For Quick Alerts
ALLOW NOTIFICATIONS  
For Daily Alerts

ಆರ್ಥಿಕ ಸಂಕಷ್ಟದಿಂದ ಬಾಗಿಲು ಮುಚ್ಚಿದ ಸಿದ್ದಾರ್ಥ್ ಹೆಗ್ಡೆ ಒಡೆತನದ ಡ್ಯಾಫ್ಕೊ

|

ದೇಶಾದ್ಯಂತ ಅಷ್ಟೇ ಅಲ್ಲದೆ ವಿದೇಶದಲ್ಲಿ ಹೆಸರು ಮಾಡಿದ್ದ ಕಾಫಿ ಡೇ ಕಂಪನಿ ಸಂಸ್ಥಾಪಕ ದಿವಂಗತ ಸಿದ್ದಾರ್ಥ್ ಹೆಗ್ಡೆ ಒಡೆತನದ ಪೀಠೋಪಕರಣ ತಯಾರಿಕಾ ಕಂಪನಿ ಡ್ಯಾಫ್ಕೊ(DAFFC0) ಸೋಮವಾರ ಬಾಗಿಲು ಮುಚ್ಚಿದೆ. ಚಿಕ್ಕಮಗಳೂರಿನ ಕೆ.ಎಂ. ರಸ್ತೆಯಲ್ಲಿದ್ದ ಡ್ಯಾಫ್ಕೊ(ಡಾರ್ಕ್ ಫಾರೆಸ್ಟ್ ಫರ್ನಿಚರ್ ಕಂಪನಿ) ಕಚೇರಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ಬಾಗಿಲು ಎಳೆದಿದೆ.

 

ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿದ್ದ ಸಿದ್ದಾರ್ಥ್ ಹೆಗ್ಡೆ ಒಡೆತನದ ಡ್ಯಾಫ್ಕೊ, ಚಿಕ್ಕಮಗಳೂರಿನ ಕೆ.ಎಂ. ರಸ್ತೆ ರಸ್ತೆಯಲ್ಲಿರುವ ಎಬಿಸಿ ಕಂಪನಿ ಆವರಣದಲ್ಲಿತ್ತು. ದೇಶದೆಲ್ಲೆಡೆ ಇದ್ದ ಕಾಫಿ ಡೇಗಳಿಗೆ ಇಲ್ಲಿಂದಲೇ ಪೀಠೋಪಕರಣಗಳು ಸರಬರಾಜು ಆಗುತ್ತಿದ್ದವು.

ಆರ್ಥಿಕ ಸಂಕಷ್ಟ: ಬಾಗಿಲು ಮುಚ್ಚಿದ ಸಿದ್ದಾರ್ಥ್ ಒಡೆತನದ ಡ್ಯಾಫ್ಕೊ

ಮೊದಲೇ ಆರ್ಥಿಕ ನಷ್ಟಕ್ಕೆ ತುತ್ತಾಗಿದ್ದ ಡ್ಯಾಫ್ಕೊ, ಸಿದ್ದಾರ್ಥ್ ಹೆಗ್ಡೆ ಮರಣದ ನಂತರ ಮತ್ತಷ್ಟು ಸಂಕಷ್ಟಕ್ಕೆ ತುತ್ತಾಯಿತು. ಅದರ ಅಭಿವೃದ್ಧಿಗೆ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನವೆಂಬರ್ 25(ಸೋಮವಾರ) ಡ್ಯಾಫ್ಕೊ ಘಟಕದ ಎಲ್ಲಾ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಕಂಪನಿ ಗೇಟ್ ಬಳಿ ಅಂಟಿಸಲಾದ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಪ್ರತಿದಿನದಂತೆ ಕೆಲಸಕ್ಕೆಂದು ಬಂದ ಕಾರ್ಮಿಕರು ನೋಟಿಸ್ ನೋಡಿ ಕಂಗಾಲಾಗಿದ್ದಾರೆ. ಸುಮಾರು 60 ಜನರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

English summary

Coffee Day Owned Daffco Shuts Operations In Karnataka

Coffee day owned wood processing unit DAFFCO shuts operations in Karnataka with immediate effect after financial crisis
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X