For Quick Alerts
ALLOW NOTIFICATIONS  
For Daily Alerts

"ಸರ್ಕಾರದ ವೈಫಲ್ಯಗಳು ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ನಲ್ಲಿ ಕೇಸ್ ಸ್ಟಡಿಗಳಾಗಬಹುದು"

|

ಈಗಿನ ಕೇಂದ್ರ ಸರ್ಕಾರವು ಕೊರೊನಾ ನಿರ್ವಹಣೆಯಲ್ಲಿ ಹೇಗೆ ವೈಫಲ್ಯವನ್ನು ಕಂಡಿದೆ ಎಂಬ ಬಗ್ಗೆ ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ನಲ್ಲಿ ಭವಿಷ್ಯದಲ್ಲಿ ಕೇಸ್ ಸ್ಟಡಿಗಳು ಇರಲಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಲೇವಡಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ಹಿಂದಿನ ವಿಡಿಯೋ ಕ್ಲಿಪ್ ಗಳನ್ನು ಪ್ರಸ್ತಾವಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್- 19 ಬಿಕ್ಕಟ್ಟಿನ ಬಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮಹಾಭಾರತ ಯುದ್ಧವನ್ನು 18 ದಿನದಲ್ಲಿ ಗೆಲ್ಲಲಾಯಿತು. ಕೊರೊನಾ ವಿರುದ್ಧದ ಯುದ್ಧಕ್ಕೆ 21 ದಿನ ಆಗುತ್ತದೆ ಎಂದು ಹೇಳಿದ್ದರು. ಆ ವಿಡಿಯೋ ಕ್ಲಿಪ್ಪಿಂಗ್ ಅನ್ನು ರಾಹುಲ್ ಗಾಂಧಿ ಪ್ರದರ್ಶಿಸಿದ್ದಾರೆ.

 

ಇನ್ನು ಕ್ಲಿಪ್ಪಿಂಗ್ ನಲ್ಲಿ ದೇಶದಲ್ಲಿ ಹೇಗೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಾ, ಜಗತ್ತಿನಲ್ಲೇ ಮೂರನೇ ಅತಿ ಹೆಚ್ಚು ಕೊರೊನಾ ಬಾಧಿತರು ಒಳಗೊಂಡ ದೇಶವನ್ನಾಗಿ ಹೇಗೆ ಮಾಡಿತು ಎಂಬ ಗ್ರಾಫ್ ಕೂಡ ಪ್ರದರ್ಶಿಸಲಾಯಿತು. ಭವಿಷ್ಯದಲ್ಲಿ ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ನಲ್ಲಿ ವೈಫಲ್ಯಗಳ ಕುರಿತು ಮೂರು ಕೇಸ್ ಸ್ಟಡಿಗಳು ಇರಬಹುದು: 1 ಕೋವಿಡ್ 19, 2. ಅಪನಗದೀಕರಣ ಹಾಗೂ 3. ಜಿಎಸ್ ಟಿ ಜಾರಿ ಎಂದು ಕ್ಲಿಪ್ ಜತೆಗೆ ಟ್ವೀಟ್ ಮಾಡಿದ್ದಾರೆ.

ವಿಶ್ವದಲ್ಲೇ ಕೊರೊನಾ ಬಾಧಿತ ದೇಶಗಳ ಪಟ್ಟಿಯಲ್ಲಿ ರಷ್ಯಾವನ್ನು ಹಿಂದಿಕ್ಕಿ ಭಾರತ ಮೂರನೇ ಸ್ಥಾನಕ್ಕೆ ಏರಿದ ನಂತರ ರಾಹುಲ್ ಗಾಂಧಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಈಗ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿ ಬ್ರೆಜಿಲ್ ಮತ್ತು ಯು.ಎಸ್. ಮಾತ್ರ ಇದೆ.

English summary

Congress Leader Rahul Gandhi Lashes Out Government On Handling COVID 19 Situation

COVID- 19, Demonetisation and GST implementation case studies for failures to future Harvard Business School, said Congress leader Rahul Gandhi.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more