For Quick Alerts
ALLOW NOTIFICATIONS  
For Daily Alerts

ಸರ್ಕಾರಕ್ಕೂ ಆದಾಯಕ್ಕೂ ಕೊರೊನಾ ಕಾಟ:ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹ 70% ಕುಸಿತ

|

ದೇಶಾದ್ಯಂತ ಲಾಕ್‌ಡೌನ್‌ ಕಾರಣ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಆದಾಗ್ಯೂ, ಲಾಕ್‌ಡೌನ್‌ನ ನಾಲ್ಕನೇ ಹಂತದಲ್ಲಿ ಭಾಗಶಃ ವಿಶ್ರಾಂತಿ ಇದೆ. ಆದರೆ, ಜಿಎಸ್‌ಟಿ ಸಂಗ್ರಹದ ಮೇಲೆ ಅದರ ಪರಿಣಾಮ ಕಂಡುಬಂದಿಲ್ಲ. ದೇಶದ ಪ್ರತಿಯೊಂದು ವ್ಯವಹಾರದ ಮೇಲೆ ಪ್ರಭಾವ ಬೀರಿರುವಂತೆ ಕೊರೊನಾವೈರಸ್ ಸರ್ಕಾರದ ಆದಾಯಕ್ಕೂ ಅಡ್ಡಗಾಲಿಟ್ಟಿದೆ.

ಲಾಕ್‌ಡೌನ್‌ ಹಿನ್ನಲೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಈ ವರ್ಷದ ಏಪ್ರಿಲ್‌ನಲ್ಲಿ ಕುಸಿದಿದೆ. ಸಿಜಿಎ ಬಿಡುಗಡೆ ಮಾಡಿದ ಅಂಕಿ ಅಂಶಗಳು ಜಿಎಸ್‌ಟಿ ಸಂಗ್ರಹವು ಏಪ್ರಿಲ್‌ನಲ್ಲಿ 70 ಪರ್ಸೆಂಟ್‌ರಷ್ಟು ಕುಸಿದಿದೆ ಎಂದು ತೋರಿಸಿದೆ.

ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹ 70% ಕುಸಿತ

ಏಪ್ರಿಲ್ 2020 ಕ್ಕೆ ಬಿಡುಗಡೆಯಾದ ಈ ಮಾಹಿತಿಯು ಈ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಕೇಂದ್ರದ ಪಾಲು 16,707 ಕೋಟಿ ರುಪಾಯಿಗಳಾಗಿದ್ದು, ಇದು ಹಿಂದಿನ ವರ್ಷದ 55,329 ಕೋಟಿ ರುಪಾಯಿಗಳಿಗಿಂತ 70% ಕಡಿಮೆಯಾಗಿದೆ ಎಂದು ತೋರಿಸುತ್ತದೆ. ಸಾಮಾನ್ಯವಾಗಿ ಸರ್ಕಾರ ಘೋಷಿಸುವ ಜಿಎಸ್‌ಟಿ ಕೇಂದ್ರ ಮತ್ತು ರಾಜ್ಯಗಳ ಸಂಗ್ರಹವನ್ನು ಒಳಗೊಂಡಿದೆ. ಆದಾಗ್ಯೂ, ಸಿಜಿಎ ದತ್ತಾಂಶವು ಜಿಎಸ್‌ಟಿ ಸಂಗ್ರಹದ ಕೇಂದ್ರದ ಪಾಲನ್ನು ಮಾತ್ರ ತೋರಿಸಿದೆ. ಇದಕ್ಕೂ ಮೊದಲು 2019 ರ ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಕೇಂದ್ರ ಮತ್ತು ರಾಜ್ಯಗಳ ಪಾಲು 1,13,865 ಕೋಟಿ ರುಪಾಯಿ.

2020 ರ ಏಪ್ರಿಲ್‌ನಲ್ಲಿ ಕೇಂದ್ರದ ಜಿಎಸ್‌ಟಿ ಸಂಖ್ಯೆಯನ್ನು (16,707 ಕೋಟಿ ರು.) ಅಂದಾಜು ಮಾಡಿದರೆ, ಒಟ್ಟು ಜಿಎಸ್‌ಟಿ ಸಂಗ್ರಹ (ಕೇಂದ್ರ ಮತ್ತು ರಾಜ್ಯ) ಸುಮಾರು 34,300 ಕೋಟಿ ರುಪಾಯಿ. ಏಪ್ರಿಲ್ 2020 ರಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಇಷ್ಟು ದೊಡ್ಡ ಕುಸಿತವು ಕೊರೊನಾವೈರಸ್ ಸಾಂಕ್ರಾಮಿಕದಿಂದಾಗಿ ಹೇರಿದ ಲಾಕ್ ಡೌನ್ ಕಾರಣ ಎಂದು ಊಹಿಸಲಾಗಿದೆ.

ಕೊರೊನಾವೈರಸ್ ಹರಡುವಿಕೆಯ ದೃಷ್ಟಿಯಿಂದ ತೆರಿಗೆದಾರರ ಮೇಲಿನ ಹೊರೆ ಕಡಿಮೆ ಮಾಡಲು ಮಾರ್ಚ್ 24 ರಂದು ಸರ್ಕಾರ ಹಲವಾರು ಘೋಷಣೆಗಳನ್ನು ಮಾಡಿತು. ಐದು ಕೋಟಿ ರುಪಾಯಿಗಳಿಗಿಂತ ಕಡಿಮೆ ವಹಿವಾಟು ನಡೆಸುವ ಕಂಪನಿಗಳು, ಜಿಎಸ್‌ಟಿ ತಡವಾಗಿ ಸಲ್ಲಿಸಲು ಸಹ ಯಾವುದೇ ವಿಳಂಬ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಪ್ರಕಟಣೆಗಳಲ್ಲಿ ತಿಳಿಸಲಾಗಿದೆ. ಅಲ್ಲದೆ, ಅವರ ಮೇಲೆ ಯಾವುದೇ ದಂಡ ವಿಧಿಸಲಾಗುವುದಿಲ್ಲ. ಐದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರು ಜೂನ್ ಕೊನೆಯ ವಾರದವರೆಗೆ ರಿಟರ್ನ್ಸ್ ಸಲ್ಲಿಸಬಹುದು. ಆದಾಗ್ಯೂ 9% ಬಡ್ಡಿದರವನ್ನು ಪಾವತಿಸಬೇಕಾಗುತ್ತದೆ.

English summary

Corona Impact GST Collections Down 70 Percent In April

GST collections have seen a precipitous drop of up to 70 per cent in April.
Story first published: Saturday, May 30, 2020, 14:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X