For Quick Alerts
ALLOW NOTIFICATIONS  
For Daily Alerts

ಎಂಎಸ್‌ಎಂಇಗಳ ವರ್ಗೀಕರಣ: ಮಾನದಂಡಗಳ ಪರಿಷ್ಕರಣೆಗೆ ಮುಂದಾದ ಆರ್‌ಬಿಐ

|

ನವದೆಹಲಿ: ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಹೊಸ ಮಾನದಂಡಗಳ ಆಧಾರದ ಮೇಲೆ ಮರು ವರ್ಗೀಕರಿಸಲು ರೀಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ), ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳನ್ನು ಕೇಳಿದೆ.

 

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ವರ್ಗೀಕರಣಕ್ಕೆ ಪ್ಲಾಂಟ್ ಮತ್ತು ಯಂತ್ರೋಪಕರಣಗಳಲ್ಲಿನ ಹೂಡಿಕೆಯ ಆಧಾರದ ಮೇಲೆ ಹೊಸ ಮಾನದಂಡಗಳನ್ನು ಸರ್ಕಾರ ಕಳೆದ ತಿಂಗಳು ಅಧಿಸೂಚನೆ ಮೂಲಕ ಆರ್‌ ಬಿ ಐ ಗೆ ತಿಳಿಸಿತ್ತು.

"ಜುಲೈ 1, 2020 ರ ಹೊಸ ನಿಯಮಾವಳಿ ಪ್ರಕಾರ ಎಂಎಸ್‌ಎಂಇ ಕೈಗಾರಿಕೆಗಳ ಮರು ವರ್ಗೀಕರಣಕ್ಕೆ ಅಗತ್ಯವಾದ ಕ್ರಮವನ್ನು ಪ್ರಾರಂಭಿಸಲು ನಾವು ನಿಮಗೆ ಸಲಹೆ ನೀಡುತ್ತೇವೆ ಮತ್ತು ಈ ನಿಟ್ಟಿನಲ್ಲಿ ನಿಮ್ಮ ಶಾಖೆಗಳಿಗೆ / ನಿಯಂತ್ರಣ ಕಚೇರಿಗಳಿಗೆ ಅಗತ್ಯವಾದ ಸೂಚನೆಗಳನ್ನು ನೀಡಿ," ಎಂದು ಆರ್‌ಬಿಐ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ಹೇಳಿದೆ.

ನಿಯಮಾವಳಿ ಪರಿಷ್ಕರಣೆ

ನಿಯಮಾವಳಿ ಪರಿಷ್ಕರಣೆ

2006 ರಲ್ಲಿ ಎಂಎಸ್‌ಎಂಇ ಅಭಿವೃದ್ಧಿ ಕಾಯ್ದೆ ಜಾರಿಗೆ ಬಂದ 14 ವರ್ಷಗಳ ನಂತರ, ಎಂಎಸ್‌ಎಂಇ ನಿಯಮಾವಳಿ ಪರಿಷ್ಕರಣೆಯನ್ನು ಮೇ 13 ರಂದು ಆತ್ಮ ನಿರ್ಭರ ಭಾರತ್ ಅಭಿಯಾನ್ ಪ್ಯಾಕೇಜ್‌ನಲ್ಲಿ ಘೋಷಿಸಲಾಯಿತು.

ಚಾಲ್ತಿಯಲ್ಲಿರುವ ಸ್ಥಿತಿಯನ್ನು ಉಳಿಸಿಕೊಳ್ಳುತ್ತದೆ

ಚಾಲ್ತಿಯಲ್ಲಿರುವ ಸ್ಥಿತಿಯನ್ನು ಉಳಿಸಿಕೊಳ್ಳುತ್ತದೆ

ಪ್ಲಾಂಟ್ ಮತ್ತು ಯಂತ್ರೋಪಕರಣಗಳ ಹೂಡಿಕೆಯ ವಿಷಯದಲ್ಲಿ ಮೇಲ್ಮುಖವಾದ ಬದಲಾವಣೆಯ ಸಂದರ್ಭದಲ್ಲಿ ಮತ್ತು ಅದರ ಮರು-ವರ್ಗೀಕರಣದ ಸಂದರ್ಭದಲ್ಲಿ, ಒಂದು ಉದ್ಯಮವು ವರ್ಷದ ಅಂತ್ಯದಿಂದ ಒಂದು ವರ್ಷದ ಅವಧಿ ಮುಗಿಯುವವರೆಗೆ ತನ್ನ ಚಾಲ್ತಿಯಲ್ಲಿರುವ ಸ್ಥಿತಿಯನ್ನು ಉಳಿಸಿಕೊಳ್ಳುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಪರಿಷ್ಕೃತ ವ್ಯಾಖ್ಯಾನದ ಪ್ರಕಾರ, ಒಂದು ಉದ್ಯಮವು ಸೂಕ್ಷ್ಮವಾಗಿದ್ದು, ಅಲ್ಲಿ ಪ್ಲಾಂಟ್ ಮತ್ತು ಯಂತ್ರೋಪಕರಣಗಳ ಹೂಡಿಕೆ 1 ಕೋಟಿ ರೂ.ಗಿಂತ ಹೆಚ್ಚಿಲ್ಲ ಎಂದಿದೆ.

10 ಕೋಟಿ ರೂ.ಗಿಂತ ಹೆಚ್ಚಿರುವುದಿಲ್ಲ
 

10 ಕೋಟಿ ರೂ.ಗಿಂತ ಹೆಚ್ಚಿರುವುದಿಲ್ಲ

ಒಂದು ಉದ್ಯಮವನ್ನು ಈಗ ಸಣ್ಣ ಉದ್ಯಮ ಎಂದು ವರ್ಗೀಕರಿಸಬೇಕಾದರೆ ಅಲ್ಲಿ ಸ್ಥಾವರ ಮತ್ತು ಯಂತ್ರೋಪಕರಣಗಳು ಅಥವಾ ಸಲಕರಣೆಗಳ ಹೂಡಿಕೆ 10 ಕೋಟಿ ರೂ.ಗಿಂತ ಹೆಚ್ಚಿರುವುದಿಲ್ಲ ಮತ್ತು ವಹಿವಾಟು 50 ಕೋಟಿ ರೂ. ಮೀರುವುದಿಲ್ಲ.

50 ಕೋಟಿ ರೂ.ಗಳನ್ನು ಮೀರಬಾರದು

50 ಕೋಟಿ ರೂ.ಗಳನ್ನು ಮೀರಬಾರದು

ಮಧ್ಯಮ ಉದ್ಯಮಕ್ಕಾಗಿ, ಹೊಸ ವರ್ಗೀಕರಣದ ಪ್ರಕಾರ, ಸ್ಥಾವರ ಮತ್ತು ಯಂತ್ರೋಪಕರಣಗಳ ಅಥವಾ ಸಲಕರಣೆಗಳ ಹೂಡಿಕೆ 50 ಕೋಟಿ ರೂ.ಗಳನ್ನು ಮೀರಬಾರದು ಮತ್ತು ವಹಿವಾಟು 250 ಕೋಟಿ ರೂ.ಗಿಂತ ಕಡಿಮೆಯಿರಬೇಕು.

English summary

Classification of MSMEs: RBI Takes Initiative For The Standardization

Classification of MSMEs: RBI Takes Initiative For The Standardization
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X