ಪುನಾರರಂಭ

|

ಕೊರೊನಾವೈರಸ್ ಜಗತ್ತನ್ನೇ ತನ್ನ ರೌದ್ರರೂಪದಿಂದ ತಲ್ಲಣಗೊಳಿಸಿಬಿಟ್ಟಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ಇದರ ಕಾಟಕ್ಕೆ ಸುಸ್ತಾಗಿಬಿಟ್ಟಿವೆ. ಅಮೆರಿಕಾ, ಫ್ರಾನ್ಸ್‌ ರಾಷ್ಟ್ರವೂ ಸಹ ಇದರಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಈ ವೇಳೆ ಕೊರೊನಾವೈರಸ್ ಹರಡಲು ಪ್ರಮುಖ ಕೇಂದ್ರ ಬಿಂದು ಚೀನಾ ಮಾತ್ರ ತನ್ನ ಕಾರ್ಖಾನೆ ಉತ್ಪಾದನೆಯನ್ನು ಪುನಾರಂಭಿಸಿದೆ.

ಹೌದು, ಚೀನಾ ನಿಧಾನಗತಿಯಲ್ಲಿ ಹಳೆಯ ಹಾದಿಗೆ ಮರಳಿದ್ದು ಈಗಾಗಲೇ ಒಂದೊಂದೇ ಕಾರ್ಖಾನೆಗಳ ಉತ್ಪಾದನೆ ಆರಂಭಿಸಿದೆ ಮತ್ತು ಕೆಲವು ವಿಮಾನಗಳನ್ನು ಪುನರಾರಂಭಿಸುವ ಮೂಲಕ ಚೀನಾ ನಿಧಾನವಾಗಿ ತನ್ನ ಸ್ಥಗಿತದಿಂದ ಹೊರಹೊಮ್ಮುತ್ತಿದೆ.

ಏಕಾಏಕಿ ಯೂರೋಪ್, ಅಮೆರಿಕಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಹಾನಿಯುಂಟು ಮಾಡಿರುವ ಕೊರೊನಾವೈರಸ್‌ನಿಂದಾಗಿ ಬಹುತೇಕ ದೇಶಗಳ ಆರ್ಥಿಕತೆಯು ಕುಸಿಯುತ್ತಿದೆ. ಆದರೆ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾದ ಚೀನಾ ಚೇತರಿಕೆಯ ಹಾದಿ ಹಿಡಿದಿದೆ.

ಕೆಲಸಕ್ಕೆ ಮರಳುತ್ತಿರುವ ಚೀನಾ ಉದ್ಯೋಗಿಗಳು
 

ಕೆಲಸಕ್ಕೆ ಮರಳುತ್ತಿರುವ ಚೀನಾ ಉದ್ಯೋಗಿಗಳು

ಚೀನಾದಲ್ಲಿ ಮತ್ತೆ ಸಹಜ ಸ್ಥಿತಿಗೆ ಎಲ್ಲವೂ ಮರಳುತ್ತಿದೆ. ಉದ್ಯೋಗಿಗಳು ಕೆಲಸಕ್ಕೆ ಮರಳುತ್ತಿದ್ದಾರೆ, ಉತ್ಪಾದನಾ ಮಾರ್ಗಗಳು ಮತ್ತೆ ಪ್ರಾರಂಭಿಸುತ್ತಿವೆ ಮತ್ತು ಕೊರೊನಾವೈರಸ್‌ ಮುಖ್ಯ ಕೇಂದ್ರ ವುಹಾನ್‌ನ ಕೂಡ ಶೀಘ್ರದಲ್ಲೇ ತನ್ನ ಲಾಕ್‌ಡೌನ್‌ ಕೊನೆಗೊಳಿಸುತ್ತಿದೆ.

ಚೀನಾದಲ್ಲಿ ಕಾರುಗಳ ಮಾರಾಟವು ಕಳೆದ ತಿಂಗಳು ಸಂಪೂರ್ಣ ತಗ್ಗಿರಬಹುದು ಆದರೆ ಗ್ರಾಹಕರು ಮತ್ತೆ ಶಾಪಿಂಗ್‌ ಮಾಡಲು ವೇದಿಕೆ ಸಿದ್ಧವಾಗಿದೆ ಎಂದು ಆಟೋಮೊಬೈಲ್ ಉದ್ಯಮವು ತಿಳಿಸಿದೆ.

ವಿಮಾನ ಹಾರಾಟವೂ ಮತ್ತೆ ಆರಂಭ

ವಿಮಾನ ಹಾರಾಟವೂ ಮತ್ತೆ ಆರಂಭ

ಚೀನಾ ರಾಷ್ಟ್ರದ ವಿಮಾನಯಾನ ಉದ್ಯಮದಲ್ಲಿ ಕಳೆದ ತಿಂಗಳು ಭಾರೀ ಕುಸಿತವನ್ನು ಎದುರಿಸುತ್ತು. ಇದೀಗ ಮತ್ತೆ ಸಣ್ಣ ಪ್ರಮಾಣದಲ್ಲಿ ವಿಮಾನ ಹಾರಾಟ ಆರಂಭಿಸಿದೆ. ಫ್ಲೈಟ್-ಡಾಟಾ ಅನಾಲಿಟಿಕ್ಸ್ ಸಂಸ್ಥೆ ಒಎಜಿ ಏವಿಯೇಷನ್ ವರ್ಲ್ಡ್‌ವೈಡ್ ಪ್ರಕಾರ, ವಿಮಾನದಲ್ಲಿ ಪ್ರಯಾಣಿಸುವ ಸಂಖ್ಯೆ 2.4% ರಷ್ಟು ಏರಿಕೆಯಾಗಿದ್ದು ಕಳೆದು ಒಂದು ವಾರದಲ್ಲಿ 9.2 ಮಿಲಿಯನ್ ಸೀಟುಗಳಿಗೆ ತಲುಪಿದೆ.

BMW ಕಾರು ಉತ್ಪಾದನೆ ಆರಂಭ

BMW ಕಾರು ಉತ್ಪಾದನೆ ಆರಂಭ

ಫೆಬ್ರವರಿ 17 ರಂದು BMW AGಯ ಶೆನ್ಯಾಂಗ್ ಸ್ಥಾವರಗಳಲ್ಲಿ ಉತ್ಪಾದನೆ ಪುನರಾರಂಭವಾಯಿತು ಮತ್ತು ಚೀನಾದ ಸರ್ಕಾರವು ಬಿಕ್ಕಟ್ಟನ್ನು ನಿರ್ವಹಿಸುತ್ತದೆ ಮತ್ತು ಸಾಂಕ್ರಾಮಿಕ ರೋಗವನ್ನು ಸೋಲಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಜರ್ಮನ್ ಕಾರು ತಯಾರಕ ಸಂಸ್ಥೆ ಹೇಳಿದೆ.

ಫಿಯೆಟ್ ಕ್ರಿಸ್ಲರ್ ಕಾರ್ಯಾರಂಭ
 

ಫಿಯೆಟ್ ಕ್ರಿಸ್ಲರ್ ಕಾರ್ಯಾರಂಭ

ಚೀನಾದಲ್ಲಿ ತನ್ನ ಉತ್ಪಾದನಾ ಕಾರ್ಯಾಚರಣೆಗಳು ಸಂಬಂಧಿತ ಪ್ರಾದೇಶಿಕ ಮತ್ತು ರಾಷ್ಟ್ರೀಯ ಸರ್ಕಾರಗಳ ಅನುಮೋದನೆಯಡಿಯಲ್ಲಿ ಉತ್ಪಾದನೆಯನ್ನು ಪುನರಾರಂಭಿಸಿವೆ ಎಂದು ಫಿಯೆಟ್ ಕಂಪನಿ ತಿಳಿಸಿದೆ. ಗುವಾಂಗ್ ಆಟೋಮೊಬೈಲ್ ಗ್ರೂಪ್‌ನ ಜಂಟಿ ಸಹಭಾಗಿತ್ವದಲ್ಲಿ ಅದರ 90 ಪರ್ಸೆಂಟ್‌ ಕ್ಕಿಂತ ಹೆಚ್ಚು ವಿತರಕರು ಮತ್ತು 95 ಪರ್ಸೆಂಟ್ ಸಿಬ್ಬಂದಿ ಮತ್ತೆ ಆನ್‌ಲೈನ್‌ಗೆ ಬಂದಿದ್ದಾರೆ ಮತ್ತು "ಒಟ್ಟಾರೆ ಉತ್ಪಾದನೆ ಮತ್ತು ವಾಣಿಜ್ಯ ಕಾರ್ಯಾಚರಣೆಗಳು ಕ್ರಮೇಣ ವ್ಯವಹಾರವನ್ನು ಪುನರಾರಂಭಿಸುತ್ತಿವೆ" ಎಂದು ಫಿಯೆಟ್ ಕ್ರಿಸ್ಲರ್ ಹೇಳಿದರು.

ಫೋರ್ಡ್

ಫೋರ್ಡ್

ಅಮೆರಿಕಾ ಕಾರು ತಯಾರಕ ಸಂಸ್ಥೆ, ಫೆಬ್ರವರಿ 10 ರಂದು ತನ್ನ ಚೀನೀ ಸ್ಥಾವರಗಳು ಉತ್ಪಾದನೆಯನ್ನು ಪುನರಾರಂಭಿಸಿವೆ ಮತ್ತು ಹೆಚ್ಚಿಸಿದೆ ಎಂದು ಹೇಳಿದೆ. ಕೆಲವು ಸ್ಥಳೀಯ ಜಂಟಿ ಉದ್ಯಮಗಳು ಸುಮಾರು 100 ಪರ್ಸೆಂಟ್ ಚೇತರಿಕೆ ಸಾಧಿಸಿವೆ, ಆದರೂ ಹುಬೈ ಅಥವಾ ವುಹಾನ್ ಕೆಲವು ಉದ್ಯೋಗಿಗಳು ಇನ್ನೂ ಪ್ರಯಾಣದ ನಿರ್ಬಂಧದಲ್ಲಿದ್ದಾರೆ.

ಹೋಂಡಾ

ಹೋಂಡಾ

ಜಪಾನಿನ ಕಾರು ತಯಾರಕ ಸಂಸ್ಥೆ ಎರಡು ಚೀನೀ ಉದ್ಯಮಗಳಲ್ಲಿ ತನ್ನ ಸಾಮರ್ಥ್ಯ ಕ್ರಮೇಣ ಚೇತರಿಸಿಕೊಳ್ಳುತ್ತಿದೆ ಮತ್ತು ಚೀನಾದ ಹೊರಗಿನಿಂದ ಪೂರೈಕೆಯಲ್ಲಿನ ಒತ್ತಡದಿಂದಾಗಿ ಅಲ್ಲಿನ ಭಾಗಗಳ ಕೊರತೆಯಿಂದಾಗಿ ಇದುವರೆಗೆ ಅವರಿಗೆ ಸಮಸ್ಯೆಗಳಿಲ್ಲ ಎಂದು ಹೇಳಿದೆ.

ನಿಸ್ಸಾನ್

ನಿಸ್ಸಾನ್

ಚೀನಾದಲ್ಲಿನ ಎಲ್ಲಾ ನಿಸ್ಸಾನ್ ಮೋಟಾರ್ ಕಂ. ಕಾರ್ಖಾನೆಗಳು ಪುನರಾರಂಭಿಸಿವೆ ಮತ್ತು ಉತ್ಪಾದನೆಯು ಸರ್ಕಾರದ ಆದೇಶಗಳಿಗೆ ಹೊಂದಿಕೆಯಾಗಲಿದೆ ಎಂದು ನಿಸ್ಸಾನ್ ಕಂಪನಿ ತಿಳಿಸಿದೆ.

ಟೆಸ್ಲಾ, ಟೊಯೊಟಾ, ವೋಕ್ಸ್‌ವಾಗನ್

ಟೆಸ್ಲಾ, ಟೊಯೊಟಾ, ವೋಕ್ಸ್‌ವಾಗನ್

ಟೆಸ್ಲಾ , ಟೊಯೊಟಾ ಕಂಪನಿ ಸೇರಿದಂತೆ ವೋಕ್ಸ್‌ವಾಗನ್ ಕಾರು ತಯಾರಿಕಾ ಸಂಸ್ಥೆಗಳು ಸಹ ಚೀನಾದಲ್ಲಿ ತನ್ನ ಕಾರು ಉತ್ಪಾದನೆಯನ್ನು ಪುನರ್ ಆರಂಭಿಸಿದೆ ಎಂದು ತಿಳಿಸಿದೆ.

English summary

China Restarts Factories, Rest Of The World Under Lockdown

China is slowly emerging from its shutdowns by restarting production at factories and resuming some flights.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more